ಸೋಮವಾರ, ಏಪ್ರಿಲ್ 28, 2025
HomeBreakingವಿಭಿನ್ನವಾದ ಕಥೆ ಹೇಳ್ತಿದೆ ಬಳೆಪೇಟೆ …! ಕುತೂಹಲ ಹುಟ್ಟಿಸಿದೆ ಸಿನಿಮಾದ ಟೀಸರ್

ವಿಭಿನ್ನವಾದ ಕಥೆ ಹೇಳ್ತಿದೆ ಬಳೆಪೇಟೆ …! ಕುತೂಹಲ ಹುಟ್ಟಿಸಿದೆ ಸಿನಿಮಾದ ಟೀಸರ್

- Advertisement -

ಸ್ಯಾಂಡಲ್ ವುಡ್ ನಲ್ಲೀಗ ಒಂದೊಂದೆ ಸಿನಿಮಾಗಳು ತೆರೆಬರುತ್ತಿವೆ. ಅದ್ರಲ್ಲೂ ಬಿಡುಗಡೆಗೆ ಸಿದ್ದವಾಗಿರೋ ಸಿನಿಮಾಗಳಲ್ಲಿ ಹೆಚ್ಚು ಕುತೂಹಲ ಸೃಷ್ಟಿಸಿರೋದು ಬಳೆಪೇಟೆ ಸಿನಿಮಾ. ವಿಭಿನ್ನ ಕಥೆಯೊಂದಿಗೆ ಸಿದ್ದಗೊಂಡಿರೋ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ.

ನಿನಗೊಂದು ಕಥೆ ಹೇಳ್ಲಾ ಅನ್ನುತ್ತಲೇ ಆರಂಭಗೊಳ್ಳುವ ಬಳೆಪೇಟೆ ಟೀಸರ್ ಪ್ರೇಕ್ಷಕರಲ್ಲಿ ಹೊಸ ಕುತೂಹಲವನ್ನು ಹುಟ್ಟು ಹಾಕಿದೆ. ರಾಜಾರಾಣಿಯ ಕಥೆಯಲ್ಲಿ ರೊಮ್ಯಾನ್ಸ್ ಜೊತೆಗೆ ರೌಡಿಸಂನ್ನು ಕೂಡ ಬೆರೆಸಲಾಗಿದ್ದು, ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅಂಡರ್ ವಲ್ಡ್ ಡಾನ್ ಗಳ ಸ್ಟೋರಿಗಳನ್ನೇ ಇಟ್ಟುಕೊಂಡು ಅದೆಷ್ಟೋ ಸಿನಿಮಾಗಳು ತೆರೆ ಕಂಡಿವೆ. ಆದ್ರೆ ಬಳೆಪೇಟೆ ಆ ಮಟ್ಟಿಗೆ ಕೊಂಚ ಡಿಫ್ರೆಂಟ್ . ಟೀಸರ್ ನೋಡಿದ್ರೇನೆ ಸಿನಿಮಾದಲ್ಲಿ ಹೊಸತನ್ನು ಹೇಳೋದಕ್ಕೆ ಹೊರಟಿರುವುದು ಪಕ್ಕಾ ಆಗ್ತಿದೆ.

ಬಳೆಪೇಟೆ ಕೇವಲ ರೌಡಿಸಂ ಸಿನಿಮಾ ಅಂದುಕೊಳ್ಳಬೇಡಿ. ಅಲ್ಲೊಂದು ನಿವಿರಾದ ಪ್ರೇಮಕಥೆಯಿದೆ. ಯುವ ಜನತೆಗೆ ಇಷ್ಟವಾಗುವಂತೆ ಕಥೆಯನ್ನು ಸಿದ್ದಪಡಿಸಿದ್ದಾರೆ ನಿರ್ದೇಶಕ ರಿಷಿಕೇಶ್.
ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ಬಳೆಪೇಟೆ ಸಿನಿಮಾವನ್ನು ಸಿದ್ದಪಡಿಸಲಾಗಿದೆ. ಈಗಾಗಲೇ ಹೆಸರು, ಪೋಸ್ಟರ್ ನಿಂದಲೇ ಸಾಕಷ್ಟು ಸದ್ದು ಮಾಡಿರೋ ಬಳೆಪೇಟೆ, ಇದೀಗ ಟೀಸರ್ ಮೂಲಕ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಸಿನಿಮಾದಲ್ಲಿನ ಅದ್ಬುತ ಕ್ಯಾಮರಾ ವರ್ಕ್ ಟೀಸರ್ ನ ಪ್ರಮುಖ ಹೈಲೆಟ್ಸ್, ಮಲೆನಾಡ ಬೆಡಗಿ ಅನಿತಾ ಭಟ್ ಅವರನ್ನು ಗ್ಲಾಮರ್ ಜೊತೆಗೆ ವಿಭಿನ್ನವಾಗಿರೋ ತೋರಿಸಲಾಗಿದೆ. ಚಿತ್ರದ ನಾಯಕ ಪ್ರಮೋದ್ ಬೋಪಣ್ಣ, ಮಯೂರ್ ಪಟೇಲ್ ಪಾತ್ರಗಳು ಟೀಸರ್ ನಲ್ಲಿ ಕುತೂಹಲ ಮೂಡಿಸಿದೆ.

ಬನಾನ ಶಿವರಾಮ್ ಬಳೆಪೇಟೆಗೆ ಬಂಡವಾಳ ಹೂಡಿದ್ದು, ಆರ್ ವಿಎಸ್ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಚಿತ್ರ ರೆಡಿಯಾಗ್ತಿದೆ. ಸಿನಿಮಾಟೋಗ್ರಾಫರ್ ಆಗಿ ಖ್ಯಾತಿ ಪಡೆದಿರುವ ರಿಷಿಕೇಶ್ ಈ ಸಿನಿಮಾದ ಮೂಲಕ ಮೊದಲ ಬಾರಿ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ.

