“ಬೆಳಗೆದ್ದು” ಹಳೆ ಲವ್ ನೆನೆದ ರಶ್ಮಿಕಾ….! ಕೊಡಗಿನ ಕುವರಿ ರಕ್ಷಿತ್ ಶೆಟ್ಟಿಗೆ ಟ್ಯಾಗ್ ಮಾಡಿದ್ದೇನು ಗೊತ್ತಾ…?

ಇತ್ತೀಚಿಗಷ್ಟೇ ನ್ಯಾಷನಲ್ ಕ್ರಶ್ ಎನ್ನಿಸಿಕೊಂಡು, ಬಾಲಿವುಡ್ ಗೂ ಎಂಟ್ರಿಕೊಟ್ಟು ಸಖತ್ ಬ್ಯುಸಿ ನಟಿ ಅನ್ನಿಸಿಕೊಂಡಿರೋ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬೆಳ್ಳಂಬೆಳಗ್ಗೆ ಬೆಳಗೆದ್ದು ಯಾರ ನೆನೆಯಲಿ ಎನ್ನುತ್ತ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಮೊದಲ ಚಿತ್ರದ ಖುಷಿಯನ್ನು ಹಂಚಿಕೊಳ್ಳುತ್ತ ರಕ್ಷಿತ್ ಶೆಟ್ಟಿಗೂ ಪೋಸ್ಟ್ ಟ್ಯಾಗ್ ಮಾಡಿರೋ ಈ ಬೆಡಗಿ ನಡೆಗೆ ಅಭಿಮಾನಿಗಳು ಕನ್ ಪ್ಯೂಸ್ ಆಗಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ತೆರೆಗೆ ಬಂದ ಕಿರಿಕ್ ಪಾರ್ಟಿ ಹಲವು ಹೊಸ ಆಯಾಮಗಳಲ್ಲಿ ಮನಸೆಳೆದ ಸಿನಿಮಾ, ಈ ಸಿನಿಮಾದ ಬೆಳಗೆದ್ದು ಸಾಂಗ್ ಇದೀಗ 100 ಮಿಲಿಯನ್ ವೀಕ್ಷಣೆಯೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. ಈ ಖುಷಿಯನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರೋ ರಶ್ಮಿಕಾ ಮಂದಣ್ಣ, ಮೊದಲ ಬಾರಿಗೆ 100 ಮಿಲಿಯನ್ ವೀಕ್ಷಣೆ ಕಂಡ ನನ್ನ ಮೊದಲು ಹಾಡು ಇದು. ಖುಷಿಯಾಗುತ್ತಿದೆ. ಈ ಹಾಡಿನ ಶೂಟಿಂಗ್ ಕ್ಷಣಗಳು ನನ್ನ ಕಣ್ಣ ಮುಂದೇ ಬರುತ್ತಿದೆ. ನನ್ನೊಳಗಿನ ಸಾನ್ವಿಯನ್ನು ಹುಡುಕುತ್ತಿದ್ದೇನೆ ಎಂದಿದ್ದಾರೆ.

ಅಷ್ಟೇ ಅಲ್ಲ ಇಂತಹದೊಂದು ಹಾಡು ಹಾಗೂ ಚಿತ್ರ ನೀಡಿದ್ದಕ್ಕೆ ಚಿತ್ರತಂಡ ಧನ್ಯವಾದವನ್ನು ರಶ್ಮಿಕಾ ಹೇಳಿದ್ದಾರೆ. ಇಷ್ಟೇ ಆಗಿದ್ದರೇ ಈ ವಿಚಾರ ದೊಡ್ಡ ಮಟ್ಟದ ಸುದ್ದಿಯಾಗುತ್ತಿರಲಿಲ್ಲವೇನೋ. ಧನ್ಯವಾದ ಹೇಳಿರುವ ರಶ್ಮಿಕಾ ತಮ್ಮ ಟ್ವೀಟ್ ನ್ನು ಕಿರಿಕ್ ಪಾರ್ಟಿಯ ಹಿರೋ ಹಾಗೂ ತಮ್ಮ ಮಾಜಿ ಪ್ರಿಯತಮ ರಕ್ಷಿತ್ ಶೆಟ್ಟಿಗೂ ಟ್ಯಾಗ್ ಮಾಡಿದ್ದಾರೆ.

ಇದರ ಜೊತೆ ಕಿರಿಕ್ ಪಾರ್ಟಿಯ ಇನ್ನೊರ್ವ ಹಿರೋಯಿನ್ ಸಂಯಕ್ತಾ ಹೆಗ್ಡೆಗೂ ಟ್ಯಾಗ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಸ್ಯಾಂಡಲ್ ವುಡ್ ಮಂದಿ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಚಿತ್ರತಂಡಕ್ಕೆ ಹಾಗೂ ರಶ್ಮಿಕಾಗೆ ಶುಭಾಶಯ ಕೋರಿದ್ದು, ಅದರ ಜೊತೆ ಜೊತೆಗೆ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ನಡುವೆ ಎಲ್ಲವೂ ಸರಿ ಹೋಯ್ತಾ ಅಂತ ಪ್ರಶ್ನಿಸಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ಒಟ್ಟಿಗೆ ನಟಿಸಿದ್ದ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಪರಸ್ಪರ ಪ್ರೀತಿಸಿದ್ದು, ಬಳಿಕ ಅದ್ದೂರಿ ನಿಶ್ಚಿತಾರ್ಥ ಮಾಡಿ ಕೊಂಡಿದ್ದರು. ಬಳಿಕ ದೂರವಾಗಿದ್ದ ಜೋಡಿ ಸೈಲೆಂಟ್ ಆಗಿ ತಮ್ಮ ತಮ್ಮ ಲೋಕದಲ್ಲಿ ಮೊಳಗಿ ಹೋಗಿತ್ತು. ಇದೀಗ ಮತ್ತೆ ರಶ್ಮಿಕಾ ರಕ್ಷಿತ್ ಶೆಟ್ಟಿ ಟ್ಯಾಗ್ ಮಾಡಿದ್ದು, ಹೊಸದೇನು ಶುರುವಾಗಿದೆ ಅಂತ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.

Comments are closed.