ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳ ಎದೆಬಡಿತ ಹೆಚ್ಚಿಸುವಂತ ಸುದ್ದಿ ಸಿಸಿಬಿ ಅಂಗಳದಿಂದ ಹೊರಬಿದ್ದಿದೆ. ತನಿಖಾ ಹಂತದಲ್ಲಿರುವ ಪ್ರಕರಣದ ಕುರಿತು ಸಿಸಿಬಿ ನ್ಯಾಯಾಲಯಕ್ಕೆ ಬರೋಬ್ಬರಿ 2900 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

ಎನ್ ಡಿಪಿಎಸ್ ನ್ಯಾಯಾಲಯಕ್ಕೆ ಸಿಸಿಬಿ ತನಿಖಾಧಿಕಾರಿಗಳು ಒಟ್ಟು 2900 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್ 25 ಆರೋಪಿಗಳ ವಿರುದ್ಧ 180 ಸಾಕ್ಷಿಗಳ ಹೇಳಿಕೆ ಆಧರಿಸಿದೆ. 5 ವಾಲ್ಯೂಮ್ ಗಳ ಈ ಚಾರ್ಜಶೀಟ್ ಪ್ರಕರಣದ ಆರೋಪಿಗಳಿಗೆ ಮತ್ತೆ ಜೈಲಿನ ಹಾದಿ ತೋರಿಸಲಿದೆ ಎನ್ನಲಾಗುತ್ತಿದೆ.

ನಟಿ ರಾಗಿಣಿ ದಿವೇದಿ, ಸಂಜನಾ ಗಲ್ರಾನಿ, ರಾಹುಲ್ ,ವಿರೇನ್ ಖನ್ನಾ, ಶಿವಪ್ರಕಾಶ್ ಚಿಪ್ಪಿ ಸೇರಿದಂತೆ ದಕ್ಷಿಣ ಆಫ್ರಿಕಾ ಮೂಲದ ನಾಲ್ಕು ಆರೋಪಿಗಳ ವಿರುದ್ಧ ಚಾರ್ಜಶೀಟ್ ಸಲ್ಲಿಕೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳ ಬಂಧನ ಬಾಕಿ ಇದೆ. ಪ್ರಕರಣದಲ್ಲಿ ಬಂಧಿತರಾದ ಆರೋಪಿ ಗಳ ಹೇಳಿಕೆಯೇ ಪ್ರಮುಖ ಸಾಕ್ಷಿ ಎನ್ನಲಾಗಿದ್ದು, ಡ್ರಗ್ಸ್ ಸೇವನೆ ಜೊತೆಗೆ ಪೆಂಡ್ಲಿಂಗ್ ಮಾಡಿದ್ದು, ದಂಧೇಕೋರರಿಗೆ ಆಶ್ರಯ ಹಾಗೂ ಹಣ ಸಹಾಯ ನೀಡಿದ ಹಲವರ ವಿವರವನ್ನು ಚಾರ್ಜ್ ಶೀಟ್ ಉಲ್ಲೇಖಿಸಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ಸಂಜನಾ,ರಾಗಿಣಿ ಸೇರಿದಂತೆ ಆರೋಪಿಗಳ ಎದೆಯಲ್ಲಿನಡುಕ ಶುರುವಾಗಿದೆ.

ಸ್ಯಾಂಡಲ್ ವುಡ್ ಬೆಚ್ಚಿ ಬೀಳಿಸಿದ್ದ ಈ ಹೈಪ್ರೊಫೈಲ್ ಡ್ರಗ್ಸ್ ಕೇಸ್ ಇದೀಗ ಮತ್ತೊಮ್ಮೆ ಬೇಲ್ ಪಡೆದು ಹೊರಗಡೆ ಬಂದಿರೋ ಟೆನ್ಸನ್ ಹೆಚ್ಷಿಸಿದ್ದು ಸಧ್ಯದಲ್ಲೇ ಹಿಯರಿಂಗ್ ಆರಂಭವಾಗೋ ಸಾಧ್ಯತೆ ಇದೆ.