ಸಂಕ್ರಾಂತಿಗೆ ಸಿಹಿಕೊಟ್ಟ ಕಬ್ಜ ತಂಡ…! ಉಪೇಂದ್ರ ಜೊತೆ ಬರ್ತಾರೆ ಫ್ಯಾನ್ ಇಂಡಿಯಾ ಸ್ಟಾರ್…!!

ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದ್ರೂ ಡಿಫ್ರೆಂಟಾಗಿರುತ್ತೆ. ಇಂತಹುದೇ ವಿಭಿನ್ನ ಹೆಸರಿನೊಂದಿಗೆ ಕುತೂಹಲ ಮೂಡಿಸಿರೋ ಕಬ್ಜ ಚಿತ್ರತಂಡ ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ಸೂಪರ್ ಸ್ಟಾರ್ ಉಪೇಂದ್ರ ನಾಯಕರಾಗಿರೋ ಕಬ್ಜ ಸಿನಿಮಾದ ಟೀಸರ್ ಜನವರಿ 14 ರ ಸಂಕ್ರಾಂತಿಯಂದು ರಿಲೀಸ್ ಆಗಲಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡ ಅಭಿಮಾನಿಗಳಿದೆ ಇನ್ನೊಂದು ಸಿಹಿಸಮಾಚಾರ ನೀಡಲು ಸಹ ಪ್ಲ್ಯಾನ್ ಮಾಡಿದೆಯಂತೆ.

ಈಗಾಗಲೇ ಅರ್ಧದಷ್ಟು ಚಿತ್ರೀಕರಣವನ್ನು ಮುಗಿಸಿರುವ ಕಬ್ಜ ಸಿನಿಮಾ ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಈ ಚಿತ್ರಕ್ಕಾಗಿ ಉಪೇಂದ್ರ ದಿನಕ್ಕೆ ನಾಲ್ಕು ಗಂಟೆ ಮೈದಂಡಿಸಿ ಫಿಟ್ ಆಗಿದ್ದಾರಂತೆ.

ಬಹುಭಾಷಾ ಚಿತ್ರವಾಗಿರುವ ಕಬ್ಜ ತೆಲುಗು,ತಮಿಳು,ಹಿಂದಿಯಲ್ಲೂ ಏಕಕಾಲಕ್ಕೆ ತೆರೆಗೆ ಬರಲಿದೆ. ಸಂಕ್ರಾಂತಿ ಬಳಿಕ ಎರಡನೇ ಹಂತದ ಶೂಟಿಂಗ್ ಆರಂಭಿಸಲಿರುವ  ಈ ಚಿತ್ರದಲ್ಲಿ ಫ್ಯಾನ್ ಇಂಡಿಯಾ ಖ್ಯಾತಿಯ ಸೂಪರ್ ಸ್ಟಾರ್ ಒಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅವರು ಯಾರು? ಎಂಬುದನ್ನು ಸಿನಿಮಾತಂಡ ಗುಟ್ಟಾಗಿ ಇಟ್ಟಿದೆ.

ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ  ಈ ಚಿತ್ರ ಸಿದ್ದೇಶ್ವರ್ ಎಂಟರ್ ಪ್ರೈಸಸ್ ಲಾಂಚನದಲ್ಲಿ ಮೂಡಿಬರುತ್ತಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣವಿದ್ದು, ವಿಜಯ್ ಸಾಹಸ ನಿರ್ದೇಶನವಿದೆ.

ಅದ್ದೂರಿ ತಾರಾಗಣವಿದ್ದು, ಪ್ರಕಾಶ್ ರಾಜ್,ಜಯಪ್ರಕಾಶ್ ರೆಡ್ಡಿ, ಪ್ರದೀಪ್ ರಾವತ್, ಕಬೀರ್ ದುಹಾನ್ ಸಿಂಗ್, ಜಗಪತಿಬಾಬು, ಅನೂಪ್ ರೇವಣ್ಣ, ಕೋಟ ಶ್ರೀನಿವಾಸ್ ಸೇರಿದಂತೆ ಹಲವರು ನಟಿಸಲಿದ್ದಾರೆ. ಚಿತ್ರಕ್ಕೆ ಇನ್ನು ಹಿರೋಯಿನ್ ಆಯ್ಕೆಯಾಗಿಲ್ಲ. ಎಂದಿನಂತೆ ಉಪೇಂದ್ರ ವಿಭಿನ್ನ ಗೆಟಪ್ ನಲ್ಲಿ ಮಿಂಚುತ್ತಿದ್ದು, ಸಂಕ್ರಾಂತಿಗೆ ತೆರೆಗೆ ಬರೋ ಟೀಸರ್ ಅಭಿಮಾನಿಗಳಿಗೆ ಸಿಹಿಬೆಲ್ಲವಾಗೋ ಸಾಧ್ಯತೆ ಇದೆ.  

Comments are closed.