ಬಳೆಪೇಟೆಯಲ್ಲಿನ ನೈಜ ಘಟನಾವಳಿಗಳನ್ನ ಇಟ್ಟುಕೊಂಡು ಕಲ್ಪನೆಯ ಕಥೆಯನ್ನು ಹೆಣೆದಿದ್ದಾರೆ ನಿರ್ದೇಶಕರು. ಕಣ್ಣಾರೆ ಕಂಡ ಪಾತ್ರಗಳನ್ನು ತೆರೆಯ ಮೇಲೆ ವಿಭಿನ್ನವಾಗಿ ತೋರಿಸೋ ಪ್ರಯತ್ನವನ್ನು ಮಾಡುತ್ತಿದೆ ಬಳೆಪೇಟೆ ತಂಡ.

ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ದುಡಿದ ಅನುಭವ ಹೊಂದಿರುವ ಬಳೆಪೇಟೆ ನಿರ್ದೇಶಕ ರಿಷಿಕೇಶ್ ವಿಭಿನ್ನವಾಗಿರುವ ಸಿನಿಮಾವನ್ನು ಸಿದ್ದ ಪಡಿಸಿದ್ದಾರೆ. ಹೆಸರಿನ ಮೂಲಕವೇ ಬಳೆಪೇಟೆ ಸಿನಿ ರಸಿಕರಿಗೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.

https://kannada.newsnext.live/anithabhat-tagaru-newmovie-bangalore-69-corona/

ಟಗರು, ಸೈಕೋ ಖ್ಯಾತಿಯ ಮಲೆನಾಡ ಬೆಡಗಿ ಅನಿತಾ ಭಟ್ ಬಳೆಪೇಟೆಯಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಗ್ಲ್ಯಾಮರ್ ನಿಂದಲೇ ಪಡ್ಡೆ ಹೈಕಳ ನಿದ್ದೆ ಕದ್ದಿರುವ ಅನಿತಾ ಭಟ್ ಬಳೆಪೇಟೆ ಸಿನಿಮಾದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅನಿತಾ ಭಟ್ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳಿಗೆ ಇಷ್ಟವಾಗೋದು ಗ್ಯಾರಂಟಿ.

ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿರುವ ಪ್ರಮೋದ್ ಬೋಪಣ್ಣ ಬಳೆಪೇಟೆ ಮೂಲಕ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಟ ಮಯೂರ್ ಪಟೇಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ.

ನಟ ಉಮೇಶ್ ಬಣಕಾರ್, ಉಗ್ರಂ ರವಿ, ಅಭಿಷೇಕ್ ಮಠದ, ಲೋಕೇಶ್ ರೇವಣ್ಣ ಸೇರಿದಂತೆ ಬಹುತೇಕ ಹೊಸಬರನ್ನೇ ಇಟ್ಟುಕೊಂಡು ಸ್ಯಾಂಡಲ್ ವುಡ್ ಮಟ್ಟಿಗೆ ಹೊಸತನದ ಸಿನಿಮಾವೊಂದನ್ನು ನೀಡೋದಕ್ಕೆ ಹೊರಟಿದ್ದಾರೆ ರಿಷಿಕೇಶ್. ಅಷ್ಟೇ ಅಲ್ಲಾ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಬರೆದು, ಸಂಕಲನದ ಜೊತೆಗೆ ಡಿಒಪಿ ಹೊಣೆಯನ್ನು ಹೊತ್ತಿದ್ದಾರೆ. ಅನಿಲ್ ರಾಜ್ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸ್ಯಾಂಡಲ್ ವುಡ್ ಮಟ್ಟಿಗೆ ಅದೆಷ್ಟೋ ಹೊಸಬರ ಸಿನಿಮಾಗಳೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿದೆ. ಆ ಸಾಲಿಗೆ ಬಳೆಪೇಟೆ ಸಿನಿಮಾ ಕೂಡ ಸೇರ್ಪಡೆಯಾಗೋ ಸೂಚನೆಯನ್ನು ನೀಡುತ್ತಿದೆ.

ಕೊರೊನಾ ಭೀತಿಯಿಂದಾಗಿ ಸ್ಟಾರ್ ನಟರ ಬಹು ಬಜೆಟ್ ಸಿನಿಮಾಗಳೇ ತೆರೆಗೆ ಬರೋದಕ್ಕೆ ಹಿಂದೆ ಮುಂದೆ ನೋಡುತ್ತಿರೋ ಕಾಲದಲ್ಲೇ ಬಳೆಪೇಟೆ ಚಿತ್ರತಂಡ ಸಿನಿಮಾ ರಿಲೀಸ್ ಗೆ ಮುಂದಾಗಿದೆ. ಬಳೆಪೇಟೆ ಮೂಲಕ ಹೊಸತನವನ್ನು ನೀಡೋದಕ್ಕೆ ಹೊರಟಿದ್ದೇವೆ. ಹೀಗಾಗಿ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ವಿಶ್ವಾಸದಲ್ಲಿದೆ ಚಿತ್ರತಂಡ.

ಈಗಾಗಲೇ ಬಿಡುಗಡೆಯಾಗಿರುವ ಬಳೆಪೇಟೆ ಟೀಸರ್ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು ಕೂಡ ಇಷ್ಟಪಟ್ಟಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular