ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸ್ಯಾಂಡಲ್ ವುಡ್ ಸುಂದರಿ…! ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೀದಿಗಿಳಿದ್ಲು ಗುಳಿಕೆನ್ನೆ ಬೆಡಗಿ…!!

ಸ್ಯಾಂಡಲ್ ವುಡ್ ನಟ-ನಟಿಯರು ರಸ್ತೆಗಿಳಿದ್ರೇ ಸಾಕು ಜನ ಬೆಲ್ಲಕ್ಕೆ ಇರುವೆ ಮುತ್ತಿಕೊಳ್ಳೋ ತರ ಮುತ್ತಿಕೊಳ್ತಾರೆ. ಅದಕ್ಕಾಗೇ ಸೆಲೆಬ್ರೆಟಿಗಳು ಸಾಮಾನ್ಯರಂತೆ ಶಾಪಿಂಗ್‌ ಬರೋದಿಲ್ಲ. ಆದರೆ ಇದಕ್ಕೆ ಅಪವಾದ ಎಂಬಂಗೆ ಸ್ಯಾಂಡಲ್ ವುಡ್ ಬೆಡಗಿ ರಚಿತಾ ರಾಮ್ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಶಾಪಿಂಗ್ ಮಾಡಿದ್ದಾರೆ.

ಸ್ವತಃ ರಚಿತಾ ರಾಮ್ ಈ ಪೋಟೋ ವಿಡಿಯೋ ಹಂಚಿಕೊಂಡಿದ್ದು, ಕಮರ್ಷಿಯಲ್ ಸ್ಟ್ರೀಟ್ ನ ರಸ್ತೆ ಬದಿ ಅಂಗಡಿಗಳಲ್ಲಿ ಸಾಮಾನ್ಯ ಹುಡುಗಿಯರಂತೆ‌ ಸುತ್ತಾಡಿ ಬಟ್ಟೆ ಪರ್ಚೆಸ್ ಮಾಡಿ ಗಮನ ಸೆಳೆದಿದ್ದಾರೆ. ಇಷ್ಟಾದರೂ ರಚಿತಾ ರಾಮ್ ರನ್ನು ಯಾರು ಸೆಲ್ಪಿಗಾಗಲಿ, ಅಟೋಗ್ರಾಫ್ ಗಾಗಲಿ ಪೀಡಿಸಿಲ್ಲ.

ಅದ್ಯಾಕೆ ಅಂತಿರಾ ರಚಿತಾ ರಾಮ್ ರಸ್ತೆಗಿಳಿದು ಬೀದಿ ಬದಿಯಲ್ಲಿ ಶಾಪಿಂಗ್ ಮಾಡಿದ್ದು ಯಾರಿಗೂ ಗೊತ್ತಾಗಲಿಲ್ಲ. ಮುಖಕ್ಕೆ ಕೆಂಪು ವೇಲ್ ಸುತ್ತಿದ ರಚಿತಾ ರಾಮ್, ಕಪ್ಪು ಕನ್ನಡಕ ಹಾಕಿ ಯಾರಿಗೂ ಗೊತ್ತಾಗದಂತೆ ಗಲ್ಲಿ ಗಲ್ಲಿ ಸುತ್ತಾಡಿದ್ದಾರೆ.

ವೀರಂ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ರಚಿತಾ ರಾಮ್, ಚಿತ್ರತಂಡದ ಜೊತೆಯೇ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದಾರಂತೆ.

ಈ ಬಗ್ಗೆ ಸ್ವತಃ ವಿಡಿಯೋ ಮಾಡಿ ಅನುಭವ ಹಂಚಿಕೊಂಡಿರುವ ರಚಿತಾ ರಾಮ್, ತೆರೆ ಮೇಲಿನ ಹಿರೋಯಿನ್ ರಸ್ತೆಯಲ್ಲಿ ಎದುರು ಬದುರು ಸಿಕ್ಕರೂ ಯಾರು ಗುರುತಿಸಲಿಲ್ಲ.

ಹೀಗಾಗಿ ನಾನು ಸೀದಾ ಸಾದಾ ಹುಡುಗಿಯಂತೆ ಶಾಪಿಂಗ್ ಮಾಡುತ್ತ ಓಡಾಡಿದೆ ಎಂದಿದ್ದಾರೆ. ರಚಿತಾ ರಾಮ್ ಗೆ ಚಿತ್ರತಂಡ ಸಾಥ್ ನೀಡಿದ್ದು ವಿಡಿಯೋ ಮಸ್ತ ವೈರಲ್ ಆಗಿದೆ. ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ ನಟಿಸಿರುವ ಈ ಚಿತ್ರ ಡಿಸೆಂಬರ್ 10 ರಂದು ಮುಹೂರ್ತ ಮುಗಿಸಿರುವ ಚಿತ್ರತಂಡ ಶೂಟಿಂಗ್ ಆರಂಭಿಸಿದೆ.

Comments are closed.