ನೈಜೀರಿಯಾ : ಶಾಲೆಯೊಂದರ ಮೇಲೆ ದಾಳಿ ನಡೆಸಿರುವ ಮುಸುಕುಧಾರಿ ಉಗ್ರರು ಗುಂಡಿನ ದಾಳಿ ನಡೆಸಿ, 40 ಮಂದಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಪಹರಿಸಿದ ಘಟನೆ ನೈಜೀರಿಯಾದಲ್ಲಿ ನಡೆದಿದೆ.
ಸೆಂಟ್ರಲ್ ನೈಜೀರಿಯಾದಲ್ಲಿರುವ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಶಾಲೆಯ ಸಮೀಪದಲ್ಲಿರುವ ಹಾಸ್ಟೆಲ್ನ ಗೋಡೆ ಒಡೆದು ಒಳನುಗ್ಗಿದ ಉಗ್ರರು ಅಲ್ಲಿಂದ ಶಾಲೆಯ ಕೊಠಡಿಗೆ ಹೋಗಿದ್ದಾರೆ. ಬಂದೂಕುಧಾರಿಗಳು ಒಳನುಗ್ಗುತ್ತಿದ್ದಂತೆಯೇ ಭಯಭೀತರಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಲ್ಲಿಂದ ಓಡಿಹೋಗಲು ನೋಡಿದ್ದಾರೆ. ಈ ವೇಳೆಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಉಗ್ರರು.
ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿ ಅಲ್ಲಿಯೇ ಮೃತಪಟ್ಟಿದ್ದಾನೆ. ಉಳಿದವರು ಓಡಿಹೋಗದಂತೆ ಭಯಹುಟ್ಟಿಸಿದ ಉಗ್ರರು ಎಲ್ಲರನ್ನೂ ಒತ್ತೆಯಾಳು ಗಳನ್ನಾಗಿ ಇಟ್ಟುಕೊಂಡು ಅಪಹರಿಸಿಕೊಂಡು ಹೋಗಿದ್ದಾರೆ. ಗುಂಡಿನ ದಾಳಿಗೆ ಓರ್ವ ವಿದ್ಯಾರ್ಥಿ ಬಲಿಯಾಗಿದ್ದು, 40 ಮಂದಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ.
ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ಉಗ್ರರು ರಕ್ತಪಾತ ನಡೆಸುತ್ತಿದ್ದಾರೆ. ಇದೀಗ ಶಾಲೆಯನ್ನೇ ಟಾರ್ಗೇಟ್ ಮಾಡಿರೋದು ಆತಂಕ ಮೂಡಿಸಿದೆ.