ನಾಪತ್ತೆಯಾಗಿದ್ದ ರಷ್ಯಾ ವಿಮಾನ ಅಪಘಾತ : 28 ಮಂದಿ ಪ್ರಯಾಣಿಕರ ದುರ್ಮರಣ

ಮಾಸ್ಕೋ : ರಷ್ಯಾದಲ್ಲಿ ನಾಪತ್ತೆಯಾಗಿದ್ದ ವಿಮಾನದ ವಿಮಾನದ ಅವಶೇಷ ಪತ್ತೆಯಾಗಿದ್ದು, ವಿಮಾನದಲ್ಲಿ ಇದ್ದ 28  ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ರಷ್ಯಾದ AN26 ವಿಮಾನ ರಷ್ಯಾದ ಪೂರ್ವ ವಲಯದ ಕಮ್ಚಟ್ಕಾ ಪೆನೆನ್ಸುಲಾದಿಂದ ಪಲಾನಾ ಕಡೆಗೆ ತೆರಳಿತ್ತು. ಆದರೆ ವಿಮಾನ ಲ್ಯಾಂಡಿಗ್ ವೇಳೆಯಲ್ಲಿ ಸಂಪರ್ಕ ಕಡಿತಗೊಂಡಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು.

ಇದೀಗ ನಾಪತ್ತೆಯಾಗಿರುವ ವಿಮಾನವು ವಿಮಾನ ನಿಲ್ದಾಣದಿಂದ ಸುಮಾರು 5 ಕಿ.ಮೀ.‌ ದೂರದಲ್ಲಿರುವ ಒಕೋಸ್ಕ್‌ ಸಮುದ್ರ ತೀರದಲ್ಲಿ ಪತನವಾಗಿದ್ದು, ವಿಮಾನದ ಅವಶೇಷಗಳು ಪತ್ತೆಯಾಗಿದೆ. ವಿಮಾನ ದಲ್ಲಿ ಒಟ್ಟು 22 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳು ಇದ್ದರು ಎಂದು ತಿಳಿದುಬಂದಿದೆ.

ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ದಟ್ಟ ಮಂಜಿನ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿತ್ತು ಎಂದು ಹೇಳಲಾಗಿತ್ತು‌. ಆದರೆ ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವಿಮಾನದ ಬ್ಲ್ಯಾಕ್ ಬಾಕ್ಸ್ ಪರಿಶೀಲನೆಯ ನಂತರವೇ ನಿಖರ ಕಾರಣ ತಿಳಿದು ಬರಬೇಕಾಗಿದೆ. ರಷ್ಯಾದಲ್ಲಿ 2019ರಲ್ಲಿ ನಡೆದಿದ್ದ ವಿಮಾನ ಅಪಘಾತದಲ್ಲಿ 41 ಮಂದಿ ಸಾವನ್ನಪ್ಪಿದರು. ‌ಇದೀಗ ಮತ್ತೊಂದು ವಿಮಾನ ದುರಂತ ಸಂಭವಿಸಿದೆ.

Comments are closed.