ಆರು ತಿಂಗಳಿಗೆ ಕಾಲಿಟ್ಟ ಜ್ಯೂನಿಯರ್ ಚಿರು…! ಮಗನ ಸಾಧನೆ‌ ಜೊತೆ ಮೇಘನಾ ಸೆಲಿಬ್ರೇಶನ್…!!

ಹೆತ್ತ ತಾಯಿಗೆ ಮಗುವಿನ ಪ್ರತಿ ಚಟುವಟಿಕೆಯೂ ಸಾಧನೆಯೇ. ಸಧ್ಯ ೫ ತಿಂಗಳು ಮುಗಿಸಿ ೬ ನೇ ತಿಂಗಳಿಗೆ ಕಾಲಿಟ್ಟಿರೋ ಜ್ಯೂನಿಯರ್ ಚಿರು ಕೂಡ ಹೊಸ ಸಾಧನೆ ಮಾಡಿದ್ದು, ಮೇಘನಾ ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಅಕ್ಟೋಬರ್ ೨೨ ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಭೂಮಿಗೆ ಬಂದ ಪುಟಾಣಿ ಚಿರು ಮೂರು ದಿನಗಳ ಹಿಂದೆಯಷ್ಟೇ ೫ ತಿಂಗಳು ಮುಗಿಸಿ ಆರನೇ ತಿಂಗಳಿಗೆ ಕಾಲಿರಿಸಿದ್ದಾನೆ.

https://www.instagram.com/p/CMua85ylLgV/?igshid=c2jdkl3epk0x

೬ ತಿಂಗಳು ಆರಂಭವಾಗುತ್ತಿದ್ದಂತೆ ಜ್ಯೂನಿಯರ್ ಚಿರು ಮಲಗಿದಲ್ಲೇ ಕವುಚಿ ಹಾಕಿಕೊಳ್ಳಲು ಪ್ರಾರಂಭಿಸಿದ್ದಾನೆ. ಇದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರೋ ಮೇಘನಾ ೬ ತಿಂಗಳಿಗೆ ಹೊರಳುವ ಮೂಲಕ ನನ್ನ ಮಗ ಮೈಲ್‌ಸ್ಟೋನ್ ನಿರ್ಮಿಸಿದ್ದಾನೆ ಎಂದಿದ್ದಾರೆ.

ಅಷ್ಟೇ ಅಲ್ಲ ತಮ್ಮ ಗೈನಕಾಲ್ ಜಿಸ್ಟ್ ಡಾ.ಮಾಧುರಿ ಸುಮಂತ್ ಅವರ ಬಗ್ಗೆಯೂ ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಅವರನ್ನು ಏನೆಂದು ಕರೆಯಲಿ, ಪ್ರೆಂಡ್, ಸಹೋದರಿ,ಫ್ಯಾಮಿಲಿ ಮೆಂಬರ್ ? ಅಥವಾ ಎಲ್ಲವೂ. ನಾನು ಇದ್ದ ಪರಿಸ್ಥಿತಿಯಲ್ಲಿ ನನ್ನ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲ ರೀತಿಯಲ್ಲೂ ನೆರವಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ಡಾ.ಮಾಧುರಿ ಸುಮಂತ್ ಜ್ಯೂನಿಯರ್ ಚಿರುವನ್ನು ಎತ್ತಿಕೊಂಡಿರುವ ಪೋಟೋವನ್ನು ಮೇಘನಾ ರಾಜ್ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಡಾ.ಮಾಧುರಿ ಜೊತೆಗೆ ತನ್ನ ಕಷ್ಟದಲ್ಲಿ ಕುಟುಂಬದಂತೆ ನಿಂತ ಅಕ್ಷ‌ ಹಾಸ್ಪಿಟಲ್ ಗೂ ಕೂಡ ಮೇಘನಾ ರಾಜ್ ಧನ್ಯವಾದ ಹೇಳಿದ್ದಾರೆ.

ಮೇಘನಾ ರಾಜ್ ೫ ತಿಂಗಳ ಗರ್ಭಿಣಿಯಾಗಿದ್ದಾಗ ಜೂನ್ ೭ ರಂದು ಚಿರು ತೀವ್ರ ಹೃದಯಾಘಾತದಿಂದ‌ ನಿಧನರಾಗಿದ್ದರು.

Comments are closed.