ಏನಿದು ಜಗವೇ ಹೊಸದು…! ಮೋಡಿ ಮಾಡೋ ಸಂಚಿತ್ ಧ್ವನಿಯಲ್ಲಿ ಮನಸೆಳೆದ ಹಾಡು…!!

ಸ್ಯಾಂಡಲ್ ವುಡ್ ನಲ್ಲಿ ಒಂದಾದ ಮೇಲೊಂದು ಹಾಡುಗಳು ಬಿಡುಗಡೆಯಾಗುತ್ತಿದ್ದು, ಕೇಳುಗರ ಮನತಟ್ಟುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ ಕಾಲವೇ ಮೋಸಗಾರ ಚಿತ್ರ ಏನಿದು ಜಗವೇ ಹೊಸದು ಸಾಂಗ್.

 ಮೋಡಿ ಮಾಡೋ ಸಂಚಿತ್ ಹೆಗ್ಡೆ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡು ಯುವಜನತೆಯ ಮನತಟ್ಟುತ್ತಿದ್ದು ಸಖತ್ ಹಿಟ್ ಆಗ್ತಿದೆ. ಕವಿರತ್ನ ವಿ.ನಾಗೇಂದ್ರ್ ಪ್ರಸಾದ್ ಈ ಹಾಡು ರಚಿಸಿದ್ದು, ಬಹುಮುಖ ಪ್ರತಿಭೆ ಸಂಜಯ್ ವಾದತ್ ಕಾಲವೇ ಮೋಸಗಾರ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಬಹುಭಾಷೆಯಲ್ಲಿ ತೆರೆಗೆ ಬರ್ತಿರೋ ಈ ಸಿನಿಮಾದಲ್ಲಿ ಹೊಸತನ ತುಂಬಿದ ಹಾಡುಗಳನ್ನು ವಿ.ನಾಗೇಂದ್ರ ಪ್ರಸಾದ್ ರಚಿಸಿಕೊಟ್ಟಿದ್ದು, ಕೆ.ಲೋಕೇಶ್ ಸಂಗೀತಕ್ಕೆ ಸಂಚಿತ್ ವಾಯ್ಸ್ ಮೋಡಿ ಮಾಡ್ತಿದೆ.

ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಭರತ್ ಸಾಗರ್ ಹಾಗೂ ಯಶಸ್ವಿನಿ ರವೀಂದ್ರ್ ನಾಯಕ-ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡ್ತಿದ್ದು, ನುರಿತ ನಟನೆಯ ಮೂಲಕ ಭರವಸೆ ಮೂಡಿಸಿದ್ದಾರೆ.

ಇನ್ನು ಶಂಕರ್ ಮೂರ್ತಿ, ಕುರಿ ಪ್ರತಾಪ್,ಬ್ಯಾಂಕ್ ಜನಾರ್ಧನ್,ವಿಜಯ್ ಚೆಂಡೂರ್ ತಾರಾಗಣದಲ್ಲಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಭಾವಸ್ಪಂದನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಸಿನಿಮಾಕ್ಕೆ ರಜತ್ ಸಲಂಕೆ ಬಂಡವಾಳ ಹೂಡಿದ್ದು, ಸಂಜಯ್ ವಾದತ್ ನಿರ್ದೇಶನದಲ್ಲಿ ಹೊಸಬರ ಚಿತ್ರ ಹೊಸ ದಾಖಲೆ ಬರೆಯೋ ಭರವಸೆ ಮೂಡಿಸಿದೆ.

Comments are closed.