BUDGET -2021: 100 ಜಿಲ್ಲೆಗಳಿಗೆ ಗ್ಯಾಸ್ ಪೈಪ್ ಲೈನ್ : 1000 ಗ್ಯಾಸ್ ಏಜೆನ್ಸಿ ಸ್ಥಾಪನೆ

ನವದೆಹಲಿ : ಕೇಂದ್ರ ಸರಕಾರ ಪೆಟ್ರೋಲಿಯಂ ಹಾಗೂ ಗ್ಯಾಸ್ ಸರಬರಾಜು ಯೋಜನೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಬರೋಬ್ಬರಿ 100 ಜಿಲ್ಲೆಗಳಿಗೆ ಗ್ಯಾಸ್ ಪೈಪ್ ಲೈನ್ ವಿಸ್ತರಣೆ ಮಾಡುವ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ದೇಶದ ಹಲವು ನಗರಗಳಲ್ಲಿ ಗ್ಯಾಸ್ ಫೈಪ್ ಲೈನ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಮುಂದಿನ 3 ವರ್ಷಗಳ ಅವಧಿಯಲ್ಲಿ 100 ಜಿಲ್ಲೆಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸುವುದಾಗಿ ಘೋಷಿಸಿದ್ದಾರೆ.

https://kannada.newsnext.live/central-budget-live-telicast/

ಜಮ್ಮು ಕಾಶ್ಮೀರಕ್ಕೂ ಗ್ಯಾಸ್ ಪೈಪ್ ಅಳವಡಿಸುವ ಕುರಿತು ಘೋಷಣೆಯನ್ನು ಮಾಡಲಾಗಿದ್ದು, 1000 ಹೊಸ ಗ್ಯಾಸ್ ಏಜೆನ್ಸಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.

Comments are closed.