ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ವಿವಾದ….! ಹೊಸಬರ ಚಿತ್ರದ ಪೋಸ್ಟರ್ ಲಾಂಚ್ ವೇಳೆ ಪುನೀತ್ ಹೇಳಿದ್ದೇನು? !

ಹೊಸಬರ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗ ಹೊಸಬರ ಚಿತ್ರದ ಪೋಸ್ಟರ್ ಲಾಂಚ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಇಷ್ಟಕ್ಕೆ ಇಷ್ಟೊಂದು ಬಿಲ್ಡಪ್ ಬೇಕಿತ್ತಾ? ಸಿನಿಮಾ ಬಿಟ್ಟು ಬೇರೇನಾದ್ರೂ ಮಾಡಿ ಅಂತ ಪುನೀತ್ ರಾಜಕುಮಾರ್ ಹೇಳಿದ್ದು ಈಗ ಹೊಸ ಗಾಸಿಪ್ ಸೃಷ್ಟಿಸಿದೆ.

ಹೊಸಬರ ಚಿತ್ರಗಳಿಗೆ ಸ್ಟಾರ್ ಗಳು ಬೆಂಬಲಿಸೋದು, ಮೂವಿ ಟೀಸರ್,ಟ್ರೇಲರ್, ಫರ್ಸ್ಟ್ ಲುಕ್,ಆಡಿಯೋ ಲಾಂಚ್ ಮಾಡೋದು ಎಲ್ಲ ಕಾಮನ್. ಆದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಸಿನಿಮಾದ ಪೋಸ್ಟರ್ ರಿಲೀಸ್ ವೇಳೆ ಪುನೀತ್ ರಾಜಕುಮಾರ್ ಮಾಡಿರೋ ಕಮೆಂಟ್ ಈಗ ಎಲ್ಲೆಡೆ ವೈರಲ್ ಆಗಿದ್ದು, ಜನರು ಮನಸ್ಸಿಗೆ ಬಂದಂತೆ ಕಮೆಂಟ್ ಮಾಡ್ತಿದ್ದಾರೆ.

ಹೊಸಬರ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಳಿ ತಮ್ಮ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿದೆ. ವಿಭಿನ್ನವಾಗಿ  ಮೆಮೊರಿ ಕಾರ್ಡ್ ರೀತಿಯಲ್ಲಿ ಪೋಸ್ಟರ್ ಮಾಡಲಾಗಿದೆ. ಇದನ್ನು ನೋಡಿದ ಪುನೀತ್ ಇದೇನು ಮೆಮೊರಿ ಕಾರ್ಡ್ ಇದ್ದಂಗಿದೆ. ಇದನ್ನು ಲಾಂಚ್ ಮಾಡೋಕೆ ಇಷ್ಟೊಂದು ಬಿಲ್ಡಪ್ ಬೇಕಿತ್ತಾ ಎಂದಿದ್ದಾರೆ.

ಪೋಸ್ಟರ್ ನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಅನ್ನೋದರ ಜೊತೆಗೆ ವರ್ಸ್ಟ್ ಮೂವಿ ಎವರ್ ಮೇಡ್ ಇನ್ ದ ಹಿಸ್ಟರಿ ಆಫ್ ಸಿನಿಮಾ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಇದನ್ನು ನೋಡಿದ ಪುನೀತ್ ರಾಜಕುಮಾರ್ ಇದು ವರ್ಸ್ಟ್ ಸಿನಿಮಾ ಅನ್ಸುತ್ತೆ ಇದರ ಬದಲು ಬೇರೆನಾದ್ರು ಒಳ್ಳೆ ಕೆಲಸ ಮಾಡಿ ಎಂದು ನಗು ನಗುತ್ತ ಹೇಳಿದ್ದಾರೆ.

ಹೀಗಾಗಿ ಸಿನಿಮಾ ತಂಡದ ಜೊತೆ ಪುನೀತ್ ರಾಜಕುಮಾರ್ ಮಾಡಿರೋ ತಮಾಷೆಯ ಕಮೆಂಟ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಪುನೀತ್ ರಾಜಕುಮಾರ್ ತಮಾಷೆಯನ್ನೇ ಸಿರಿಯಸ್ಸಾಗಿ ತಗೊಂಡು ಪುನೀತ್ ಹೊಸಬರನ್ನು ಪ್ರೋತ್ಸಾಹಿಸುವ ಬದಲು ಹೀಗೆಲ್ಲ ಹೇಳಿದ್ರಾ ಅಂತಿದ್ದಾರೆ.

ಒಟ್ಟಿನಲ್ಲಿ ಹೊಸಬರ ಚಿತ್ರ ಪೋಸ್ಟರ್ ಹಂತದಲ್ಲೇ ಸಖತ್ ಸುದ್ದಿ ಮಾಡಿದ್ದು, ನಿತಿನ್ ಕೃಷ್ಣಮೂರ್ತಿ ನಿರ್ದೇಶನವಿರುವ  ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಅರವಿಂದ ಕಶ್ಯಪ್ ಸಂಗೀತವಿದೆ.

Comments are closed.