ಕೃಷಿ ಭೂಮಿಯಲ್ಲಿ ಕುಬ್ಜ…..! ವೀಕೆಂಡ್ ಲಾಕ್ ಡೌನ್ ನಲ್ಲಿ ಉಪ್ಪಿ ಫುಲ್ ಬ್ಯುಸಿ…!!

ಎಲ್ಲೆಡೆ ಕೊರೋನಾ ಎರಡನೇ ಅಲೆ ಜೋರಾಗಿದ್ದು ಜೀವನಾವಶ್ಯಕ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧವಾಗಿದೆ. ಹೀಗಾಗಿ ಸಿನಿಮಾ ನಟ-ನಟಿಯರು ಫುಲ್ ಫ್ರೀ ಆಗಿದ್ದಾರೆ. ಕಬ್ಜ ಶೂಟಿಂಗ್ ನಿಂದ ಬಿಡುವು ಪಡೆದ ಉಪೇಂದ್ರ್ ಕೂಡ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.

ನಟ,ನಿರ್ದೇಶನ,ರಾಜಕೀಯದ ಜೊತೆ ಕೃಷಿಯಲ್ಲೂ ಸಮಾನ ಆಸಕ್ತಿ ಹೊಂದಿರುವ ಉಪೇಂದ್ರ್ ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ತಮ್ಮ ಫಾರಂ ಹೌಸ್ ಸೇರಿದ್ದಾರೆ.

ಬೆಂಗಳೂರು ಹೊರವಲಯದಲ್ಲಿ ಫಾರ್ಂ ಹೌಸ್ ಖರೀದಿಸಿದ್ದ ಉಪೇಂದ್ರ ಅಲ್ಲಿಯೇ ದೊಡ್ಡದಾದ ಮನೆ ಕಟ್ಟಿ ವಾಸಮಾಡಲಾರಂಭಿಸಿದ್ದರು.

ಸದ್ಯ ಕುಬ್ಜ ಶೂಟಿಂಗ್ ಕೊರೋನಾ ಎರಡನೆ ಅಲೆಯ ಕಾರಣಕ್ಕೆ ಸ್ಥಗಿತಗೊಂಡಿದೆ. ಹೀಗಾಗಿ ಉಪೇಂದ್ರ ಬಿಡುವಿನಲ್ಲಿದ್ದು, ಜಮೀನು ಕೆಲಸಕ್ಕೆ ಇಳಿದಿದ್ದಾರೆ.ಪ್ಯಾಂಟ್ ಅರ್ಧಕ್ಕೆ‌ ಮಡಚಿ ಗುದ್ದಲಿ ಹಿಡಿದು ಉಪೇಂದ್ರ ಮಣ್ಣಲ್ಲಿ ಕೆಲಸ ಮಾಡುತ್ತಿರುವ ಪೋಟೋಗಳು ವೈರಲ್ ಆಗಿವೆ.

ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಈ ಪೋಟೋಗಳನ್ನು ಹಾರ್ಟ್ ಇಮೋಜಿ ಜೊತೆ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.ಉಪೇಂದ್ರ ಕೂಡ ತಮ್ಮ ಫೇಸ್ ಬುಕ್ ನಲ್ಲಿ ಪೋಟೋ ಹಂಚಿಕೊಂಡಿದ್ದು ಕಾಯಕವೇ ಕೈಲಾಸ್ ಎಂದು ಟ್ಯಾಗ್ ಲೈನ್ ನೀಡಿದ್ದಾರೆ.

ಸ್ಯಾಂಡಲ್ ವುಡ್ ನಟರ ಪೈಕಿ ಉಪೇಂದ್ರ,ದರ್ಶನ್, ಕಿಶೋರ್ ಸೇರಿದಂತೆ ಹಲವರು ಕೃಷಿಯಲ್ಲಿ ಆಸಕ್ತಿ ಹೊಂದಿದ್ದು ಬಿಡುವಿನ ವೇಳೆಯಲ್ಲಿ ತಮ್ಮ ಫಾರಂಹೌಸ್ ಸೇರಿ ಕೃಷಿ ಚಟುವಟಿಕೆಯಲ್ಲಿ ಸಮಯ ಕಳೆಯುತ್ತಾರೆ.

Comments are closed.