ಸಂಪುಟ ಆಯ್ತು,‌ ಸಿಎಂ ಬಿಎಸ್ವೈ ಮುಂದಿದೆ ಖಾತೆ ಹಂಚಿಕೆ ಸರ್ಕಸ್….!!

ಬೆಂಗಳೂರು: ಹೈಕಮಾಂಡ್ ಮತ್ತು ಸಚಿವ ಸ್ಥಾನಾಕಾಂಕ್ಷಿಗಳ ನಡುವೆ ಸಿಲುಕಿ ಕಂಗಾಲಾಗಿದ್ದ ಸಿಎಂ ಬಿಎಸ್ವೈ ಸಚಿವ ಸಂಪುಟ ವಿಸ್ತರಣೆ ಬಳಿಕ ಕೊಂಚ‌ನಿರಾಳವಾಗಿದ್ದರೂ, ಆದರೆ ಈಗ ವಿಸ್ತರಣೆ ಬಳಿಕ‌ಖಾತೆ‌ಹಂಚಿಕೆ ಕಗ್ಗಂಟು ಎದುರಾಗಿದೆ.

ರಾಜ್ಯ ಸಚಿವ ಸಂಪುಟಕ್ಕೆ ತೀವ್ರ ಪೈಪೋಟಿಯ ಬಳಿಕ ೭ ಸಚಿವರು ಸೇರ್ಪಡೆಗೊಂಡಿದ್ದು, ಆಕಾಂಕ್ಷಿತರ ಎದೆಯಲ್ಲಿ ಇನ್ನು ಕೋಧ್ರಾಗ್ನಿ ಉರಿಯುತ್ತಲೇ ಇದೆ‌.

ಇದರ ಮಧ್ಯೆಯೇ ಖಾತೆ ಹಂಚಿಕೆ ಕಗ್ಗಂಟು ಎದುರಾಗಿದ್ದು ಸಿಎಂ ಇನ್ನೆರಡು ದಿನ ದಲ್ಲಿ ಸಮಾಲೋಚನೆ ನಡೆಸಿ ಖಾತೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಸಿಎಂ ಬಿಎಸ್ವೈ ಇನ್ನೆರಡು ದಿನದಲ್ಲಿ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಆಗಲಿದೆ. ಉಡುಪಿಗೆ ತೆರಳುತ್ತಿದ್ದೇನೆ. ದೇವರ ದರ್ಶನದ ಬಳಿಕ ಮರಳಿ‌ ಬಂದು ಹಿರಿಯ ಸಚಿವರ ಜೊತೆ ಚರ್ಚಿಸಿ ಖಾತೆ ಹಂಚಲಾಗುತ್ತದೆ ಎಂದರು.

ಆದರೆ‌ ಮೂಲಗಳ ಮಾಹಿತಿ ಪ್ರಕಾರ ಖಾತೆ ಹಂಚಿಕೆ ಸಿಎಂ ಅಂದುಕೊಂಡಷ್ಟು ಸುಲಭವಾಗಿ ಮುಗಿಯುವ ಲಕ್ಷಣವಿಲ್ಲ. ಎಚ್.ನಾಗೇಶ್ ರಾಜೀನಾಮೆಯ ಬಳಿಕ ತೆರವಾದ ಅಬಕಾರಿ ಇಲಾಖೆ ಮೇಲೆ ನೂತನ ಸಚಿವರೆಲ್ಲರ ಕಣ್ಣಿದ್ದು ಮೂರಕ್ಕೂ ಹೆಚ್ಚು ನೂತನ ಸಚಿವರು ಅಬಕಾರಿ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ಹಿರಿಯ ಶಾಸಕ ಹಾಗೂ ಸಚಿವ ಉಮೇಶ್ ಕತ್ತಿ ತಮಗೆ ಪ್ರಭಲವಾದ ಇಲಾಖೆಗಳೇ ಬೇಕೆಂದಿದ್ದು ಸಿಎಂರನ್ನು ಸಂಕಷ್ಟಕ್ಕಿಡು ಮಾಡಿದೆ.

ಸಚಿವ ಲಿಂಬಾವಳಿ, ಎಂಟಿಬಿ ಇಬ್ಬರೂ ಬೆಂಗಳೂರು ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದು ಸಿಎಂ ಹಂಚಿಕೆ‌ ಮೇಲೆ ಸಚಿವರ ಭವಿಷ್ಯ ನಿಂತಿದೆ.ಒಟ್ಟಿನಲ್ಲಿ ಸಿಎಂ ಬಿಎಸ್ವೈ ಗೆ ಒಂದು ತಲೆನೋವು ಕಡಿಮೆ ಆಗ್ತಿದ್ದಂತೆ‌ ಮತ್ತೊಂದು ತಲೆನೋವು ಆರಂಭವಾಗಿದ್ದು ಸಂಪುಟ ಸಂಕಟ ಗೆದ್ದ ಸಿಎಂ ಖಾತೆ ಹಂಚಿಕೆಯನ್ನು ಯಾವ ಲೆಕ್ಕಾಚಾರ ದಲ್ಲಿ ಸರಿದೂಗಿಸುತ್ತಾರೆ ಕಾದು ನೋಡಬೇಕಿದೆ.

Comments are closed.