ಧ್ರುವ್ ಸರ್ಜಾ ಮನೆಯಲ್ಲೂ ಪೊಗರು ಹವಾ…! ಚಿಕ್ಕಪ್ಪನ ಖರಾಬು ಹಾಡಿಗೆ ಜ್ಯೂನಿಯರ್ ಚಿರು ಫಿದಾ…!!

 ಕೊರೋನಾ ಬಳಿಕ ರಿಲೀಸ್ ಆದ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಪೊಗರು ಚಿತ್ರ ರಾಜ್ಯದ ಸಿನಿಪ್ರೇಕ್ಷಕರಲ್ಲಿ ಹೊಸ ಸಂಚಲನಮಾಡಿದೆ. ವಿವಾದದ ಬಳಿಕವೂ ಪ್ರೇಕ್ಷಕರನ್ನು ಸೆಳೆದ ಪೊಗರು ಹವಾದಿಂದ ಸರ್ಜಾ ಮನೆಯೂ ಹೊರತಾಗಿಲ್ಲ. ಧ್ರುವ್ ಸರ್ಜಾನ ಪೊಗರಿನ ಖರಾಬು ಹಾಡಿಗೆ ಜ್ಯೂನಿಯರ್ ಚಿರು ಕೂಡ ತಲೆತೂಗಿದ್ದಾನೆ.

ಪೊಗರಿನ ಹೀರೋ ಧ್ರುವ್ ಸರ್ಜಾ ತೊಡೆ ಮೇಲೆ ಕೂತ ಜ್ಯೂನಿಯರ್ ಚಿರು ಖರಾಬು ಹಾಡಿನ ಟ್ಯೂನ್ ತೆ ತಲೆ ತೂಗಿ, ಕುಣಿದಾಡಿದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಧ್ರುವ್ ಸರ್ಜಾ ಹಾಗೂ ಅವರ ತಾಯಿ ಜೊತೆ ಜ್ಯೂನಿಯರ್ ಚಿರು ಖರಾಬು ಸಾಂಗ್ ನ್ನು ಎಂಜಾಯ್ ಮಾಡ್ತಿರೋ ವಿಡಿಯೋಕ್ಕೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಖರಾಬು ಹಾಡಿನ ಸಾಹಿತ್ಯ, ಟ್ಯೂನ್,ಮ್ಯೂಸಿಕ್ ಎಲ್ಲವೂ ಮುದುಕರಿಂದ ಹಿಡಿದು ಮಕ್ಕಳ ತನಕ ಎಲ್ಲರನ್ನೂ ಸೆಳೆದಿದೆ. ಇದಕ್ಕೆ ಜ್ಯೂನಿಯರ್ ಚಿರು ಕೂಡ ಹೊರತಲ್ಲ ಅನ್ನೋದು ಈ ವಿಡಿಯೋದಿಂದ ಸಾಬೀತಾಗಿದೆ. ಪೊಗರು ಸಿನಿಮಾ ರೀಲಿಸ್ ಬಳಿಕ ಪತ್ನಿ ಪ್ರೇರಣಾ ಜೊತೆ ಗೋವಾಕ್ಕೆ ತೆರಳಿದ್ದ ಧ್ರುವ್ ಸರ್ಜಾ ಅಲ್ಲಿಂದ ಹಿಂತಿರುಗಿದ ಬಳಿಕ ಅಣ್ಣನ ಮಗನ ಜೊತೆ ಸಮಯ ಕಳೆಯುತ್ತಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಖರಾಬು ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೀವ್ಸ್ ಪಡೆದುಕೊಂಡಿದ್ದು, ತೆಲುಗು ಖರಾಬು ಹಾಡು ಕೂಡ ದಾಖಲೆ ಬರೆದಿತ್ತು. ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾಗಾಗಿ ಧ್ರುವ್ ಸರ್ಜಾ ಸಖತ್ ವರ್ಕೌಟ್ ಮಾಡಿದ್ದು,ಮೂರು ವರ್ಷಗಳ ಕಾಲ ಶ್ರಮಿಸಿದ್ದರು.

ಆದರೆ ಸಿನಿಮಾ ರಿಲೀಸ್ ಆದ ಬಳಿಕ ಅಭಿಮಾನಿಗಳ ಮನಗೆದ್ದಿತ್ತಾದರೂ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕೊನೆಗೆ ನಟ ಧ್ರುವ್ ಸರ್ಜಾ ಹಾಗೂ ಚಿತ್ರತಂಡ ಬ್ರಾಹ್ಮಣರ ಕ್ಷಮೆಯಾಚಿಸಿ ಸೀನ್ ಕಟ್ ಮಾಡಿತ್ತು.

Comments are closed.