ಮಧ್ಯಾಹ್ನದ ಊಟ ಬಿಟ್ಟ ನಟಿ ರಮ್ಯ…! ಮಾಜಿ ಸಂಸದೆ ಈ ನಿರ್ಧಾರಕ್ಕೆ ಕಾರಣ ಏನು ಗೊತ್ತಾ..?!

ಅದೆಲ್ಲಿ ಇರ್ತಾರೋ ಗೊತ್ತಿಲ್ಲ ನಟಿ ಹಾಗೂ ಮಾಜಿಸಂಸದೆ ರಮ್ಯ. ಆದರೇ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತಪ್ಪದೇ ಪೋಸ್ಟ್ ಗಳ ಜೊತೆ ಹಾಜರಾಗ್ತಾರೆ. ರಾಷ್ಟ್ರೀಯ ರೈತ ರ ದಿನಕ್ಕೆ ರಮ್ಯ ಹೊಸ ಪ್ರತಿಜ್ಞೆ ಜೊತೆ ಹಾಜರಾಗಿದ್ದಾರೆ.

ಸದಾ ನಿಮ್ಮ ಸೇವೆ ಮಾಡ್ತಿನಿ ಅಂತ ಮಂಡ್ಯದ ಅನ್ನದಾತರಿಗೆ ಮಾತುಕೊಟ್ಟು ಈಗ ಮಂಡ್ಯ ವನ್ನೇ ಮರೆತ ಊರಿಗೊಬ್ಳೆ ಪದ್ಮಾವತಿ, ಸ್ಯಾಂಡಲ್‌ವುಡ್ ಕ್ವೀನ್ ರೈತ ದಿನಾಚರಣೆಯಂದು ಸೋಷಿಯಲ್‌ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದಾರೆ‌.

ಜೀವನ ಪೂರ್ತಿ ನಮಗೆ ಅನ್ನ ನೀಡುವ ರೈತರನ್ನು ಸ್ಮರಿಸುವ ಪೋಸ್ಟ್ ಹಾಕಿರುವ ನಟಿ ರಮ್ಯ ಕೊನೆಯಲ್ಲಿ ಒಂದು ಪ್ರತಿಜ್ಞೆ ಮಾಡಿದ್ದಾರೆ. ರೈತರ ಗೌರವಾರ್ಥ ಇಂದು ನಾನು ಮಧ್ಯಾಹ್ನ ಊಟ ಮಾಡೋದಿಲ್ಲ ಎಂದಿದ್ದಾರೆ.

ಇನ್ ಸ್ಟಾಗ್ರಾಂ ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ರಮ್ಯ, ನಾನು ರೈತರನ್ನು ಬೆಂಬಲಿಸಿ ಮಧ್ಯಾಹ್ನದ ಊಟ ತ್ಯಜಿಸಿದ್ದೇನೆ ಎಂದಿದ್ದಾರೆ.

ಇದೇ ಪೋಸ್ಟ್ ನಲ್ಲಿ ಮೋದಿ ಸರ್ಕಾರದ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿರುವ ರಮ್ಯ, ರೈತರು ಕೃಷಿ ಕಾನೂನು ವಿರೋಧಿಸಿ ಪ್ರೊಟೆಸ್ಟ್ ನಡೆಸುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಸ್ಪಂದಿಸುತ್ತಿಲ್ಲ. ಇದೊಂದು ಉದ್ಧಟತನದ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ. ಮೋದಿ ಸರ್ಕಾರ ಕಾರ್ಪೋರೇಟ್ ಸ್ನೇಹಿತರನ್ನು ಬೆಂಬಲಿಸುತ್ತಿದೇಯೇ ವಿನಃ ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ ಎಂದಿದ್ದಾರೆ.

ಅಲ್ಲದೇ ಮೋದಿ ಸರ್ಕಾರವನ್ನು ಸೂಟ್-ಬೂಟ್ ಸರ್ಕಾರ ಎಂದಿರುವ ರಮ್ಯ, ರೈತರಿಲ್ಲದಿದ್ದರೇ ಆಹಾರವೂ ಇಲ್ಲ ಎಂಬುದನ್ನು ನೆನಪಿಸಿದ್ದಾರೆ.

ಈ ಕುರಿತು ಮತ್ತೊಂದು ಪೋಸ್ಟ್ ಹಾಕಿರುವ ರಮ್ಯ, ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈಟ್ ಅವರು ದೇಶದಾದ್ಯಂತ ಇಂದು ಜನರು ಮಧ್ಯಾಹ್ನ ಊಟ ತ್ಯಜಿಸುವಂತೆ ಕರೆ ನೀಡಿದ್ದಾರೆ.


ಮೋದಿ ನೀತಿಯಿಂದ ಇಂದು ರೈತರು ರಸ್ತೆಗೆ ಬಂದಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ ಅಡುಗೆ ಮಾಡದೆ ರೈತರನ್ನು ಬೆಂಬಲಿಸಿ ಎಂದು ರಮ್ಯ ಟ್ವೀಟರ್ ನಲ್ಲಿ ಮನವಿ ಮಾಡಿದ್ದಾರೆ.

ರಮ್ಯ ಆಂಟಿ ಮೋದಿ ಪೋಸ್ಟ್ ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಕೆಲವರು ರಮ್ಯರನ್ನು ಬೆಂಬಲಿಸಿದ್ರೇ ಇನ್ನು ಹಲವರು ಮೋದಿ ಬಗ್ಗೆ ಆಮೇಲೆ‌ ಮಾತಾಡಬಹುದು ಮಂಡ್ಯ ರೈತರ ಕಷ್ಟ ಕೇಳಮ್ಮ ಎಂದು ಕಾಲೆಳೆದಿದ್ದಾರೆ.

Comments are closed.