8 ತಿಂಗಳಲ್ಲಿ ಅತೀ ಕನಿಷ್ಠ ದರಕ್ಕೆ ಇಳಿದ ಚಿನ್ನ : ದೇಶದ ನಗರಗಳಲ್ಲಿ ಇಂದಿನ ಬೆಲೆ ಎಷ್ಟಿದೆ ಗೊತ್ತಾ ..?

ನವದೆಹಲಿ : ಕಳೆದ 5 ದಿನಗಳಿಂದಲೂ ಇಳಿಕೆಯನ್ನು ಕಾಣುತ್ತಿರುವ ಬಂಗಾರದ ಬೆಲೆ ಇಂದೂ ಕೂಡ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 46,240 ರೂಪಾಯಿಗೆ ಇಳಿಕೆಯಾಗಿದ್ದರೆ, 24 ಕ್ಯಾರೆಟ್ ಚಿನ್ನ 47,240ಕ್ಕೆ ಇಳಿಕೆಯನ್ನು ಕಂಡಿದೆ.

ಇಂದಿನ ಚಿನ್ನದ ದರ ಕಳೆದ 8 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಯುಎಸ್ ಮಾರುಕಟ್ಟೆಯಲ್ಲಿ ಚಿನ್ನದ ದರ ನಿತ್ಯವೂ ಕುಸಿತವಾಗುತ್ತಿರೋ ಹಿನ್ನೆಲೆಯಲ್ಲಿ ದೇಶದ ಚಿನಿವಾರು ಮಾರುಕಟ್ಟೆಯಲ್ಲಿಯೂ ಬಂಗಾರದ ದರ ಕುಸಿತವನ್ನು ಕಾಣುತ್ತಿದೆ.

ಬೆಂಗಳೂರಲ್ಲಿ 10 ಗ್ರಾಂ ಚಿನ್ನಾಭರಣದ ಬೆಲೆ 22 ಕ್ಯಾರೆಟ್ ಗೆ 43,750 ಇದ್ದರೆ 24 ಕ್ಯಾರೆಟ್ ಚಿನ್ನದ ದರ 47.730 ರೂಪಾಯಿ ಉಳಿದಂತೆ ಚೆನ್ನೈ 44,650 (22 ಕ್ಯಾರೆಟ್ ). 48, 700 (24 ಕ್ಯಾರೆಟ್ ), ಮುಂಬೈ 46,240 (22 ಕ್ಯಾರೆಟ್ ). 47,240 (24 ಕ್ಯಾರೆಟ್ ), ದೆಹಲಿ 46,400 (22 ಕ್ಯಾರೆಟ್ ). 50,620 (24 ಕ್ಯಾರೆಟ್ ), ಕೋಲ್ಕತ್ತಾ 46,720 (22 ಕ್ಯಾರೆಟ್ ). 49,420 (24 ಕ್ಯಾರೆಟ್ ), ಹೈದ್ರಾಬಾದ್ 43,750 (22 ಕ್ಯಾರೆಟ್ ). 47,730 (24 ಕ್ಯಾರೆಟ್ ). ಕೇರಳ 43,750 (22 ಕ್ಯಾರೆಟ್ ).47,730 (24 ಕ್ಯಾರೆಟ್ ) ಇದೆ.

ಯುಎಸ್ ಮಾರುಕಟ್ಟೆಯಲ್ಲಿ ಚಿನ್ನಾಭರಣ ದರ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಚಿನ್ನದ ದರ ಕುಸಿತವಾಗುತ್ತಿರೋದು ಆಭರಣ ಪ್ರಿಯರಿಗೆ ಖುಷಿಯನ್ನು ಕೊಟ್ಟಿದೆ.

Comments are closed.