ನಮ್ಮ ಮುಖದ ಸೌಂದರ್ಯಕ್ಕೆ ಬಾಯಿಯಲ್ಲಿರುವ ಹಲ್ಲುಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. (Toothache Home Remedies) ಹಲ್ಲುಗಳಲ್ಲಿ ನೋವು ಉಂಟಾದಾಗ ಖಂಡಿತವಾಗಿ ಹೆಚ್ಚಿನವರು ಈ ರೀತಿಯ ನೋವು ತನ್ನ ಶತ್ರುಗೂ ಬಾರದೇ ಇರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹಲ್ಲುಗಳಲ್ಲಿ ಕಾಣಿಸಿಕೊಳ್ಳುವ ನೋವು ತಲೆ ಹಾಗೂ ಮುಖದ ಭಾಗದಲ್ಲೂ ನೋವನ್ನುಂಟು ಮಾಡುತ್ತದೆ.
ನಮ್ಮ ಬಾಯಿಯಲ್ಲಿರುವ ಹಲ್ಲಿನ ಒಳಭಾಗ ಹಾಗೂ ಹೊರಭಾಗ ವಿಭಿನ್ನವಾದ ರೂಪವನ್ನು ಒಳಗೊಂಡಿದೆ. ಹಲ್ಲಿನ ಹೊರಪದರವನ್ನು ಎನಾಮಲ್ ಎನ್ನುತ್ತಾರೆ. ಇದು ಅತ್ಯಂತ ಕಠಿಣವಾದ ಭಾಗವಾಗಿದೆ. ಒಳಪದರವು ಗಡುಸಾದ ಡಂಟೈನ್ ಅಥವಾ ದಂತದ್ರವ್ಯವನ್ನು ಒಳಗೊಂಡಿದೆ. ಹಲ್ಲು ನೋವು ಬರಲು ಮುಖ್ಯ ಕಾರಣ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು. ಬಾಯಿಯ ಶುಚಿತ್ವವನ್ನು ಸರಿಯಾಗಿ ಕಾಪಾಡಿಕೊಳ್ಳದೇ ಇದ್ದರೆ ಬ್ಯಾಕ್ಟೀರಿಯ ಉತ್ಪತ್ತಿಯಾಗುತ್ತದೆ.
ಇದು ಹಲ್ಲಿನಲ್ಲಿರುವ ಎನಾಮಲ್ನ್ನು ನಾಶಗೊಳಿಸುತ್ತದೆ. ಎನಾಮಲ್ ನಾಶಗೊಂಡಾಗ ಹಲ್ಲು ಹುಳುಕಾಗುತ್ತದೆ. ಅಲ್ಲಿ ವಿಪರೀತ ನೋವು ಪ್ರಾರಂಭವಾಗುತ್ತದೆ. ಅದೇ ಜಾಗದಲ್ಲಿ ರಕ್ತನಾಳಗಳು ಮತ್ತು ನರಗಳು ಕೊನೆಗೊಂಡಿರುವುದರಿಂದ ನೋವು ಹೆಚ್ಚಾಗುತ್ತದೆ. ಇಂತಹ ಹಲ್ಲುನೋವನ್ನು ಮನೆಮದ್ದಿನಿಂದ ದೂರವಿಡಬಹುದಾಗಿದೆ. ಹಾಗಾದರೆ ಆ ಮನೆ ಮದ್ದು ಯಾವುದೆಂದು ತಿಳಿಯೋಣ.
ಲವಂಗ :
ನಾಲ್ಕು ಲವಂಗವನ್ನು ಒಂದು ಕುಟ್ಟಾಣಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಪುಡಿ ಮಾಡಿದ ಲವಂಗವನ್ನು ಹಲ್ಲು ನೋವಿರುವ ಭಾಗಕ್ಕೆ ಇಟ್ಟುಕೊಳ್ಳಬೇಕು. ಈ ಪುಡಿಯನ್ನು ಇಟ್ಟ ಕೂಡಲೇ ಬಾಯಿಯಲ್ಲಿ ಎಂಜಲು ಬರಲು ಶುರು ಆಗುತ್ತದೆ. ಆದರೆ ಎಂಜಲನ್ನು ಹೊರಗೆ ಹಾಕದೇ ಐದು ನಿಮಿಷದವರೆಗೂ ಹಾಗೆ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಹಲ್ಲು ನೋವು ಬೇಗನೆ ಗುಣವಾಗುತ್ತದೆ.
ಸ್ಫಟಿಕ ಮತ್ತು ಸಾಸಿವೆ ಎಣ್ಣೆ :
ಹಲ್ಲು ಹುಳುಕಿನಿಂದ ನೋವು ಶುರು ಆಗಿದ್ದರೆ ಆಗ ಸ್ವಲ್ಪ ಸ್ಫಟಿಕವನ್ನು ಕುಟ್ಟಾಣಿ ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ನಂತರ ಸಾಸಿವೆಎಣ್ಣೆಗೆ ಕುಟ್ಟಿ ಪುಡಿ ಮಾಡಿದ ಒಂದು ಚಮಚ ಸ್ಫಟಿಕ ಪುಡಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಹುಳ ಹಿಡಿದಿರುವ ಅಥವಾ ನೋವಿರುವ ಹಲ್ಲಿನ ಮೇಲೆ ಹಾಕಿ ಎರಡು ಗಂಟೆಗಳವರೆಗೂ ಹಾಗೆ ಇಟ್ಟುಕೊಳ್ಳಬೇಕು.
