ಮಂಗಳವಾರ, ಏಪ್ರಿಲ್ 29, 2025
HomeBreakingಕೋಟಿಗೇರಿತು ತಮನ್ನಾ ಸಂಭಾವನೆ…! ಲವ್ ಮಾಕ್ಟೇಲ್ ರಿಮೇಕ್ ಗೆ ಡಿಮ್ಯಾಂಡ್ ಮುಂದಿಟ್ಟ ಬೆಡಗಿ…!!

ಕೋಟಿಗೇರಿತು ತಮನ್ನಾ ಸಂಭಾವನೆ…! ಲವ್ ಮಾಕ್ಟೇಲ್ ರಿಮೇಕ್ ಗೆ ಡಿಮ್ಯಾಂಡ್ ಮುಂದಿಟ್ಟ ಬೆಡಗಿ…!!

- Advertisement -

ಕನ್ನಡದಲ್ಲಿ ನವಿರಾದ ಪ್ರೇಮಕತೆಯ ಮೂಲಕ  ಗೆದ್ದ ಲವ್ ಮಾಕ್ಟೇಲ್ ಸಿನಿಮಾ  ತೆಲುಗಿಗೆ ರಿಮೇಕ್ ಆಗ್ತಿರೋದು ಈಗ ಹಳೆ ಸುದ್ದಿ. ಆದರೆ ಈಗ ಲವ್ ಮಾಕ್ಟೇಲ್ ರಿಮೇಕ್ ಅಂಗಳದಲ್ಲಿ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಲವ್ ಮಾಕ್ಟೆಲ್ ಸಿನಿಮಾಗಾಗಿ ದಕ್ಷಿಣ ಭಾರತದ ನಟಿ ತಮನ್ನಾ ತಮ್ಮ ಸಂಭಾವನೆಯನ್ನು ದೀಢೀರ ಏರಿಸಿಕೊಂಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಉಳಿಸಿಕೊಂಡಿರೋ ತಮನ್ನಾ ಲವ್ ಮಾಕ್ಟೇಲ್ ಗಾಗಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಚಿತ್ರವೊಂದಕ್ಕೆ 60 ರಿಂದ 80 ಲಕ್ಷ ಸಂಭಾವನೆ ಪಡೆಯುತ್ತಿದ್ದ ತಮನ್ನಾ ಲವ್ ಮಾಕ್ಟೇಲ್ ಗಾಗಿ ಬರೋಬ್ಬರಿ 2.5 ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ.

ದಿಢೀರ್ ತಮನ್ನಾ ಸಂಭಾವನೆ ರೇಟ್ ಏರಿಸಿಕೊಂಡಿದ್ದರೂ ಚಿತ್ರತಂಡ ನೀಡಲು ಒಪ್ಪಿಕೊಂಡಿದ್ದು, ರಿಮೇಕ್ ಕಾರ್ಯ ಭರದಿಂದ ಸಾಗಿದೆ. ಲವ್ ಮಾಕ್ಟೇಲ್ ನಲ್ಲಿ ತಮನ್ನಾ ಯುವನಟ ಸತ್ಯದೇವ್ ಕಂಚರಣ ಗೆ ಜೋಡಿಯಾಗಿದ್ದಾರೆ. ಯುವನಟನೊಂದಿಗೆ ನಟಿಸುತ್ತಿರೋದಿಕ್ಕೆ ತಮ್ಮ ಸಂಭಾವನೆ ಏರಿಸಿಕೊಂಡಿರೋದಾಗಿ ತಮನ್ನಾ ಹೇಳಿದ್ದಾರಂತೆ.

ಕನ್ನಡದಲ್ಲಿ ಗೆದ್ದ ಲವ್ ಮಾಕ್ಟೇಲ್ ತಮಿಳು ಹಾಗೂ ತೆಲುಗಿನಲ್ಲೂ ರಿಮೇಕ್ ಗೆ ಸಿದ್ಧವಾಗಿದ್ದು, ಸಧ್ಯದಲ್ಲೇ  ಎರಡು ಭಾಷೆಗಳಲ್ಲೂ ನವಿರಾದ ಪ್ರೇಮಕತೆಯೊಂದು  ತೆರೆಗೆ ಬರಲಿದೆ.

RELATED ARTICLES

Most Popular