ಹೈಕೋರ್ಟ್ ಆಯ್ತು ಸುಪ್ರೀಂ ಕೋರ್ಟ್ ನಲ್ಲಿ ಅದೃಷ್ಟ ಪರೀಕ್ಷೆ…! ಬೇಲ್ ಗಾಗಿ ಕೊನೆಯ ಸರ್ಕಸ್ ಆರಂಭಿಸಿದ ತುಪ್ಪದ ಬೆಡಗಿ…!!

ಬೆಂಗಳೂರು: ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಇನ್ನು ಮುಂದುವರೆದಿದೆ. ಈ ಮಧ್ಯೆ ಜೈಲು ಸೇರಿರುವ ನಟಿ ರಾಗಿಣಿ ಮಾತ್ರ ಜಾಮೀನು ಸಿಗದೇ ಒದ್ದಾಡುತ್ತಿದ್ದಾರೆ. ಹೈಕೋರ್ಟ್ ನಲ್ಲಿ ಸಿಗದ ಜಾಮೀನಿಗಾಗಿ ತುಪ್ಪದ ಬೆಡಗಿ ಸುಪ್ರೀಂ ಮೊರೆ ಹೋಗಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಡ್ರಗ್ಸ್ ಸೇವನೆ ಹಾಗೂ ಪೊರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ,ಸಂಜನಾ ತಮ್ಮ ಇತರ ಸಂಗಡಿಗರ ಜೊತೆ ಪರಪ್ಪನ ಅಗ್ರಹಾರ ಸೇರಿ ತಿಂಗಳುಗಳೇ ಕಳೆದಿವೆ.

ಆದರೆ ತನಿಖೆ ದೃಷ್ಟಿಯಿಂದ ಹಾಗೂ ಪ್ರಮುಖ ಆರೋಪಿಯಾದ ರಾಗಿಣಿ ಇತರ ಸಾಕ್ಷ್ಯಗಳು ಹಾಗೂ ತನಿಖೆಯ ಮೇಲೆ ಪ್ರಭಾವ ಬೀರೋ ಸಾಧ್ಯತೆ ಇರೋದರಿಂದ ನ್ಯಾಯಾಲಯ ಜಾಮೀನು ನೀಡುತ್ತಿಲ್ಲ.

ಜಾಮೀನಿಗಾಗಿ ಪರದಾಡಿ ಕಂಗೆಟ್ಟಿರುವ ರಾಗಿಣಿ ಇದೀಗ ಹೈಕೋರ್ಟ್ ಬಳಿಕ ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ರಾಗಿಣಿ‌ಮಾತ್ರವಲ್ಲದೇ ಈ ಪ್ರಕರಣದ ಇನ್ನೋರ್ವ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಕೂಡ ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗಿದೆ.

ನಟಿ ರಾಗಿಣಿ‌ ಪರ ಸುಪ್ರೀಂ ‌ಕೋರ್ಟ್ ವಕೀಲರಾದ ಶಾಹಿಲ್ ಭಾಲೈಕ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲನೆ ಬಳಿಕ ಸ್ವೀಕೃತವಾಗಿದ್ದು ಜನವರಿ ನಾಲ್ಕರ ವೇಳೆ ವಿಚಾರಣೆಗೆ ಬರಲಿದೆ ಎನ್ನಲಾಗಿದೆ.

ಅಲ್ಲಿಯವರೆಗೂ ರಾಗಿಣಿ ಜೈಲು ವಾಸ‌ಫಿಕ್ಸ್ ಆಗಿದ್ದು, ವಿಚಾರಣೆಗೆ ಸಹಕರಿಸಿದರೂ ಜಾಮೀನು‌ ನೀಡದ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಗಿಣಿ ಮೇಲ್ಮನವಿ ಸಲ್ಲಿಸಿದ್ದಾರೆ.

Comments are closed.