SSLC ಫಲಿತಾಂಶ ಪ್ರಕಟ : 6 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

0

ಬೆಂಗಳೂರು : ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಮಧುಗಿರಿ ಮೂರು, ಮಂಡ್ಯ ನಾಲ್ಕು ಹಾಗೂ ಚಿತ್ರದುರ್ಗ 5ನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಉಡುಪಿ 7, ದಕ್ಷಿಣ ಕನ್ನಡ 12 ಹಾಗೂ ಶಿರಸಿ 15ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 6 ವಿದ್ಯಾರ್ಥಿಗಳು 625 ಅಂಕಗಳಲ್ಲಿ 625 ಅಂಕ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಶಿರಸಿಯ ಸನ್ನಿಧಿ ಹೆಗಡೆ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಎನಿಸಿದ್ದಾರೆ. ಶಿರಸಿ ಸರ್ಕಾರಿ ಮಾರಿಕಾಂಬ ಪಿಯು ಕಾಲೇಜಿನ ಸನ್ನಿಧಿ ಮಹಾಬಲೇಶ್ವರ ಹೆಗಡೆ 625, ಬೆಂಗಳೂರು ಸ್ಕೋಟೆಂಟ್ ಸೆಂಟ್ ಮೇರಿಸ್ ಹೈಸ್ಕೂಲ್ ನ ಚಿರಾಯು ಕೆ.ಎಸ್. 625, ಬೆಂಗಳೂರು ನಾರ್ಥ್ ಪೂರ್ಣಪ್ರಜ್ಞಾ ಎಜುಕೇಷನ್ ಸೆಂಟರ್ ನ ನಿಖಿಲೇಶ್ ಎನ್ ಮರಳಿ 625 ಪಡೆದುಕೊಂಡಿದ್ದಾರೆ

ಮಂಡ್ಯ ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲೀಷ್ ಮೀಡಿಯಂ ಬಾಯ್ಸ್ ಹೈಸ್ಕೂಲಿನ ದೀರಜ್ ರೆಡ್ಡಿ ಎಂ.ಪಿ. 625, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಮಾರಸ್ವಾಮಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನ ಅನುಷಾ ಎ ಎಲ್ 625, ಚಿಕ್ಕಮಗಳೂರು ಸೆಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್ ಹೈಸ್ಕೂಲ್ ತನ್ಮಯಿ ಐ ಪಿ 625 ಅಂಕ ಪಡೆದುಕೊಂಡಿದ್ದಾರೆ.

Leave A Reply

Your email address will not be published.