ಬಾಲಿವುಡ್ ಗೆ ನ್ಯಾಚುರಲ್ ಬ್ಯೂಟಿ….! ಹಿಂದಿಸಿನಿಮಾದಲ್ಲಿ ನಟಿಸಲಿದ್ದಾರೆ ಸಾಯಿಪಲ್ಲವಿ…!!

ತಮ್ಮ ಸಹಜ ಸೌಂದರ್ಯ, ಅದ್ಭುತ ನಟನೆ ಹಾಗೂ ಸುಂದರ ನೃತ್ಯದಿಂದ ಮನಸೆಳೆದಿರುವ ದಕ್ಷಿಣ ಭಾರತದ ನಟಿ ಸಾಯಿಪಲ್ಲವಿ ಬಾಲಿವುಡ್ ಗೆ ಹಾರಿದ್ದಾರೆ.

ತೆಲುಗು,ತಮಿಳು,ಮಲೆಯಾಳಂ ಬಳಿಕ ಇದೀಗ ಹಿಂದಿಯಲ್ಲಿ ಸಾಯಿಪಲ್ಲವಿ ಬಣ್ಣ ಹಚ್ಚಲಿದ್ದು, ತೆಲುಗಿನಿಂದ ಹಿಂದಿಗೆ ರಿಮೇಕ್ ಆಗುತ್ತಿರುವ ಚಿತ್ರದಲ್ಲಿ ನಟಿಸಲಿದ್ದಾರೆ.

2005 ರಲ್ಲಿ ತೆಲುಗಿನಲ್ಲಿ ರಿಲೀಸ್ ಆಗಿದ್ದ ಛತ್ರಪತಿ ಸಿನಿಮಾ ಹಿಂದಿಗೆ ರಿಮೇಕ್ ಆಗಲಿದ್ದು, ಈ ಚಿತ್ರವನ್ನು ಮಾಸ್ ನಿರ್ದೇಶಕ ವಿವಿನಾಯಕ್ ನಿರ್ದೇಶಿಸಲಿದ್ದಾರೆ. ತೆಲುಗಿನಲ್ಲಿ ಪ್ರಭಾಸ್ ನಾಯಕರಾಗಿದ್ದ  ಈ ಸಿನಿಮಾದ ಹಿಂದಿ ರಿಮೇಕ್ ಗೆ ಬೆಲ್ಲಂಕೊಂಡ ಸಾಯಿಶ್ರೀನಿವಾಸ್ ನಾಯಕರಾಗಿದ್ದಾರೆ.

https://kannada.newsnext.live/sandalwood-sanjanagalrani-actor-vandanajain-complaint-assult-2019/

ಬೆಲಂಕೊಂಡ ಶ್ರೀನಿವಾಸ್ ತಂದೆ ಬೆಲ್ಲಂಕೊಂಡ ಸುರೇಶ್ ಖ್ಯಾತ ನಿರ್ಮಾಪಕರಾಗಿದ್ದು, ಮಗನನ್ನು ಹಿಂದಿಯಲ್ಲಿ ಅದ್ದೂರಿಯಾಗಿ ಲಾಂಚ್ ಮಾಡುವ ಉದ್ದೇಶದಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.  ಈ ಸಿನಿಮಾ ಮೂಲಕ ಸಾಯಿಪಲ್ಲವಿ ಬಾಲಿವುಡ್ ನಲ್ಲಿ ಅದೃಷ್ಟಪರೀಕ್ಷೆಗೆ ಮುಂಧಾಗಿದ್ದಾರೆ.

https://kannada.newsnext.live/sandalwood-bollywood-rashmikamandanna-tamilmarriage-boy/

ನಟಿಸಿದ ಸಿನಿಮಾಗಳಲ್ಲಿ ಗೆದ್ದಿರುವ ಸಾಯಿಪಲ್ಲವಿ ಬಾಲಿವುಡ್ ಎಂಟ್ರಿ ಅಭಿಮಾನಿಗಳಿಗೆ  ಖುಷಿ ತಂದಿದೆ. ಸದ್ಯ ನಾಗಚೈತನ್ಯ ಜೊತೆ ನಟಿಸಿದ್ದ ಲವ್ ಸ್ಟೋರಿ  ಹಾಗೂ ರಾಣಾದಗ್ಗುಬಾಟಿ ಜೊತೆಗೆ ನಟಿಸಿರುವ ವಿರಾಟ ಪರ್ವಂ ಕೂಡ ರಿಲೀಸ್ ಗೆ ಸಿದ್ಧವಾಗಿದೆ.

Comments are closed.