ಸರ್ಜಾ ಕುಟುಂಬಕ್ಕೆ ಮತ್ತೊಂದು ಗುಡ್ ನ್ಯೂಸ್….! ಸಂಭ್ರಮದಲ್ಲಿ ಧ್ರುವ್ ಸರ್ಜಾ…!!

ಒಂದಾದ ಮೇಲೊಂದು ಕಷ್ಟ ಗಳನ್ನೇ ನೋಡುತ್ತ ಬಂದ ಸರ್ಜಾ ಕುಟುಂಬಕ್ಕೆ ಇದೀಗ ಒಂದೊಂದೆ ಖುಷಿ ವಿಚಾರ ಎದುರಾಗುತ್ತಿದ್ದು ಒಂದು ಮಗನನ್ನು ಕಳೆದುಕೊಂಡ ಮನೆಗೆ ಮತ್ತೊಂದು ಮಗ ಸಾಧನೆಯ ಮೂಲಕ ಸಂಭ್ರಮ ತರುವ ಪ್ರಯತ್ನ ಮಾಡ್ತಿದ್ದಾರೆ.

ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಬಹುನೀರಿಕ್ಷಿತ ಪೊಗರು ಚಿತ್ರ ಕನ್ನಡ ಮತ್ತು ತೆಲುಗು ಜೊತೆ ಇದೀಗ ತಮಿಳಿಗೂ ಕಾಲಿಟ್ಟಿದ್ದು, ತಮಿಳಿನಲ್ಲೂ ಚಿತ್ರ ರಿಲೀಸ್ ಮಾಡಲು ಚಿತ್ರ ತಂಡ ಸಿದ್ಧತೆ ಮಾಡಿಕೊಂಡಿದೆ.

ಪೊಗರು ತಮಿಳು ವರ್ಸನ್ ಮೂಲಕ ಧ್ರುವ್ ಸರ್ಜಾ ಕನ್ನಡ,ತೆಲುಗು ಜೊತೆ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ತಮಿಳಿನಲ್ಲಿ ಪೊಗರು ಚಿತ್ರಕ್ಕೆ ಸೆಮ್ಮಾ ತಿಮಿರು ಎಂದು ಹೆಸರಿಡಲಾಗಿದ್ದು, ಈಗಾಗಲೇ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಇನ್ನೂ ಪೊಗರು ಹಿಂದಿ ರೈಟ್ಸ್ ಕೂಡಾ ಸೇಲ್ ಆಗಿದ್ದು ಹಿಂದಿಯಲ್ಲೂ ಚಿತ್ರ ಬರಲಿದೆ ಎನ್ನಲಾಗುತ್ತಿದೆ‌.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಪೊಗರು ಡಿಸೆಂಬರ್ 25 ಕ್ಕೆ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಎಫೆಕ್ಟ್ ನಿಂದ ಜನರು ಇನ್ನೂ ಸರಿಯಾಗಿ ಥಿಯೇಟರ್ ನತ್ತ ಮುಖ ಮಾಡಿಲ್ಲ. ಹೀಗಾಗಿ ಫಿಲ್ಮ್ ರಿಲೀಸ್ ತೆ ತಂಡ ಮನಸ್ಸು ಮಾಡಿಲ್ಲ.

ಎಲ್ಲ ಪರಿಸ್ಥಿತಿ ಸರಿ ಹೋದಲ್ಲಿ 2021 ರ ಜನವರಿಯಲ್ಲಿ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಚಿತ್ರದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿವೆ.

ಪೊಗರು ಹಿರೋಯಿನ್ ರಶ್ಮಿಕಾ ಮಂದಣ್ಣ ಈಗಾಗಲೇ ತಮಿಳಿನ ಸುಲ್ತಾನ್ ಚಿತ್ರದಲ್ಲಿ ನಟಿಸಿದ್ದು ರಿಲೀಸ್ ಗೆ ಕಾಯ್ತಿದ್ದಾರೆ. ಹೀಗಾಗಿ ರಶ್ಮಿಕಾ ಗೆ ಇದು ಎರಡನೇ ತಮಿಳು ಚಿತ್ರವಾಗಲಿದ್ದು ಧ್ರುವ್ ರನ್ನು ತಮಿಳು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸಧ್ಯದ ಕುತೂಹಲ.

ಪೊಗರು ಬಳಿಕ ಧ್ರುವ್ ಸರ್ಜಾ ದುಬಾರಿಗೆ ಜೈ ಎಂದಿದ್ದು ಚಿತ್ರೀಕರಣದ ಹಂತದಲ್ಲಿದೆ. ಈ ಮಧ್ಯೆ ಧ್ರುವ್ ಇನ್ನಷ್ಟು ಆಫರ್ ಗಳನ್ನು ಪಡೆದುಕೊಂಡಿದ್ದು ನಟನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ‌

Comments are closed.