ಸ್ಯಾಂಡಲ್‌ವುಡ್‌ ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

ಬೆಂಗಳೂರು : ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಟ ದೊಡ್ಡಣ್ಣ ಅವರಿಗೆ ಹೃದಯದ ಬಡಿತ ಕಡಿಮೆಯಾಗಿದ್ದು, ತೀರಾ ಸುಸ್ತು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮನೆಯವರು ಕೂಡಲೇ ಜಯದೇವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಈ ಹಿಂದೆ ಹೃದಯದ ಸಮಸ್ಯೆಯ ಹಿನ್ನೆಲೆಯಲ್ಲಿ ಅವರಿಗೆ ಫೇಸ್‌ ಮೇಕರ್‌ ಅಳವಡಿಸಲಾಗಿತ್ತು. ಇದೀಗ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಶಾಶ್ವತ ಫೇಸ್‌ ಮೇಕರ್‌ ಆಳವಡಿಸಲಾಗಿದ್ದು, ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರಿದಿದೆ. ದೊಡ್ಡಣ್ಣ ಅವರು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನು ಮೂರು ದಿನಗಳ ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಮಂಜುನಾಥ್‌ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಎಫ್.ಎಸ್.ಎಲ್ ವರದಿ ಎಫೆಕ್ಟ್: ದೇವರ ಮೊರೆ ಹೋದ ರಾಗಿಣಿ,ಆಸ್ಪತ್ರೆ ಸೇರಿದ ಸಂಜನಾ

ಇದನ್ನೂ ಓದಿ : ಮಗನಿಗಾಗಿ ಮತ್ತೊಮ್ಮೆ ಮದುವೆಯಾದ್ರು ಪ್ರಕಾಶ್ ರೈ: ಪೋಟೋಸ್ ವೈರಲ್

Comments are closed.