ಬಿಗ್ ಬಾಸ್ ಮನೆಯ ವೈಶಿಷ್ಯವೇ ಅಂತಹುದ್ದು. ಎಲ್ಲೂ ಅರಳದ ಪ್ರೇಮಕಾವ್ಯಗಳು ಅಲ್ಲಿ ಆರಂಭಗೊಳ್ಳುತ್ತದೆ. ಒಂದಷ್ಟು ಮದುವೆಯಲ್ಲಿ ಕೊನೆಗೊಂಡರೇ ಮತ್ತಷ್ಟು ಹೆಸರಿಲ್ಲದೇ ಮರೆಯಾಗುತ್ತವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಎನ್ನಿಸಿರೋ ನಟಿ ವೈಷ್ಣವಿ ಈಗ ಪ್ರೀತಿ-ಪ್ರೇಮದ ಮಾತನ್ನಾಡಿದ್ದು, ಒಂಟಿತನ ಸಾಕೋ ಜಂಟಿಯಾಗೋಕೆ ಇಷ್ಟ ಪಡ್ತಿನಿ ಎಂದಿದ್ದಾರೆ.

ಮೇ 6 ರ ಎಪಿಸೋಡ್ ನಲ್ಲಿ ಅಗ್ನಿಸಾಕ್ಷಿ ಸುಂದರಿ ವೈಷ್ಣವಿ ತಮ್ಮ ಮನದ ಮಾತು ಹೇಳಿಕೊಂಡಿದ್ದು, ನನ್ನ ಜೀವನದ ಬಹುಭಾಗವನ್ನು ನಾನು ಒಂಟಿಯಾಗಿಯೇ ಕಳೆದಿದ್ದೇನೆ. ಆದರೆ ಈಗ ನನಗೂ ಮದುವೆಯಾಗಬೇಕು. ನನ್ನ ಫೀಲಿಂಗ್ ಶೇರ್ ಮಾಡಿಕೊಳ್ಳುವ ಜೀವವೊಂದು ಬೇಕು ಎನ್ನಿಸುತ್ತಿದೆ. ಹೀಗಾಗಿ ಮದುವೆಯಾಗಲು ಸಿದ್ಧವಾಗಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ದಿವ್ಯಾ ಸುರೇಶ್ ಜೊತೆ ಮಾತನಾಡುತ್ತಿದ್ದ ವೈಷ್ಣವಿ, ಮದುವೆ ಆದರೆ ನನ್ನವರು ಅಂತ ಒಬ್ಬರು ಇರ್ತಾರೆ. ಅಣ್ಣ-ಅಕ್ಕ-ತಂಗಿ-ತಮ್ಮನ ಹತ್ರ ಹೇಳಿಕೊಳ್ಳಲು ಸಾಧ್ಯವಾಗದನ್ನು ನಾವು ಗಂಡನ ಜೊತೆ ಹಂಚಿಕೊಳ್ಳಬಹುದು. ಒಂದು ಸ್ಪೆಶಲ್ ಕನೆಕ್ಷನ್ ಇರುತ್ತೆ ಗಂಡನ ಜೊತೆ ಎಂದಿದ್ದಾರೆ. ಹೀಗಾಗಿ ನಾನು ಪ್ರೀತಿ ಮಾಡಬೇಕು. ಮದುವೆಯಾಗಬೇಕು ಎನ್ನಿಸಿದೆ ಎಂದು ಮನದ ಭಾವನೆ ಹಂಚಿಕೊಂಡಿದ್ದಾರೆ.

ಈ ಮೊದಲು ಸಾಕಷ್ಟು ಭಾರಿ ವೈಷ್ಣವಿ ಪ್ರೀತಿ-ಪ್ರೇಮದ ಮಾತು ಹಂಚಿಕೊಂಡಿದ್ದರು. ನನಗೆ ಸಣ್ಣಂದಿನಿಂದಲೂ ಒಂದು ರಿಲೇಶನ್ ಶಿಪ್ ನಲ್ಲಿ ಇರಬೇಕೆಂಬ ಆಸೆ ಇತ್ತು. ಆದರೆ ಅದು ಈಡೇರಲಿಲ್ಲ. ನನ್ನ ಸ್ನೇಹಿತರೆಲ್ಲ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಎಂದು ಓಡಾಡುತ್ತಿದ್ದರೇ ನಾನು ಸಿಂಗಲ್ ಆಗಿದ್ದೆ ಎಂದಿದ್ದರು.

ಈಗ ತಾವು ಮಿಂಗಲ್ ಆಗೋಕೆ ಸಿದ್ಧ ಎಂದು ಅಗ್ನಿಸಾಕ್ಷಿ ಸನ್ನಿಧಿ ಖ್ಯಾತಿಯ ವೈಷ್ಣವಿ ಹೇಳಿರೋದು ಹಲವರಿಗೆ ಖುಷಿ ತಂದಿದ್ದು, ಸಧ್ಯದಲ್ಲೇ ಸೀರಿಯಲ್ ನಟಿ ವೈಷ್ಣವಿ ಕಲ್ಯಾಣೋತ್ಸವ ನಡೆಯೋದಂತು ಗ್ಯಾರಂಟಿ ಎನ್ನಲಾಗುತ್ತಿದೆ.
