
ಕೊಡಗು : ಕಾಫಿನಾಡು ಮಲೆನಾಡು ಈ ಬಾರಿಯ ಆಶ್ಲೇಷಾ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಪುಣ್ಯಕ್ಷೇತ್ರ ತಲಕಾವೇರಿಯ ದೇವಸ್ಥಾನದ ರಸ್ತೆ ಭೂಕುಸಿತರಿಂದ ಬಂದ್ ಆಗಿತ್ತು. ಆದ್ರೀ ಕೊಡಗು ಜಿಲ್ಲಾಡಳಿತ ರಸ್ತೆಯನ್ನು ತೆರವುಗೊಳಿಸಿದ್ದು, ದೇವಸ್ಥಾನ ಭಕ್ತರದ ದರ್ಶನಕ್ಕೆ ಸಿದ್ದಗೊಂಡಿದೆ.

ಕಳೆದೊಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆ ಕೊಡಗು ಜಿಲ್ಲೆಯಲ್ಲಿ ಇನ್ನಿಲ್ಲದ ಅವಾಂತರವನ್ನು ಸೃಷ್ಟಿಸಿತ್ತು. ತಲಕಾವೇರಿಯ ಪುಣ್ಯಕ್ಷೇತ್ರದ ಅರ್ಚಕರು ಸೇರಿದಂತೆ 5 ಮಂದಿ ಭೂ ಸಮಾಧಿಯಾಗಿದ್ದರು. ತಲಕಾವೇರಿಗೆ ಬರುವ ರಸ್ತೆಯ ತುಂಬೆಲ್ಲಾ ಮಣ್ಣು ತುಂಬಿಕೊಂಡಿತ್ತು. ಆದ್ರೀಗ ಜಿಲ್ಲಾಡಳಿತ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರೆವು ಮಾಡಿದ್ದು, ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

ಇನ್ನೊಂದಡೆ ತಲಕಾವೇರಿ ರಸ್ತೆಯ ಆವರಣವನ್ನು ಶುಚಿಗೊಳಿಸಲಾಗಿದ್ದು, ಭಕ್ತರು ದೇವಸ್ಥಾನದ ಆವರಣದಲ್ಲಿ ಶುಚಿಗೊಳಿಸಲಾಗಿದೆ. ಹೀಗಾಗಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಎಂದಿನಂತೆಯೇ ನಡೆಯಲಿವೆ ಎಂದು ಕೊಡಗು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.