T20 World Cup 2021 : ಒಂದೇ ಗುಂಪಿನಲ್ಲಿ ಭಾರತ- ಪಾಕ್‌ : ಟಿ 20 ವಿಶ್ವಕಪ್‌ನಲ್ಲ ಬದ್ದ ವೈರಿಗಳ ಕಾದಾಟ

ಟಿ 20 ವಿಶ್ವಕಪ್‌ಗೆ ಪಂದ್ಯಾವಳಿಯ ವೇಳಾಪಟ್ಟಿ ಇನ್ನೂ ಫಿಕ್ಸ್‌ ಆಗಿಲ್ಲ. ಆದ್ರೀಗ ಐಸಿಸಿ ಟಿ 20 ವಿಶ್ವಕಪ್‌ 2021 ರ ತಂಡಗಳ ಗುಂಪುಗಳನ್ನು ಘೋಷಣೆ ಮಾಡಿದೆ. ಬದ್ದ ವೈರಿ ಪಾಕಿಸ್ತಾನ ಹಾಗೂ ಭಾರತ ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿವೆ.

ಬಿಸಿಸಿಐ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2021 ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಯುಎಇ ಮತ್ತು ಒಮಾನ್‌ಗೆ ಶಿಫ್ಟ್‌ ಆಗಿದೆ. ವಿಶ್ವಕಪ್‌ ಪಂದ್ಯಾವಳಿಯ ಸೂಪರ್‌ 12ರ ಹಂತದಲ್ಲಿ ಒಟ್ಟು 8 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಕ್ವಾಲಿಫೈಯರ್‌ ಹಂತ ದಲ್ಲಿ ಎರಡು ಗುಂಪುಗಳಿಂದ ತಲಾ ಎರಡೆರಡು ತಂಡಗಳು ಸೂಪರ್‌ 12ರ ಗುಂಪಿನಲ್ಲಿ ಸ್ಥಾನವನ್ನು ಪಡೆಯಲಿದೆ. ಕ್ವಾಲಿಫೈಯರ್‌ ಪಂದ್ಯಾವಳಿ ಮುಕ್ತಾಯದ ನಂತರ ವಿಶ್ವಕಪ್‌ ಪಂದ್ಯಾವಳಿ ಆರಂಭ ವಾಗಲಿದೆ.

ಇಂಗ್ಲೆಂಡ್‌, ಆಸ್ಟ್ರೇಲಿಯಾ, ಸೌತ್‌ಆಫ್ರಿಕ, ವೆಸ್ಟ್‌ ಇಂಡಿಸ್‌ ತಂಡಗಳು ಎ ಗುಂಪಿನಲ್ಲಿ ಹಾಗೂ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್‌, ಅಪ್ಘಾನಿಸ್ತಾನ ತಂಡಗಳು ಬಿ ಗುಂಪಿನಲ್ಲಿ ಕಾಣಿಸಿಕೊಂಡಿವೆ. ಆದರೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಅರ್ಹತಾ ಪಂದ್ಯಾವಳಿಯ ಮೂಲಕ ವಿಶ್ವಕಪ್‌ ಗೆ ಅರ್ಹತೆ ಯನ್ನು ಗಿಟಿಸಿಕೊಳ್ಳಬೇಕಾಗಿದೆ. ಅರ್ಹತಾ ಪಂದ್ಯಾವಳಿಯಲ್ಲಿ ಶ್ರೀಲಂಕಾ, ಐರ್ಲೆಂಡ್‌, ನೆದರ್ಲ್ಯಾಂಡ್‌, ನಮೀಬಿಯಾ ತಂಡಗಳು ಎ ಗುಂಪಿನಲ್ಲಿ ಹಾಗೂ ಬಾಂಗ್ಲಾದೇಶ, ಸ್ಕಾಟ್ಲೆಂಡ್‌, ಪಪುವಾನ್ಯೂಗಿನಿಯಾ ಮತ್ತು ಒಮಾನ್‌ ತಂಡಗಳು ಬಿ ಗುಂಪಿನಲ್ಲಿ ಕಾಣಿಸಿಕೊಂಡಿವೆ.

ಟಿ 20 ವಿಶ್ವಕಪ್‌ ಪಂದ್ಯಾವಳಿಯ ಅರ್ಹತಾ ಪಂದ್ಯಗಳು ಅಕ್ಟೋಬರ್‌ 17 ಆರಂಭವಾಗಲಿದೆ. ಆದರೆ ವಿಶ್ವಕಪ್‌ ಪಂದ್ಯಾವಳಿಯ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಇನ್ನೊಂದೆಡೆ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ 2007ರ ವಿಶ್ವಕಪ್‌ ಪಂದ್ಯಾವಳಿಯಲ್ಲೂ ಪರಸ್ಪರ ಸೆಣೆಸಾಟ ನಡೆಸಿವೆ. ಇದೀಗ ಭಾರತ ಹಾಗೂ ಬದ್ದ ವೈರಿ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿರುವುದು ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Comments are closed.