ರಾತ್ರಿ ವೇಳೆ ನೋವಿರುವ ಹಲ್ಲುಗಳಿಗೆ ಹಾಕಿಕೊಂಡು ಮಲಗಬಹುದಾಗಿದೆ. ರಾತ್ರಿ ಹಚ್ಚಿಕೊಳ್ಳುವುದರಿಂದ ನೋವಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದನ್ನು ಮೂರರಿಂದ ನಾಲ್ಕು ದಿನದವರೆಗೆ ಮಾಡುವುದರಿಂದ ಹಲ್ಲುಗಳ ನೋವು ಸಂಪೂರ್ಣವಾಗಿ ಕಡಿಮೆ ಆಗುತ್ತದೆ. ಹಾಗೆ ಒಂದು ಲೋಟ ನೀರಿಗೆ ಒಂದು ಚಮಚ ಸ್ಫಟಿಕ ಪುಡಿಯನ್ನು ಹಾಕಿ ಬಾಯಿಯಲ್ಲಿ ಹತ್ತರಿಂದ ಹದಿನೈದು ನಿಮಿಷ ಇಟ್ಟುಕೊಳ್ಳುವುದರಿಂದ ಹಲ್ಲು ನೋವು ಮತ್ತು ಬಾಯಯಲ್ಲಿ ಬರುವ ದುರ್ವಾಸನೆಯನ್ನು ದೂರ ಮಾಡುತ್ತದೆ. ಇದನ್ನು ಒಂದು ವಾರದವರೆಗೆ ಮಾಡುವುದರಿಂದ ಹಲ್ಲು ನೋವು ದೂರವಾಗುತ್ತದೆ.
ಅರಶಿಣ ಪುಡಿ ಮತ್ತು ಸಾಸಿವೆ ಎಣ್ಣೆ :
ಕೆಲವೊಬ್ಬರಿಗೆ ಹಲ್ಲು ನೋವು ಇರುವುದಿಲ್ಲ. ಬದಲಿಗೆ ಏನಾದರೂ ಗಟ್ಟಿ ವಸ್ತುವನ್ನು ತಿಂದಾಗ ಮಾತ್ರ ಹಲ್ಲು ನೋವು ಉಂಟಾಗುತ್ತದೆ. ಆಗ ಅರ್ಧ ಚಮಚ ಅರಶಿಣ ಪುಡಿಗೆ ಒಂದು ಅಥವಾ ಎರಡು ಹನಿ ಸಾಸಿವೆ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ ರಾತ್ರಿ ಮಲಗುವಾಗ ಹಲ್ಲುಗಳಿಗೆ ಹಚ್ಚಿ ಮಲಗುವುದರಿಂದ ಈ ರೀತಿಯ ಹಲ್ಲು ನೋವು ದೂರವಾಗುತ್ತದೆ. ಇದನ್ನು ಒಂದು ವಾರದವರೆಗೂ ಮಾಡುವುದರಿಂದ ಹಲ್ಲು ನೋವು ಗುಣವಾಗುತ್ತದೆ.
ಇದನ್ನೂ ಓದಿ : Home Remedy For Health : 90 ರೋಗಗಳಿಗೆ ರಾಮಬಾಣ ಈ ಮನೆಮದ್ದು
ಇದನ್ನೂ ಓದಿ : Tomato: ತಲೆಹೊಟ್ಟಿನ ಸಮಸ್ಯೆಗೆ ಟೊಮೇಟೊ ಹಣ್ಣು!
ಇದನ್ನೂ ಓದಿ : Boosting your Immunity:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಕಷಾಯಪುಡಿ
ಇದನ್ನೂ ಓದಿ : Amaranthus: ಹರಿವೆ ಸೊಪ್ಪಿನಲ್ಲೂ ಇದೆ ಔಷದೀಯ ಗುಣಗಳು
ಈರುಳ್ಳಿ ರಸ :
ಈರುಳ್ಳಿ ರಸವನ್ನು ದಿನದಲ್ಲಿ ಒಂದು ಬಾರಿ ಆದರೂ ಹಲ್ಲಿನ ಭಾಗಕ್ಕೆ ಹಚ್ಚುವುದರಿಂದ ಹಲ್ಲಿನ ನೋವು ಮತ್ತು ಹಲ್ಲು ಹುಳುಕಾಗದಂತೆ ಕಾಪಾಡುತ್ತದೆ. ಹಾಗೆ ಇದಕ್ಕೆ ಎರಡು ಬಾರಿ ಹಲ್ಲು ಉಜ್ಜುವುದರಿಂದ ಹಲ್ಲು ನೋವನ್ನು ದೂರವಿಡಬಹುದಾಗಿದೆ.
Toothache Home Remedies: These 5 home remedies are the solution to the problem of toothache, toothache