ಫ್ಯಾಂಟಮ್ ಅಡ್ಡಾದಿಂದ ಹೊರಬಿತ್ತು ಸಿಹಿಸುದ್ದಿ…! ನಿಜಕ್ಕೂ ಬಿಗ್ಗೆಸ್ಟ್ ಆನೌನ್ಸ್ಮೆಂಟ್ ಅಂದ್ರು ಕಿಚ್ಚಸುದೀಪ್…!!

ಕೊರೋನಾದಿಂದ ಸೊರಗಿದ್ದ ಸ್ಯಾಂಡಲ್ ವುಡ್ ನಲ್ಲಿ ಈಗ ಒಂದಾದ ಮೇಲೊಂದು ಬಿಗ್ ಸ್ಟಾರ್ ಸಿನಿಮಾಗಳದ್ದೇ ಸುದ್ದಿ. ಕೆಜಿಎಫ್-೨, ರಾಬರ್ಟ್,ಯುವರತ್ನ್ ಬಳಿಕ ಈಗ ಫ್ಯಾಂಟಮ್ ಅಡ್ಡಾದಿಂದ ಸಿಹಿಯಾದ ಬ್ರೇಕಿಂಗ್ ನ್ಯೂಸ್ ಬಂದಿದೆ.

ಮೊದಲು ಪೋಸ್ಟರ್ ಗಳ ಮೂಲಕ ಸುದ್ದಿ ಮಾಡ್ತಿದ್ದ ಸಿನಿಮಾಗಳು ಈಗ ಟ್ವೀಟರ್ ಮೂಲಕ ಸುದ್ದಿಮಾಡಲಾರಂಭಿಸಿವೆ. ಈ ಸಾಲಿಗೆ ಫ್ಯಾಂಟಮ್ ಕೂಡ ಸೇರ್ಪಡೆಗೊಂಡಿದ್ದು ಚಿತ್ರದ ಕುರಿತು ಜ.೨೧ ರಂದು ದೊಡ್ಡದಾದ ಅನೌನ್ಸ್ ಮೆಂಟ್ ವೊಂದು ಹೊರಬೀಳಲಿದೆಯಂತೆ.

ಈ ವಿಚಾರವನ್ನು ಸ್ವತಃ ಹೆಬ್ಬುಲಿ ಸುದೀಪ್ ಖಚಿತಪಡಿಸಿದ್ದು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ The biggest announcement of them all” Literally on Jan 21 ಎಂದಿದ್ದಾರೆ.

ಫ್ಯಾಂಟಮ್ ಚಿತ್ರೀಕರಣ ಮುಗಿದಿರುವುದಾಗಿ ಇತ್ತೀಚಿಗೆ ಚಿತ್ರತಂಡ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜನವರಿ ೨೧ ರಂದು ಚಿತ್ರದ ಬಹುನೀರಿಕ್ಷಿತ ಟೀಸರ್ ರಿಲೀಸ್ ಗೆ ಡೇಟ್ ಅನೌನ್ಸ್ ಮಾಡಬಹುದು ಎಂದು ನೀರಿಕ್ಷಿಸಲಾಗುತ್ತಿದೆ.

ಈ ಅನೌನ್ಸ್ ಮೆಂಟ್ ಜೊತೆಗೆ ಫ್ಯಾಂಟಮ್ ಕಿಂಗ್ ಸುದೀಪ್ ಬೆರಳಲ್ಲಿ ಗನ್ ಟ್ರಿಗರ್ ಹಿಡಿದು,ಮಾಸ್ಕ್ ತೊಟ್ಟ ವಿಕ್ರಾಂತ್ ರೋಣ್ ನ ಲುಕ್ ಸಹ ಬಿಡುಗಡೆ ಮಾಡಲಾಗಿದ್ದು ಸುದೀಪ್ ಫ್ಯಾನ್ಸ್ ಸಂಭ್ರಮದಲ್ಲಿದ್ದಾರೆ.

ಇತ್ತೀಚಿಗೆ ಸಿನಿಮಾದ ಡೆವಲಪ್ಮೆಂಟ್ ಬಗ್ಗೆ ನಿರ್ದೇಶಕರು ಹಾಗೂ ನಟರು ಟ್ವೀಟ್ ಮೂಲಕ ಹಿಂಟ್ ನೀಡೋದು ಕಾಮನ್ ಆಗಿದ್ದು ಅಭಿಮಾನಿಗಳನ್ನು ಚಿತ್ರದ ಬಗ್ಗೆ ತಿಳಿದುಕೊಳ್ಳಲು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗ್ತಿದೆ.

ಈಗಲೂ ಫ್ಯಾಂಟಮ್ ಅಂಗಳದಿಂದ ಬರೋ ಬಿಗ್ ಬ್ರೇಕಿಂಗ್ ನ್ಯೂಸ್ ಏನೆಂಬುದನ್ನು ಅರಿಯಲು ಕಿಚ್ಚ್ ನ ಫ್ಯಾನ್ಸ್ ಕಾತರರಾಗಿದ್ದು ಜನವರಿ ೨೧ ಕ್ಕಾಗಿ ಕಾಯ್ತಿದ್ದಾರೆ.

Comments are closed.