48 ಅಡಿ ಉದ್ದದ ಕೇಕ್ ನಲ್ಲಿ ಮೂಡಿಬಂತು ರಾಮಸೇತು…! ಸೂರತ್ ಬೇಕರಿಯ ವಿಭಿನ್ನ ವಿಭಿನ್ನ ಶ್ರೀರಾಮಭಕ್ತಿ…!!

ಸೂರತ್: ದೇಶದೆಲ್ಲೆಡೆ ರಾಮಮಂದಿರ ನಿರ್ಮಾಣದ ಧನ ಸಂಗ್ರಹ ಅಭಿಯಾನ ಚುರುಕುಗೊಂಡಿದೆ. ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಧನಸಹಾಯ ಮಾಡಿ ರಾಮಮಂದಿರ ನಿರ್ಮಾಣದ ಪುಣ್ಯಕಾರ್ಯದಲ್ಲಿ ಭಾಗಿಯಾದ ಸಂಭ್ರಮದಲ್ಲಿದ್ದಾರೆ. ಈ ಮಧ್ಯೆ ಸೂರತ್ ನ ಬೇಕರಿಯೊಂದು 48 ಅಡಿ ಉದ್ದದ ರಾಮಸೇತು ನಿರ್ಮಿಸಿದ್ದಲ್ಲದೇ ಬರೋಬ್ಬರಿ 1.01111 ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದೆ.

48 ಕಿಲೋಮೀಟರ್ ದೂರದ ರಾಮಸೇತುವಿನ ಪ್ರತೀಕವಾಗಿ ಈ ಕೇಕ್ ರಚಿಸಲಾಗಿದ್ದು, ಇದರಲ್ಲಿ ರಾಮನ ಪಾದಗಳನ್ನು ಹೋಲುವ ಪಾದಗಳ ಡಿಸೈನ್ ಹಾಗೂ ರಾಮಸೇತುವನ್ನು ನಿರ್ಮಿಸಿದ ಪ್ರತೀಕವಾದ ಚಿಕ್ಕ ಚಿಕ್ಕ ಕಲ್ಲುಗಳನ್ನು ಸಿದ್ಧಪಡಿಸಲಾಗಿದೆ.

ಸೂರತ್ ನ ಬ್ರೆಡ್ ಲೈನರ್ ಎಂಬ ಬೇಕರಿ ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸುವಂತೆ ಜನರನ್ನು ಪ್ರೇರೇಪಿಸಲು ಹಾಗೂ ಧನಸಹಾಯಕ್ಕೆ ಮುಂದಾಗುವಂತೆ ಜನರಿಗೆ ಉತ್ತೇಜನ ನೀಡಲು  ಈ ರಾಮಸೇತು ಕೇಕ್ ನಿರ್ಮಿಸಲಾಗಿದೆ ಎಂದಿದೆ.

ಕೇವಲ ಕೇಕ್ ನಿರ್ಮಾಣ ಮಾತ್ರವಲ್ಲದೇ ಈ ಬೇಕರಿಯ ಅಂದಾಜು 200 ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಒಂದು ದಿನದ ಸ್ಯಾಲರಿಯ ಮೊತ್ತ 101111 ರೂಪಾಯಿಗಳನ್ನು ರಾಮಮಂದಿರ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಿದ್ದಾರೆ.

ಬೇಕರಿಯಲ್ಲಿ ಈ ರಾಮಸೇತು ಕೇಕ್ ನ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದರಿಂದ ಸಂಗ್ರಹವಾಗುವ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ಡೊನೇಟ್ ಮಾಡಲು ಬೇಕರಿ ಮಾಲೀಕರು ನಿರ್ಧರಿಸಿದ್ದಾರೆ.

https://www.instagram.com/s/aGlnaGxpZ2h0OjE3ODY4NTQ0NDMzMjc1NDE0?igshid=6h5m05kvzymx&story_media_id=2506536924983234480_3610856853

ಅಲ್ಲದೇ ಈ ಕೇಕ್ ನ್ನು ಗ್ರಾಂದಲ್ಲಿ ಹಂಚಲು  ಕೂಡ ಬೇಕರಿ ನಿರ್ಧರಿಸಿದೆ.

Comments are closed.