ಟೀಸರ್ ಗೂ‌ ಮೊದಲೇ ಬಂತು ಪೇಪರ್…! ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ಟೈಮ್ಸ್ ಹವಾ…!!

ಕೆಜಿಎಫ್-೨ ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯಲು ಒಂದೊಂದೆ ಅಸ್ತ್ರಗಳನ್ನು ತೂರಿಬಿಡುತ್ತಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆಗೆ ಕಾತುರರಾಗಿದ್ದಾರೆ. ಬೆಳಗ್ಗೆ ಚಿತ್ರದ ನಾಯಕ ನ ಮತ್ತೊಂದು ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ, ಈಗ ಪತ್ರಿಕೆ ಬಿಡುಗಡೆ ಮಾಡಿದೆ.

ಅರೇ ಇದೇನು ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಪೇಪರ್ ಆರಂಭಿಸಿದ್ಯಾ ಅಂತ ಅಂದ್ಕೋಬೇಡಿ, ಚಿತ್ರತಂಡ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರೋದು ಸಿನಿಮಾ ಪ್ರಮೋಶನ್ ಗೆ.

https://twitter.com/prashanth_neel/status/1346029622362656774?s=19

ಕೆಜಿಎಫ್-೨ ಚಿತ್ರದ ಪ್ರಮೋಶನ್ ಗಾಗಿ ಫಿಲ್ಮಂ ಟೀಂ, ಕೆಜಿಎಫ್ ಟೈಮ್ಸ್ ಹೆಸರಿನಲ್ಲಿ ಹಳೆಕಾಲದ ಪತ್ರಿಕೆ ಹೋಲುವ ಪತ್ರಿಕೆಯನ್ನು ಕನ್ನಡ,ಇಂಗ್ಲೀಷ್, ತೆಲುಗು,ತಮಿಳು,ಮಲಯಾಳಂ ಜೊತೆಗೆ ಹಿಂದಿ ಭಾಷೆಯಲ್ಲೂ ಬಿಡುಗಡೆ ಮಾಡಲಾಗಿದೆ.

ಪತ್ರಿಕೆಗಳಂತೆ ಹೆಡ್ಡಿಂಗ್ ಜೊತೆ ಕೆಜಿಎಫ್-೨ ಸ್ಟೋರಿ ಮುದ್ರಿಸಲಾಗಿದ್ದು, ನಾಯಕನಾ ಅಥವಾ ಖಳನಾಯಕನಾ ಎಂದು ಪ್ರಶ್ನಿಸುವ ಟೈಟಲ್ ನೀಡಲಾಗಿದೆ.

ಅಲ್ಲದೇ ಪತ್ರಿಕೆಯಂತೆ ಅಲ್ಲಲ್ಲಿ ಸುದ್ದಿಗಳನ್ನು ಮುದ್ರಿಸಲಾಗಿದ್ದು ಎಲ್ಲವೂ ರಾಖಿಗೆ ಸಂಬಂಧಿಸಿದ ಸುದ್ದಿಗಳೇ ಆಗಿದ್ದು ಮೇಲ್ಭಾಗದ ಬಲ ತುದಿಯಲ್ಲಿ ಕೊನೆಯ ಆವೃತ್ತಿ ಎಂದು ನಮೂದಿಸಲಾಗಿದೆ.


ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಅಂಗವಾಗಿ ಕೆಜಿಎಫ್-೨ ಚಿತ್ರದ ಟೀಸರ್ ರಿಲೀಸ್ ಆಗಲಿದ್ದು ಇದಕ್ಕೂ ಮುನ್ನವೇ ಚಿತ್ರತಂಡ ರಿಲೀಸ್ ಮಾಡಿರುವ ಈ ಪೇಪರ್ ಕಟಿಂಗ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.


ಫೇಸ್ ಬುಕ್,ಟ್ವೀಟರ್ ಹಾಗೂ ಇನ್ ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಈ ಪೇಪರ್ ಕಟಿಂಗ್ಸ್ ವೈರಲ್ ಆಗಿದೆ.

ಪ್ರಶಾಂತ್ ನೀಲ್ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಈ ಕಪ್ಪು ಅಕ್ಷರದ ಹಳದಿ ಬಣ್ಣದ ಪೇಪರ್ ಕೆಜಿಎಫ್ ಟೈಮ್ಸ್ ಪ್ರಕಟಿಸುವ ಮೂಲಕ ಚಿತ್ರದ ಪ್ರಮೋಶನ್ ಗೆ ತಂಡ ಎಷ್ಟು ವಿಭಿನ್ನವಾಗಿ ಪರಿಶ್ರಮಿಸುತ್ತಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

Comments are closed.