ಕ್ರಿಕೆಟಿಗ ರಾಹುಲ್, ನಟಿ ಆಶಿಕಾ ರಂಗನಾಥ್ ಪೋಟೋ ವೈರಲ್ : ಬೆಸ್ಟ್ ಮ್ಯಾಚ್ ಅಂದ್ರು ಅಭಿಮಾನಿಗಳು

ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಸ್ಯಾಂಡಲ್ ವುಡ್ ನ ಬ್ಯೂಟಿಪುಲ್ ನಟಿ ಆಶಿಕಾ ರಂಗನಾಥ್ ನಡುವೆ ಏನಾದ್ರೂ ನಡೆತೀದ್ಯಾ. ಹೀಗೊಂದು ಮಾತು ಕೇಳಿಬರುತ್ತಿದೆ. ಈ ನಡುವಲ್ಲೇ ರಾಹುಲ್ ಹಾಗೂ ಆಶಿಕಾ ಜೊತೆಗಿರುವ ಪೋಟೋ ವೈರಲ್ ಆಗಿದ್ದು ಅಭಿಮಾನಿಗಳು ಬೆಸ್ಟ್ ಮ್ಯಾಚ್ ಅಂತಾ ಕಮೆಂಟ್ ಮಾಡಿದ್ದಾರೆ.

ಟೀಂ ಇಂಡಿಯಾದ ಭರವಸೆಯ ಆಟಗಾರ ಕೆ.ಎಲ್.ರಾಹುಲ್ ಹೆಸರು ಈಗಾಗಲೇ ನಟ ಸುನಿಲ್ ಶೆಟ್ಟಿ ಪುತ್ರಿಯ ಜೊತೆಗೆ ತಳುಕು ಹಾಕಿಕೊಂಡಿದೆ. ಈ ನಡುವಲ್ಲೇ ಕೆ.ಎಲ್.ರಾಹುಲ್ ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಜೊತೆ ಕಾಣಿಸಿಕೊಂಡಿದ್ದಾರೆ.

ನಟಿ ಆಶಿಕಾ ರಂಗನಾಥ್ ಹಾಗೂ ಕ್ರಿಕೆಟಿಗ ರಾಹುಲ್ ಜೊತೆಗಿರುವ ಪೋಟೋವನ್ನು ಆಶಿಕಾ ರಂಗನಾಥ್ ಆಫೀಶಿಯಲ್ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.ಅದ್ರಲ್ಲೂ ಜೋಡಿಯನ್ನು ನೋಡಿದ ಅಭಿಮಾನಿಗಳು ಬೆಸ್ಟ್ ಮ್ಯಾಚ್ ಅಂತಿದ್ದಾರೆ.

ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿದ್ರೆ, ನಟಿ ಆಶಿಕಾ ರಂಗನಾಥ್ ಸ್ಯಾಂಡ್ ವುಡ್ ನ ಬಹು ಬೇಡಿಕೆಯ ನಟಿ. ಇದೀಗ ಇಬ್ಬರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇಬ್ಬರ ನಡುವೆ ಏನೋ ಇದೆ ಅನ್ನೊ ಗುಸು ಗುಸು ಕೇಳಿಬರುತ್ತಿದೆ.

Comments are closed.