ಬೆಂಗಳೂರು : ರಾಷ್ಟ್ರೀತ ತನಿಖಾ ದಳದ (ಎನ್ ಐಎ) ಅಧಿಕಾರಿಗಳು ಕರ್ನಾಟಕ ಹಾಗೂ ತಮಿಳುನಾಡಿನ 20 ಕಡೆಗಳಲ್ಲಿ ಭರ್ಜರಿ ದಾಳಿ ನಡೆಸಿದ್ದು, ಎನ್ ಐಎ ಅಧಿಕಾರಿಗಳು ಬೆಂಗಳೂರಲ್ಲಿ ಉಗ್ರ ಫಝಿ ಅಲಿಯಾಸ್ ಫಝೀವ್ ಉರ್ ರೆಹಮಾನ್ ಎಂಬಾತನನ್ನು ಬಂಧಿಸಿದ್ದಾರೆ. ಉಗ್ರನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು 5 ದಿನಗಳ ಕಾಲ ಎನ್ ಐಎ ವಶಕ್ಕೆ ಪಡೆದಿದೆ.
ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಉಗ್ರ ಫಝಿ ಇರೋ ಮಾಹಿತಿಯನ್ನು ಕಲೆ ಹಾಕಿದ್ದ ಎನ್ಐಎ ಅಧಿಕಾರಿಗಳು ಉಗ್ರನಿಗಾಗಿ ಕಾದು ಕುಳಿತಿದ್ದರು. ಉಗ್ರನನ್ನು ಹಿಡಿಯೋದಕ್ಕೆ ಮುಂದಾಗುತ್ತಲೇ ಆತನ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ ಸಿನಿಮೀಯ ರೀತಿಯಲ್ಲಿ ಎನ್ ಐಎ ಅಧಿಕಾರಿಗಳು ಉಗ್ರ ಫಝಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಲ್ ಹಿಂದ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರ ಫಝಿ ಉಗ್ರರ ತರಬೇತಿಗೆ ಬೇಕಾದ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ. ಬಂಧಿತನಾಗಿರೊ ಉಗ್ರ ಮೆಹಬೂಬ್ ಪಾಷಾ ಹಾಗೂ ಖ್ವಾಜಿ ಜೊತೆಗೂ ಪಝೀ ಸಂಪರ್ಕ ಹೊಂದಿದ್ದ ಅನ್ನುವುದು ತಿಳಿದುಬಂದಿದೆ. ಈಗಾಗಲೇ ಎನ್ ಐಎ ವಶದಲ್ಲಿರೊ ಉಗ್ರ ಮೆಹಬೂಬ್ ಪಾಷಾ ಉಗ್ರ ಫಝಿ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರೋ ಮಾಹಿತಿಯನ್ನು ನೀಡಿದ್ದಾನೆ. ಉಗ್ರ ನೀಡಿದ ಮಾಹಿತಿಯನ್ನು ಆಧರಿಸಿ ಇದೀಗ ಫಝಿಯನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಲ್ಲಿ ಉಗ್ರ ಫಝಿ ಬಂಧನ : 20 ಎನ್ ಐಎ ಭರ್ಜರಿ ಭೇಟೆ
- Advertisement -