ಹಿರಿಯ ಕಲಾವಿದರ ಬಳಿಕ ಶಿಕ್ಷಕರಿಗೆ ಸಹಾಯಹಸ್ತ….! ರಿಯಲ್ ಲೈಫ್ ನಲ್ಲೂ ಮಾದರಿಯಾದ ಕಿಚ್ಚ ಸುದೀಪ್…!!

ಕೊರೋನಾ ಎರಡನೇ ಅಲೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಸಹಾಯಕ್ಕೆ ಮುಂದಾಗಿದ್ದರು. ಹಿರಿಯ ಕಲಾವಿದರ ಬಳಿಕ ಈಗ ಶಿಕ್ಷಕರಿಗೆ ಸುದೀಪ್ ಸಹಾಯಹಸ್ತ ಚಾಚಿದ್ದಾರೆ.

ಈಗಾಗಲೇ ಚಾಮರಾಜನಗರ ಕೊರೋನಾ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಆರ್ಥಿಕ ಹಾಗೂ ಶಿಕ್ಷಣಕ್ಕೆ ಸಹಾಯ ಒದಗಿಸುವುದಾಗಿ ಸುದೀಪ್ ಘೋಷಿಸಿದ್ದಾರೆ.

ಅಲ್ಲದೇ ಕಿಚ್ಚ್ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಮಧ್ಯಾಹ್ನದ ಕೈತುತ್ತು ಯೋಜನೆ ಆರಂಭಿಸಿದ್ದು ನಗರದಲ್ಲಿರೋ ಅಗತ್ಯವುಳ್ಳವರಿಗೆ ಮಧ್ಯಾಹ್ನದ ಊಟ ತಲುಪಿಸುತ್ತಿದೆ.

https://kannada.newsnext.live/bjp-central-president-instructed-to-hold-a-meeting-of-bjp-legislators/

ಇದರೊಂದಿಗೆ ಆಕ್ಸಿಜನ್ ಸಿಲಿಂಡರ್ ಸಪ್ಲೈ, ಹಿರಿಯ ಸಿನಿ‌ಕಲಾವಿದರಿಗೆ ವಿಶೇಷ ದಿನಸಿ ಕಿಟ್ ಸೇರಿದಂತೆ ಕೊರೋನಾ ಸಂತ್ರಸ್ತರಿಗೆ ಸಾಕಷ್ಟು ಸಹಾಯ‌ಮಾಡಿದ್ದಾರೆ.ಈಗ ಕೊರೋನಾದ‌‌ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ತೊಂದರೆಗೊಳಗಾದ ಶಿಕ್ಷಕರಿಗೆ ಸಹಾಯ ಮಾಡಲು ಸುದೀಪ್ ನಿರ್ಧರಿಸಿದ್ದಾರಂತೆ.

https://kannada.newsnext.live/astrology-daily-horoscope-12/

ಈ ಬಗ್ಗೆ ಕಿಚ್ಚ್ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಈ ಬಗ್ಗೆ ಮಾಹಿತಿ ನೀಡಿದೆ. ಮೊದಲ ಹಂತದಲ್ಲಿ ಅಗತ್ಯ ಉಳ್ಳ ೫೦ ಶಿಕ್ಷಕರಿಗೆ ತಲಾ ೨ ಸಾವಿರ ರೂಪಾಯಿ ನೀಡಲು ಸುದೀಪ್ ಮುಂದಾಗಿದ್ದಾರೆ.

ಅಗತ್ಯ ಉಳ್ಳವರು ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದಾಗಿದೆ. ಅಗತ್ಯ ಉಳ್ಳ ಶಿಕ್ಷಕರು 6360334455 ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಲು ಕೋರಲಾಗಿದೆ..

Comments are closed.