- ಅಂಚನ್ ಗೀತಾ
ಬೇಸಿಗೆ ಆರಂಭವಾಗಿದೆ. ಒಂದೆಡೆ ತ್ವಚೆಯ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದೆಡೆ ವಿಪರೀತ ಗಂಟಲು ನೋವು ಕಾಡುತ್ತೆ. ಹವಾಮಾನದ ವೈಪರೀತ್ಯದಿಂದ ಹೀಗಾಗುತ್ತಿರೊದು ಸಾಮಾನ್ಯ.

ಆದ್ರೆ ಇದೀಗ ಕೊರೊನಾ ಮಹಾಮಾರಿ ಬಂದಿರೊದ್ರಿಂದ ಜನ ಭಯ ಭಿತರಾಗಿ ಗಂಟಲು ನೋವು ಬಂದಾಕ್ಷಣ ಆಸ್ಪತ್ರೆಗೆ ಓಡಾಡುತ್ತಿದ್ದಾರೆ. ಹಾಗಂತ ಗಂಟಲು ನೋವಿಗೆ ವೈದ್ಯರ ಬಳಿಯೆ ಹೋಗ್ಬೇಕಿಲ್ಲ ಇದಕ್ಕಾಗಿ ಹಲವಾರು ಟಿಪ್ಸ್ ಇಲ್ಲಿದೆ ನೋಡಿ….

ದಿನ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಉಪ್ಪು ನೀರಿನಲ್ಲಿ ಗಾರ್ಗಲ್ ಮಾಡಿ.. ಹೀಗೆ ಮಾಡುವುದರಿಂದ ಗಂಟಲ ಕಿರಿಕಿರಿಯಿಂದ ಮುಕ್ತರಾಗಬಹುದು. ಕಷಾಯ ಎರಡು ಲೋಟ ನೀರಿಗೆ ಅರಶಿನ, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಬಳಿಕ ಒಂದು ಚಮಚ ಜೀರಿಗೆ, ಶುಂಠಿ, ಸ್ವಲ್ಪ ಕಾಳು ಮೆಣಸು ಹಾಕಿ ಜಜ್ಜಿ ಅದೆ ನೀರಿಗೆ ಹಾಕಿ ಕುದಿಯಲು ಬಿಡಿ.

ನೀರು ಚೆನ್ನಾಗಿ ಕುದಿದು ಒಂದು ಲೋಟಕ್ಕೆ ಬರೋವಷ್ಟೊತ್ತಿಗೆ ಸ್ವಲ್ಪ ಹಾಲು ಹಾಕಿ ಒಂದು ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿ. ಈ ಕಷಾಯ ದಿನ ನಿತ್ಯ ಕುಡಿದ್ರೆ ಕೆಮ್ಮು,ಗಂಟಲು ನೋವು, ಶೀತದಂತಹ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

ಇನ್ನು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತುಳಸಿ ಎಲೆಯನ್ನು ತಿನ್ನಿ ತುಳಸಿ ಎಲೆ ಗಂಟಲಿನ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚು ಸಹಕಾರಿಯಾಗಿದೆ.

ಹೀಗೆ ವಿವಿಧ ರೀತಿಯ ಮನೆಮದ್ದುಗಳನ್ನು ಉಪಯೋಗಿಸಿದ್ರೆ ವೈದ್ಯರ ಬಳಿ ಚಿಕ್ಕಪುಟ್ಟ ಸಮಸ್ಯೆಗಳಿಗೆಂದು ಒಡುವ ಅವಶ್ಯಕತೆ ಇರಲ್ಲ. ಗಂಟಲು ನೋವಿಗೆ ಅತ್ಯುತ್ತಮ ಔಷಧಿ ಎಂದರೆ ಬೆಳ್ಳುಳ್ಳಿ ಎಸಲುಗಳು. ಪ್ರತಿದಿನ ಎರಡು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ನೋವು ಕಡಿಮೆಯಾಗುತ್ತದೆ.

ಕರಿಮೆಣಸನ್ನು ಅರ್ಧ ಚಮಚ ಚಕ್ಕೆ ಪುಡಿ ಹಾಗೂ ಜೇನುತುಪ್ಪವನ್ನು ಮಿಶ್ರ ಮಾಡಿ ಸೇವಿಸಿದರೆ ನೋವಿಗೆ ಪರಿಹಾರ ಸಿಗುತ್ತದೆ.

ಒಂದು ಲೋಟ ಬಿಸಿ ನೀರಿಗೆ ಒಂದು ಲಿಂಬೆಯ ರಸವನ್ನು ಹಿಂಡಿಕೊಳ್ಳಿ. ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿಯಿರಿ. ಇದು ನಿಮಗೆ ನೆರವಾಗುವುದು. ಯಾಕಂದ್ರೆ ನಮ್ ಹಳ್ಳಿಗಳಲಂತೂ ಔಷಧ ಗುಣಗಳಿರೋ ನೂರಾರು ಬೇರುಗಳಿವೆ. ಅದ್ರ ಪ್ರಯೋಜನ ಪಡೆದುಕೊಂಡು ಆರೋಗ್ಯವಾಗಿರಿ
( Home remedy for throat pain