KKR VS DC IPL 2021 : ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ರೋಚಕ ಗೆಲುವು ಕಂಡ ಕೆಕೆಆರ್‌

ಶಾರ್ಜಾ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL 2021) ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೋಲಿಸುವ ಮೂಲಕ ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.‌ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಅದ್ಬುತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿಗೆ ಸೋಲಿನ ರುಚಿ ತೋರಿಸಿದೆ. ಅಂತಿಮ ಹಂತದಲ್ಲಿ ಸಾಲು ಸಾಲು ವಿಕೆಟ್‌ ಕಳೆದುಕೊಂಡ್ರು ಕೂಡ ರಾಹುಲ್‌ ತ್ರಿಪಾಠಿ ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ.

ಶಾರ್ಜಾ ಇಂಟರ್‌ನ್ಯಾಷನ್‌ನಲ್ಲಿ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪ್ರಥ್ವಿ ಶಾ ಹಾಗೂ ಶಿಖರ್‌ ಧವನ್‌ ಉತ್ತಮ ಆರಂಭ ಒದಗಿಸಿದ್ದರು. ಶಿಖರ್‌ ಧವನ್‌ 36ರನ್‌ ಗಳಿಸಿದ್ರೆ, ಪ್ರಥ್ವಿಶಾ 18 ರನ್‌ಗಳಿಸಿದ್ದಾರೆ. ನಂತರದ ಮಾರ್ಕಸ್‌ ಸ್ಟೋಯಿನಿಸ್‌ 18, ಶ್ರೇಯಸ್‌ ಅಯ್ಯರ್‌ 30 ರನ್‌ ಗಳಿಸಿದ್ದಾರೆ. ಆದರೆ ನಾಯಕ ರಿಷಬ್‌ ಪಂತ್‌ ನಿರಾಸೆ ಮೂಡಿಸಿದ್ದಾರೆ. ಅಂತಿಮ ಹಂತದಲ್ಲಿ ಶಿಮ್ರಾನ್‌ ಹೆಟ್ಮಯರ್‌ 17ರನ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 135ರನ್‌ ಗಳಿಸಿತು.

ಇದನ್ನೂ ಓದಿ :  10 ಲಕ್ಷ ಇದ್ರೆ ನೀವೂ ಖರೀದಿಸಬಹುದು ಐಪಿಎಲ್‌ ತಂಡ : ಬಿಡ್ಡರ್‌ಗಳಿಂದ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಡೆಲ್ಲಿ ನೀಡಿದ್ದ ಸುಲಭ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಪರವಾಗಿ ಶುಭಮನ್‌ ಗಿಲ್‌ ಹಾಗೂ ವೆಂಕಟೇಶ್‌ ಅಯ್ಯರ್‌ ಭರ್ಜರಿ ಜೊತೆಯಾಟವಾಡಿದ್ರು. ಮೊದಲ ವಿಕೆಟ್‌ಗೆ ಇಬ್ಬರು 96ರನ್‌ ಸಿಡಿಸುವ ಮೂಲಕ ಕೆಕೆಆರ್‌ಗೆ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ವೆಂಕಟೇಶ್‌ ಅಯ್ಯರ್‌ 55 ರನ್‌ ಗಳಿಸಿ ಔಟಾಗುತ್ತಲೇ ಶುಭಮನ್‌ ಗಿಲ್‌ ಜೊತೆಯಾದ ರಾಣಾ ಆಟ ಕೇವಲ 13ರನ್‌ ಗಷ್ಟೇ ಕೊನೆಯಾಯ್ತು ನಂತರದಲ್ಲಿ ಶುಭಮನ್‌ ಗಿಲ್‌ 46 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಆದರೆ ನಂತರ ಬಂದ ರಾಹುಲ್‌ ತ್ರಿಪಾಟಿ 6 ರನ್‌ ಗಳಿಸಿ ಔಟಾದ್ರೆ, ದಿನೇಶ್‌ ಕಾರ್ತಿಕ್‌, ಇಯಾನ್‌ ಮಾರ್ಗನ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ. ಅಂತಿಮ ಓವರ್‌ನಲ್ಲಿ ಆರು ಎಸೆತಗಳಲ್ಲಿ ಏಳು ರನ್‌ಗಳಿಸುವ ಗುರಿಯನ್ನು ಪಡೆದುಕೊಂಡಿದ್ದ ಕೆಕೆಆರ್‌ ತಂಡ ಸತತ ಎರಡು ವಿಕೆಟ್‌ ಕಳೆದುಕೊಂಡಿತ್ತು. ಆದರೆ ಅಂತಿಮವಾಗಿ ರಾಹುಲ್‌ ತ್ರಿಪಾಠಿ ಸಿಕ್ಸರ್‌ ಸಿಡಿಸುತ್ತಲೇ ಕೆಕೆಆರ್‌ ಭರ್ಜರಿ ಗೆಲವು ದಾಖಲಿಸಿದೆ.

ಇದನ್ನೂ ಓದಿ : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು !

( IPL 2021 : KKR is a thrilling win over Delhi Capitals )

Comments are closed.