ಮಂಗಳವಾರ, ಜೂನ್ 17, 2025
HomeBreakingಗನ್ ಮ್ಯಾನ್ ಗೆ ರನ್ನನ ಬೆಲೆಬಾಳುವ ಗಿಫ್ಟ್…! ಒಡೆಯ ನೀಡಿದ ಸಪ್ರೈಸ್ ನೋಡಿ ಕಣ್ಣಿರಾದ ಅಭಿಮಾನಿ..!!

ಗನ್ ಮ್ಯಾನ್ ಗೆ ರನ್ನನ ಬೆಲೆಬಾಳುವ ಗಿಫ್ಟ್…! ಒಡೆಯ ನೀಡಿದ ಸಪ್ರೈಸ್ ನೋಡಿ ಕಣ್ಣಿರಾದ ಅಭಿಮಾನಿ..!!

- Advertisement -

ಸುದೀಪ್ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ನಲ್ಲಿ ಹೀರೋ….ಅದನ್ನು ಆಗಾಗ ಸಾಬೀತುಪಡಿಸುತ್ತಲೇ ಇರುತ್ತಾರೆ. ಈಗ ತಮ್ಮ ಬಾಡಿಗಾರ್ಡ್ ಗೆ ಬೆಲೆಬಾಳುವ ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ. 

K3 1

ಬಾಡಿಗಾರ್ಡ್ ಸಾಯಿಕಿರಣ್  ಗೆ ಬೆಲೆಬಾಳುವ  ರಾಯಲ್ ಎನ್ ಫಿಲ್ಡ್ ಬುಲೆಟ್ ನ್ನು  ಸಪ್ರೈಸ್ ಗಿಫ್ಟ್  ಆಗಿ ನೀಡಿದ್ದು,  ಸಾಯಿ ಕಿರಣ್ ಅಲಿಯಾಸ್ ಕಿಚ್ಚ್ ಕಿರಣ  ಈ ಗಿಫ್ಟ್ ನೋಡಿ ಕಣ್ತುಂಬಿಕೊಂಡಿದ್ದಾರೆ.

K2 1

ಸ್ಪರ್ಶ ಚಿತ್ರ ರಿಲೀಸ್ ಆದಾಗಿನಿಂದಲೂ ಸುದೀಪ್ ಜೊತೆಯೇ ಇರುವ ಸಾಯಿಕಿರಣ್ ಗೆ ಸುದೀಪ್ ಪ್ರತ್ಯಕ್ಷ ದೇವರಿದ್ದಂತೆ. ಅಷ್ಟು ಪ್ರೀತಿಯಿಂದ ತಮ್ಮ ಜೊತೆಗಿರುವ ಸಾಯಿಕಿರಣ್ ಗೆ ಬೈಕ್ ಖರೀದಿಸುವ ಆಸೆ ಇತ್ತಂತೆ. ಇದನ್ನು ಗಮನಿಸಿದ ಸುದೀಪ್ ಆತನಿಗೆ ಬೈಕ್ ಗಿಫ್ಟ್ ಮಾಡಿದ್ದಾರೆ.

K1 1

ತಮ್ಮ ನೆಚ್ಚಿನ ನಟ ಹಾಗೂ ಮಾಲೀಕ ನೀಡಿದ ಸಪ್ರೈಸ್ ಗಿಫ್ಟ್ ನೋಡಿದ ಸಾಯಿಕಿರಣ ಅಕ್ಷರಷಃ ಕಣ್ಣಿರಾಗಿದ್ದು, ಇದು ನನ್ನ ಬದುಕಿನಲ್ಲಿ ಸಿಕ್ಕಿದ ಬಹುದೊಡ್ಡ ಗಿಫ್ಟ್. ನಾನು ಸುದೀಪ್ ಹಾಗೂ ಅವರ ಕುಟುಂಬಕ್ಕೆ ಚಿರರುಣಿ ಎಂದಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ ಮೊದಲು ಸುದೀಪ್ ಸರ್ ಕೂರಿಸಿಕೊಂಡು ಓಡಾಡಲು ಬಯಸುತ್ತೇನೆ ಎಂದಿದ್ದಾರೆ.

Sudeep Bigboss 3 E1606633777316

ಸುದೀಪ್ ಬೈಕ್ ಗಿಫ್ಟ್ ನೀಡಿರುವ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಜೊತೆ ವೈರಲ್ ಆಗಿದ್ದು, ಜನರು ಕಿಚ್ಚ್ ನ ಹೃದಯವೈಶ್ಯಾಲತೆಯನ್ನು ಕೊಂಡಾಡುತ್ತಿದ್ದಾರೆ.

Sudeep TeachAIDS Interview

ಸಾಕಷ್ಟು ವರ್ಷಗಳಿಂದ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಸುದೀಪ್. ರೀಲ್ ನಂತೆ ರಿಯಲ್ ನಲ್ಲೂ ಪರೋಪಕಾರಿ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ರೋಗಿಗಳಿಗೆ, ಅಶಕ್ತರಿಗೆ ನೆರವಾಗಿ ಗಮನಸೆಳೆದಿದ್ದರು. ಈಗ ತಮ್ಮ ಗನ್ ಮ್ಯಾನ್ ಆಸೆ ಈಡೇರಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

RELATED ARTICLES

Most Popular