ಪಡುಮಲೆಯಲ್ಲಿ ಒಡೆಯಲಿಲ್ಲ ತೆಂಗಿನಕಾಯಿ..! ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ

ಪುತ್ತೂರು : ತುಳುನಾಡಿನ ವೀರಪುರುಷರು ಕೋಟಿ ಚೆನ್ನಯ್ಯರು. ಆದರೆ ಕೋಟಿ ಚೆನ್ನಯ್ಯರ ಮೂಲಕ್ಷೇತ್ರದ ಬಗ್ಗೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಪಡುಮಲೆಯಲ್ಲಿ ಮತ್ತೊಂದು ವಿಷಯ ಬಹುಚರ್ಚೆಗೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಪಡುಮಲೆ ಗರೋಡಿ ನಿರ್ಮಾಣ ಹಾಗೂ ಧರ್ಮಚಾವಡಿಯ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ) ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದ ಹಿನ್ನೆಲೆಯಲ್ಲಿ ಕಾಯಿ ಒಡೆಯುವ ಕಾರ್ಯವನ್ನು ನಡೆಸಲಾ ಗಿತ್ತು. ಆರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ನಂತರದಲ್ಲಿ ಹರಿಕೃಷ್ಣ ಬಂಟ್ವಾಳ್ ಹಾಗೂ ನಟ ವಿನೋದ್ ಆಳ್ವ ತೆಂಗಿನ ಕಾಯಿಯನ್ನು ಕಲ್ಲಿಗೆ ಬೀಸಿದ್ದಾರೆ. ಆದರೆ ಕಲ್ಲಿಗೆ ಹೊಡೆದ ತೆಂಗಿನ ಕಾಯಿ ಭಾಗವಾಗಲಿಲ್ಲ. ಇದು ಕೋಟಿ ಚೆನ್ನಯ್ಯರ ಮುನಿಸು ಅನ್ನೋ ಕುರಿತು ಚರ್ಚೆಗಳು ನಡೆಯುತ್ತಿವೆ.

ಕಳೆದೊಂದು ವರ್ಷದ ಹಿಂದೆಯಷ್ಟೆ ಕೋಟಿ ಚೆನ್ನಯ್ಯರು ಆಡಿ ಬೆಳೆದ ಗೆಜ್ಜೆಗಿರಿಯನ್ನು ಜೀರ್ಣೋದ್ದಾರ ಮಾಡಲಾಗಿತ್ತು. ಗೆಜ್ಜೆಗಿರಿ ಯಲ್ಲಿ ಗರೋಡಿಯನ್ನು ನಿರ್ಮಾಣ ಮಾಡಲಾಗಿತ್ತು. ಇದರ ಬೆನ್ನಲ್ಲೇ ಪಡುಮಲೆಯಲ್ಲಿ ಗರಡಿ ನಿರ್ಮಾಣಕ್ಕೆ ಸಿದ್ದತೆಗಳು ನಡೆಯುತ್ತಿದೆ. ಪಡುಮಲೆಯಲ್ಲಿ ಗರೋಡಿ ನಿರ್ಮಾಣಕ್ಕೆ ಮುಂದಾಗಿರೋದು ವಿರೋಧಕ್ಕೆ ಕಾರಣವಾಗಿದೆ. ಗೆಜ್ಜೆಗಿರಿ ತಂಡ ಯಾವುದೇ ಕಾರಣಕ್ಕೂ ಪಡುಮಲೆಯಲ್ಲಿ ಗರೋಡಿ ನಿರ್ಮಾಣ ಬೇಡಾ ಅನ್ನುತ್ತಿದೆ. ಹೀಗಾಗಿಯೇ ಕರಾವಳಿಯಲ್ಲೀಗ ಪಡುಮಲೆ – ಗೆಜ್ಜೆಗಿರಿ ವಿವಾದದ ಕೇಂದ್ರವಾಗಿದೆ.

ತುಳುನಾಡಿನ ವೀರ ಪುರುಷರು ಅಂತಾ ಕರೆಯಿಸಿಕೊಳ್ಳುವ ಕೋಟಿ ಚೆನ್ನಯ್ಯರ ಮೂಲಕ್ಷೇತ್ರ ಯಾವುದು ಅನ್ನೋ ಕುರಿತು ಬಹು ಚರ್ಚೆಗಳು ನಡೆಯುತ್ತಿದೆ. ಪಡುಮಲೆಯಲ್ಲಿ ಕೋಟಿ ಚೆನ್ನಯ್ಯ ಗರಡಿ ನಿರ್ಮಾಣಕ್ಕೆ ಗೆಜ್ಜೆಗಿರಿ ತಂಡ ವಿರೋಧ ವ್ಯಕ್ತಪಡಿಸಿದ್ರೆ, ಕೋಟಿ ಚೆನ್ನಯ್ಯರ ಮೂಲ ಕ್ಷೇತ್ರ ಪಡುಮಲೆ ಅನ್ನೋದು ಪಡುಮಲೆ ತಂಡದ ವಾದ. ಅಲ್ಲದೇ ಗೆಜ್ಜೆಗಿರಿ ನಿರ್ಮಾಣದ ಕುರಿತು ಪಡುಮಲೆ ತಂಡ ಅಪಸ್ವರವೆತ್ತಿದೆ.

https://www.youtube.com/watch?v=2N1tcnsvAtI

ಒಟ್ಟಿನಲ್ಲಿ ಕರಾವಳಿಯ ವೀರಪುರುಷರೆನಿಸಿಕೊಂಡಿದ್ದ ಕೋಟಿ ಚೆನ್ನಯ್ಯರ ಮೂಲವೇ ವಿರೋಧಕ್ಕೆ ಕಾರಣವಾಗಿರೋದು ದುರಂತವೇ ಸರಿ.

Comments are closed.