ಶಿವರಾತ್ರಿಯಂದು ತೆರೆಗೆ ಬರಲಿರೋ ರಾಬರ್ಟ್ ಟ್ರೇಲರ್ ದಚ್ಚು ಹುಟ್ಟುಹಬ್ಬದ ಗಿಫ್ಟ್ ರೂಪದಲ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳ ಪಾಲಿಗೆ ರಸದೌತಣ ನೀಡಿದೆ. ಮಾಸ್-ಕ್ಲಾಸ್ ಮನಗೆದ್ದಿರುವ ಟ್ರೇಲರ್ ಚಿತ್ರದ ಮೇಲಿನ ನೀರಿಕ್ಷೆ ಹೆಚ್ಚಿಸಿದ್ದು, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಒಬ್ರ ಲೈಫ್ ನಲ್ಲಿ ಹಿರೋ ಆಗಬೇಕಂದ್ರೇ, ಇನ್ನೊಬ್ಬರು ಲೈಫ್ ನಲ್ಲಿ ವಿಲನ್ ಆಗಬೇಕು ಎನ್ನುತ್ತ ಚಾಲೆಂಜಿಂಗ್ ಸ್ಟಾರ್ , ಬಾಸ್ ದಚ್ಚು ಡೈಲಾಗ್ ನಿಂದಲೇ ಅಬ್ಬರಿಸಿದ್ದು, ಮಲ್ಲಿಗೆಹೂವಿನಂತ ಹಿರೋಯಿನ್ ಆಶಾ ಭಟ್ ಕೂಡ ಸಖತ್ ಎಂಟ್ರಿ ನೀಡಿದ್ದಾರೆ.
ಮನುಷ್ಯನಿಗೆ ಎರಡು ಭಾರಿ ಮೈನಡುಗುತ್ತೆ. ಚಳಿಯಾದಾಗ ಮತ್ತು ಭಯವಾದಾಗ ಎನ್ನುವ ಮೂಲಕ ರಾಬರ್ಟ್ ಸಿನಿಮಾದಲ್ಲಿ ವಿಲನ್ ಜಗಪತಿಬಾಬು ಮೆರೆದಿದ್ದರೇ, ಚಿತ್ರದ ಮ್ಯೂಸಿಕ್ ಕೂಡ ಮನಗೆಲ್ಲುವಂತಿದೆ.
ಮಾರ್ಚ್ 11 ರಂದು ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿರೋ ಈ ಸಿನಿಮಾದ ಟ್ರೇಲರ್ ಕೂಡ ತೆಲುಗಿನಲ್ಲೂ ರಿಲೀಸ್ ಆಗಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿರುವ ದರ್ಶನ್ ಅಭಿಮಾನಿಗಳಿಗೆ ಮನೆಯತ್ತ ಬಾರದಂತೆ ಮನವಿ ಮಾಡಿದ್ದು, ಆಪ್ತರೊಂದಿಗೆ ಕೇಕ್ ಕತ್ತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಉಮಾಪತಿನಿರ್ಮಾಣದ ಈ ಸಿನಿಮಾದಲ್ಲಿ ದರ್ಶನ್ ನಾನು ಮಾಸ್ ಗೆ ಬಾಸ್ ಎನ್ನುತ್ತ ಅಬ್ಬರಿಸಿದ್ದು ಸಖತ್ ಆಕ್ಷ್ಯನ್ ದೃಶ್ಯ ಹಾಗೂ ಎಮೋಶನಲ್ ಬಾಂಡಿಂಗ್ಸ್ ಜೊತೆ ಸದ್ದು ಮಾಡ್ತಿದೆ. ಈ ರಾಮನಿಗೆ ಶಬರಿ ಮುಂದೇ ಸೋಲೋದು ಗೊತ್ತು ರಾವಣನ ಮುಂದೇ ಗೆಲ್ಲೋದು ಗೊತ್ತು ಅಂತಿರೋ ದಚ್ಚು ಪ್ರೇಕ್ಷಕರ ಮನಗೆಲ್ಲೋದು ಪಕ್ಕಾ ಎಂಬ ಮುನ್ಸೂಚನೆ ನೀಡ್ತಿದೆ ಟ್ರೇಲರ್.