Dhruvasarja: ದುಬಾರಿಗೂ ಮುನ್ನವೇ ಸಿಹಿಸುದ್ದಿ ಕೊಟ್ಟ ಧ್ರುವ್ ಸರ್ಜಾ…! ಮತ್ತೆ ಮೋಡಿ ಮಾಡಲಿದೆ ಅದ್ದೂರಿ ಜೋಡಿ…!!

ಸಾಕಷ್ಟು ವಿಶೇಷತೆಗಳೊಂದಿಗೆ ಸೆಟ್ಟೇರಿದ್ದ ದುಬಾರಿ ಸಿನಿಮಾಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇದೆ. ದುಬಾರಿ ಸಿನಿಮಾದಿಂದ ನಿರ್ದೇಶಕ ನಂದಕಿಶೋಶ್ ದೂರ ಸರಿದ ಬೆನ್ನಲ್ಲೇ ನಟ ಧ್ರುವ್ ಸರ್ಜಾ ಕೂಡಾ ದುಬಾರಿ ಸಿನಿಮಾ ಬದಿಗಿಟ್ಟು ಬೇರೆ ಚಿತ್ರಕ್ಕೆ ಸಿದ್ಧವಾಗಿದ್ದಾರೆ.

ಧ್ರುವ್ ಸರ್ಜಾರನ್ನು ಮೊದಲನೇ ಸಿನಿಮಾದಲ್ಲೇ ಸ್ಟಾರ್ ಎನ್ನಿಸಿದ ನಿರ್ದೇಶಕ ಎ.ಪಿ.ಅರ್ಜುನ್ ಗೆ ಮತ್ತೊಮ್ಮೆ ಧ್ರುವ್ ಸರ್ಜಾ ಜೊತೆಯಾಗಿದ್ದು, ನಾಳೆ ಹೊಸ ಸಿನಿಮಾದ ಮುಹೂರ್ತ ನಡೆಯಲಿದೆ.

ಎ.ಪಿ.ಅರ್ಜುನ್ ನಿರ್ದೇಶನದ ಅದ್ದೂರಿ ಸಿನಿಮಾದ ಮೂಲಕವೇ ಧ್ರುವ್ ಸರ್ಜಾ ಸ್ಯಾಂಡಲ್ ವುಡ್ ಗೆ ಹಿರೋ ಆಗಿ ಎಂಟ್ರಿಕೊಟ್ಟಿದ್ದರು. ಇದೇ ನಿರ್ದೇಶಕರ ಇನ್ನೊಂದು ಸಿನಿಮಾಗೆ ಧ್ರುವ್ ಸರ್ಜಾ ಸಿದ್ಧವಾಗಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಬೇಕಿದ್ದು, ಅಗಸ್ಟ್ ನಿಂದ ಶೂಟಿಂಗ್ ಆರಂಭವಾಗಲಿದೆ.

ನಿರ್ಮಾಪಕ ಉದಯ ಮೆಹ್ತಾ ಧ್ರುವ್ ಸರ್ಜಾಗಾಗಿ ಈ ಸಿನಿಮಾ ನಿರ್ಮಿಸುತ್ತಿದ್ದು, ಜುಲೈ 7 ರಂದು ಚಿತ್ರತಂಡ ಟೈಟಲ್ ಘೋಷಿಸಲಿದ್ದು, ನಾಯಕಿ ಯಾರು ಎಂಬ ಕುತೂಹಲ ಮನೆಮಾಡಿದೆ.

ಕಿಸ್ ಚಿತ್ರದ ಬಳಿಕ ಯಾವುದೇ ಚಿತ್ರ ನಿರ್ದೇಶನಕ್ಕೂ ಕೈಹಾಕದ ಎ.ಪಿ.ಅರ್ಜುನ್ ಈಗ ಮತ್ತೊಮ್ಮೆ ಧ್ರುವ್ ಸರ್ಜಾಗೆ ಆಕ್ಷ್ಯನ್ ಕಟ್ ಹೇಳಲಿದ್ದು, 2012 ರಲ್ಲಿ ಮೋಡಿ ಮಾಡಿದ ಈ ಜೋಡಿ ಮತ್ತೆ ಮೋಡಿ ಮಾಡಲಿದೆ ಅನ್ನೋ ನೀರಿಕ್ಷೆಯಲ್ಲಿದ್ದಾರೆ ಪ್ರೇಕ್ಷಕರು.

Comments are closed.