ನಿತ್ಯಭವಿಷ್ಯ : 20-01-2021

ಮೇಷರಾಶಿ
ಉದ್ಯೋಗದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನಲಾಭ, ಸಂಬಂಧಗಳಲ್ಲಿ ಏಳುಬೀಳು, ವಾಹನ ಕೊಳ್ಳುವಿಕೆ, ಪತ್ನಿಗೆ ಅಸಮಾಧಾನ, ಪರಿಸ್ಥಿತಿಯನ್ನು ಅರಿತುಕೊಂಡು ಮುನ್ನಡೆಯಿರಿ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಷಭರಾಶಿ
ಸಹೋದ್ಯೋಗಿಗಳಿಂದ ಸಹಕಾರ, ಮನಸ್ತಾಪ, ವೃಥಾ ಧನಹಾನಿ, ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗಬಾಧೆ, ಶತ್ರುಭಯ, ನೆರೆ ಹೊರೆಯವರಿಂದ ಕಿರಿಕಿರಿ.

ಮಿಥುನರಾಶಿ
ವ್ಯವಹಾರದಲ್ಲಿ ಏರುಪೇರು, ಹಳೆಯ ಸ್ನೇಹಿತರು ನಿಮ್ಮನ್ನು ಪುನಃ ಕಾಡುವರು, ಋಣಭಾದೆ, ಇಲ್ಲಸಲ್ಲದ ತಕರಾರು, ಹಳಸಿದ ಸಂಬಂಧವನ್ನು ಪುನಃ ಜೋಡಣೆ ಮಾಡಲು ಪ್ರಯತ್ನಿಸುವುದು, ಸ್ಥಳ ಬದಲಾವಣೆ, ಅಶುಭ ಫಲಗಳು.

ಕಟಕರಾಶಿ
ಆತುರದ ನಿರ್ಧಾರ ಬೇಡ, ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವಿದ್ಯಾ ಲಾಭ, ವಾಹನ ಪ್ರಾಪ್ತಿ, ತಟ್ಟನೆ ಉತ್ತರ ಕೊಡುವ ಸ್ವಭಾವವನ್ನು ಬದಲಿಸಿಕೊಳ್ಳಿ, ವೃತ್ತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಇಲ್ಲ.

ಸಿಂಹರಾಶಿ
ಹಳೆಯ ಮಿತ್ರರಿಂದ ಶುಭ ಸಮಾಚಾರ ಕೇಳುವಿರಿ, ಸುಮ್ಮನೆ ಕಾಲಕಳೆಯೋಕೆ ನಿಮ್ಮಿಂದ ಸಾಧ್ಯವಾಗದು, ಮನಸ್ಸಿಗೆ ಶಾಂತಿ, ಸ್ನೇಹಿತರಿಂದ ಸಹಾಯ, ಧನ ಲಾಭ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ, ನಿಷ್ಠೆ ಮತ್ತು ನಿಯತ್ತು ನಿಮ್ಮನ್ನು ಕಾಪಾಡಲಿದೆ.

ಕನ್ಯಾರಾಶಿ
ಸಹನೆಯಿಂದ ನೆಮ್ಮದಿ, ಮನೆಯಲ್ಲಿ ಅನಗತ್ಯ ಕಿರಿಕಿರಿ ಮಾಡಿಕೊಳ್ಳಬೇಡಿ, ದುಃಖದಾಯಕ ಪ್ರಸಂಗಗಳು, ಪಾಪಬುದ್ಧಿ, ಧನಹಾನಿ, ಅಧಿಕ ಖರ್ಚು, ದ್ರವ್ಯನಾಶ, ಭಯ ಭೀತಿ, ಅಶುಭ ಫಲಗಳು.

ತುಲಾರಾಶಿ
ಅವಸರದ ತೀರ್ಮಾನಗಳಿಂದ ದೂರವಿರಿ, ಸಾಂಸಾರಿಕ ಸಂಘರ್ಷಗಳಲ್ಲಿ ಯಶಸ್ಸು, ನಾನಾ ರೀತಿಯ ಸಂಪಾದನೆ, ಗುರು ಹಿರಿಯರಲ್ಲಿ ಭಕ್ತಿ, ಮನಸ್ಸಿನಲ್ಲಿ ಭಯ ಭೀತಿ.

ವೃಶ್ಚಿಕರಾಶಿ
ಹಿಂದೆ ಮಾಡಿದ ತಪ್ಪುಗಳನ್ನು ಪುನರಾವರ್ತನೆ ಮಾಡಬೇಡಿ, ವಾಹನ ಸಂಚಾರದಿಂದ ಲಾಭ, ವಸ್ತ್ರ ಖರೀದಿಸುವಿರಿ, ಸಂಬಂಧಿಕರ ಸಮಸ್ಯೆಗಳನ್ನು ಪರಿಹಾರ ಮಾಡುವಿರಿ, ಸುಖ ಭೋಜನ ಪ್ರಾಪ್ತಿ,ಮನಕ್ಲೇಷ.

ಧನಸುರಾಶಿ
ಸಂಕಷ್ಟಕ್ಕೆ ಒಳಗಾಗುವಿರಿ, ಗೆಳೆಯರಿಂದ ವಂಚನೆ, ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥಸಿದ್ಧಿ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ.

ಮಕರರಾಶಿ
ಸಾಂಸಾರಿಕವಾಗಿ ಸಮಸ್ಯೆಗಳು ಎದುರಾಗಲಿದೆ, ಮೌನದಿಂದ ಕಾರ್ಯಾನೂಕೂಲ, ಸಹನೆ ಕಳೆದುಕೊಳ್ಳಬೇಡಿ, ಆರೋಗ್ಯದಲ್ಲಿ ಏರುಪೇರು, ಬಂಧು ಮಿತ್ರರಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ.

ಕುಂಭರಾಶಿ
ಸಂಬಂಧಿಕರ ಒತ್ತಾಯಕ್ಕೆ ಮಣಿದು ಯಾರನ್ನೂ ಒಪ್ಪಿಕೊಳ್ಳದಿರಿ, ಜಾಣತನದಿಂದ ವ್ಯವಹರಿಸುವುದರಿಂದ ಯಶಸ್ಸು, ಮನಸ್ಸು ಚಂಚಲ, ಎಲ್ಲಿ ಹೋದರು ಅಶಾಂತಿ, ಯತ್ನ ಕಾರ್ಯಗಳಲ್ಲಿ ವಿಳಂಬ.

ಮೀನರಾಶಿ
ಆತ್ಮವಿಶ್ವಾಸದಿಂದ ಯಶಸ್ಸು, ಭಾವುಕ ಸನ್ನಿವೇಶ ಎದುರಾಗಲಿದೆ, ಕೃಷಿಯಲ್ಲಿ ಅಭಿವೃದ್ಧಿ, ಋಣ ವಿಮೋಚನೆ, ಮಾತುಮಾತಿಗೆ ಸಿಡುಕಿ ಬಾವೋದ್ವೇಗಕ್ಕೆ ಒಳಗಾಗದಿರಿ, ಆರೋಗ್ಯ ಭಾಗ್ಯ ಪ್ರಾಪ್ತಿ, ದಾನ ಧರ್ಮದಲ್ಲಿ ಆಸಕ್ತಿ.

Comments are closed.