ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದಾತನಿಗೆ 3 ಲಕ್ಷ ದಂಡ, 5 ತಿಂಗಳು ಜೈಲು !

0

ಮಲೇಷ್ಯಾ : ಕೊರೊನಾ ವೈರಸ್ ಸೋಂಕು ಹರಡುವಿಕೆಯ ಹಿನ್ನೆಲೆಯ ಕ್ವಾಂಟೈನ್ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದೆ. ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ಕೋರ್ಟ್‌ ಮೂರು ಲಕ್ಷ ರೂಪಾಯಿ ದಂಡ ಹಾಗೂ ಐದು ತಿಂಗಳು ಜೈಲು ಶಿಕ್ಷೆ ವಿಧಿಸಿದ ಅಪರೂಪದ ಘಟನೆ ಮಲೇಷಿಯಾದಲ್ಲಿ ನಡೆದಿದೆ.

ಕರೊನಾ ಸೋಂಕು ತಡೆಯಲು ಮಲೇಷಿಯಾ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ವಿದೇಶಗಳಿಂದ ಬರುವವರಿಗೆ ಕಡ್ಡಾಯ ಹೋಂ ಕ್ವಾರಂಟೈನ್‌ ಮಾಡಲಾಗುತ್ತಿದೆ. ಇತ್ತೀಚಿಗೆ ಮಲೇಷಿಯಾದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಮಲೇಷ್ಯಾದ ಇಂಥ ಕಠಿಣ ಶಿಕ್ಷೆಗೆ ಗುರಿಯಾಗಿರುವಾತ ಭಾರತೀಯ. ಕೌಲಾಲಂಪುರದಲ್ಲಿ ರೆಸ್ಟೋರೆಂಟ್‌ ನಡೆಸುತ್ತಿರುವ 57 ವರ್ಷದ ಭಾರತೀಯನಿಗೆ ಇಂಥದ್ದೊಂದು ಶಿಕ್ಷೆ ವಿಧಿಸಲಾಗಿದೆ.

ತವರಿಗೆ ಮರಳಿದ್ದ ವ್ಯಕ್ತಿ ಜುಲೈ ತಿಂಗಳಲ್ಲಿ ಕೌಲಾಲಂಪುರಕ್ಕೆ ವಾಪಸ್‌ ಆಗಿದ್ದ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ವರದಿ ಬಂದಿತ್ತು. ಆದರೂ ನಿಯಮದ ಪ್ರಕಾರ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು.

ಆದರೆ ಈತ ಅದನ್ನು ಉಲ್ಲಂಘನೆ ಮಾಡಿ ಪದೇ ಪದೇ ರೆಸ್ಟೋರೆಂಟ್‌ಗೆ ಬಂದು ಹೋಗಿದ್ದ. ಎರಡನೇ ಬಾರಿಗೆ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ವರದಿ ಬಂದಿತ್ತು. ಅಂದರೆ ಕರೊನಾ ಸೋಂಕು ದೃಢಪಟ್ಟಿತು. ಈತನ ಜತೆಗೆ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವವರು ಸೇರಿದಂತೆ ಅವರ ಮನೆಯ 12 ಜನರಿಗೂ ಸೋಂಕು ದೃಢಪಟ್ಟಿದೆ.

ಸದ್ಯ ಸೋಂಕಿತ ಆ ವ್ಯಕ್ತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹರಡಲು ಕಾರಣರಾಗಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಆ ವ್ಯಕ್ತಿಯ ವಿರುದ್ಧ ಸ್ಥಳೀಯ ಪೊಲೀಸರಿಗೆ ದೂರು ನೀಡಿತ್ತು. ಇದರ ಅನ್ವಯ ಆರೋಪಿಯನ್ನು ಆಸ್ಫತ್ರೆಯಲ್ಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸ್ಥಳೀಯ ನ್ಯಾಯಾಲಯ ವಿಚಾರಣೆ ನಡೆಸಿತ್ತು.


ಆರೋಪಿ ಕ್ವಾರಂಟೈನ್‌ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ನ್ಯಾಯಾಲಯ ದಂಡ ಮತ್ತು 5 ತಿಂಗಳ ಶಿಕ್ಷೆ ವಿಧಿಸಿದೆ.

Leave A Reply

Your email address will not be published.