ಕೋಟಿಗೊಬ್ಬ-3 ಅಂಗಳದಿಂದ ಹೊರಬಿತ್ತು ಸಿಹಿಸುದ್ದಿ…! ಮಾರ್ಚ್ 7 ರಂದು ಸುದೀಪ್ ಅಭಿಮಾನಿಗಳಿಗೆ ಕಾದಿದೆ ಸಪ್ರೈಸ್…!!

ವೃತ್ತಿಬದುಕಿನ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣ ರಿಲೀಸ್ ಹಾಗೂ ಕೋಟಿಗೊಬ್ಬ ರಿಲೀಸ್  ನಡುವೆ ಬಿಗ್ ಬಾಸ್ ನಲ್ಲೂ ಬ್ಯುಸಿಯಾಗಿರೋ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.  ಮಾರ್ಚ್ 7 ರಂದು ಕಿಚ್ಚನ ಅಭಿಮಾನಿಗಳಿಗೆ ಸಪ್ರೈಸ್ ಗಿಫ್ಟ್ ವೊಂದು ಸಿಗಲಿದೆ.

ಮೊನ್ನೆ ಮೊನ್ನೆಯಷ್ಟೇ ವಿಶ್ವದ ಅತಿ ಎತ್ತರದ ಕಟ್ಟಡ ಖ್ಯಾತಿಯ ಬುರ್ಜಾ ಖಲಿಫಾ ಮೇಲೆ ವಿಕ್ರಾಂತ್ ರೋಣ ಲೋಗೋ ಲಾಂಚ್ ಮಾಡಿದ ನಟ ಸುದೀಪ್ ಸ್ಯಾಂಡಲ್ ವುಡ್ ನಲ್ಲಿ ಸಿನಿ ಜರ್ನಿಯ 25 ವರ್ಷಗಳನ್ನು ಪೊರೈಸಿ ಸಂಭ್ರಮಾಚರಣೆ ಮುಗಿಸಿದ್ದಾರೆ. ಇದರ ಬೆನ್ನಿಗೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಲಿದ್ದಾರೆ.

ಮಾರ್ಚ್ 7 ರಂದು ಸುದೀಪ್ ಅಭಿನಯದ ಚಿತ್ರ ಕೋಟಿಗೊಬ್ಬ-3 ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ. ಆನಂದ ಆಡಿಯೋದ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗಲಿದೆ. ಕೋಟಿಗೊಬ್ಬ ಸಿಕ್ವೆನ್ಸ್ ನ ಕೊನೆಯ ಚಿತ್ರವಾಗಿರೋ ಕೋಟಿಗೊಬ್ಬ-3 ಸಾಕಷ್ಟು ನೀರಿಕ್ಷೆ ಹುಟ್ಟಿಸಿದೆ.

ಬಿಗ್ ಬಾಸ್ ಮುಗಿದ ಬಳಿಕ ಸುದೀಪ್ ಕೋಟಿಗೊಬ್ಬ-3 ಪ್ರಮೋಶನ್  ಆರಂಭಿಸಲಿದ್ದು,ಇದಕ್ಕೂ ಮುನ್ನ ಚಿತ್ರದ ಮೇಕಿಂಗ್ ವಿಡಿಯೋ ತೆರೆಗೆ ಬರಲಿದೆ.

ಶಿವ್ ಕಾರ್ತೀಕ್ ಸಾರಥ್ಯದಲ್ಲಿ ಮೂಡಿಬರ್ತಿರೋ ಈ ಸಿನಿಮಾಗೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ. ನಾಯಕಿಯಾಗಿ ಮಲೆಯಾಳಂ ಬೆಡಗಿ ಮೆಡೋನ್ನಾ ಸಬಾಸ್ಟಿಯನ್ ನಟಿಸಿದ್ದು, ಶೃದ್ಧಾದಾಸ್, ಅಫ್ತಾಬ್ ಶಿವದಾಸನಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  

Comments are closed.