ಸೋಮವಾರ, ಏಪ್ರಿಲ್ 28, 2025
HomeBreakingTurmeric Health Tips : ಅರಿಶಿನವೆಂಬ ಸಂಜೀವಿನಿಯ ಬಗ್ಗೆ ನಿಮಗೆಷ್ಟು ಗೊತ್ತು…?

Turmeric Health Tips : ಅರಿಶಿನವೆಂಬ ಸಂಜೀವಿನಿಯ ಬಗ್ಗೆ ನಿಮಗೆಷ್ಟು ಗೊತ್ತು…?

- Advertisement -
  • ಸುಶ್ಮಿತಾ ಸುಬ್ರಹ್ಮಣ್ಯ

ಅರಿಶಿನವನ್ನು ಪ್ರಾಚೀನ ಕಾಲದಿಂದಲೂ ಭಾರತೀಯರು ಈ ಮನೆಮದ್ದಾಗಿ ಬಳಸುತ್ತಿದ್ದಾರೆ. ಸಾಮಾನ್ಯ ಗಾಯ ಇರಲಿ ಅಥವಾ ಸುಟ್ಟ ಗಾಯಗಳೇ ಇರಲೀ ತಕ್ಷಣ ಹಚ್ಚುವುದು ಅರಿಶಿನ. ಏಕೆಂದರೆ ಅರಿಶಿನವು ಸೂಕ್ಷ್ಮಾಣು ನಿರೋಧಕ (ಆಂಟಿಮೈಕ್ರೊಬಿಯಲ್ ಅಥವಾ ನಂಜುನಿರೋಧಕ) ಅಂಶವನ್ನು ಹೊಂದಿರುವುದು ಇದಕ್ಕೆ ಕಾರಣ. ಶೀತ ಅಥವಾ ಕಫದ ಸಮಸ್ಯೆ ಕಾಣಿಸಿದ್ರೆ ಅರಿಶಿನ ಹಾಲು ಕುಡಿಯುವುದು ಪ್ರಯೋಜನಕಾರಿ. ಬಿಸಿ ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರಿಂದ ಶೀತ ಮತ್ತು ಕಫದ ಸಮಸ್ಯೆಯನ್ನು ದೂರ ಮಾಡಬಹುದು. ಹಾಗೆಯೇ ಇದು ಶ್ವಾಸಕೋಶದಲ್ಲಿ ಸಂಗ್ರಹವಾಗುವ ಕಫವನ್ನು ಸಹ ಹೊರ ತರುತ್ತದೆ.

ಅರಿಶಿನ ವಿವಿಧ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ. ಈಗ ಆಂತರಿಕ ಗಾಯಗಳು ಅಥವಾ ಬಾಹ್ಯ ಗಾಯಗಳನ್ನು ಗುಣ ಪಡಿಸುವ ಕೆಲಸ ಮಾಡುತ್ತದೆ. ಅರಿಶಿನ ನೈಸರ್ಗಿಕ ಪಿತ್ತಜನಕಾಂಗದ ನಿರ್ವಿಶೀಕರಣವಾಗಿದೆ. ಇದರ ಬಳಕೆಯಿಂದ, ರಕ್ತದಲ್ಲಿರುವ ವಿಷವನ್ನು ತೆಗೆದುಹಾಕಲಾಗುತ್ತದೆ ಮತ್ತು ರಕ್ತ ಪರಿಚಲನೆ ಉತ್ತಮವಾಗಿಸುತ್ತದೆ. ಅಪಧಮನಿಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಹೃದಯದ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಈ ಎಲ್ಲಾ ಕಾರಣಗಳಿಂದ ಭಾರತೀಯರು ಅರಿಶಿನವನ್ನು ಹೆಚ್ಚು ಬಳಸುತ್ತಾರೆ. ಇದರಲ್ಲಿ ಕರ್ಕ್ಯುಮಿನ್ ಎಂಬ ನೈಸರ್ಗಿಕ ಪ್ರಮಾಣದ ರಾಸಾಯನಿಕ ಪದಾರ್ಥವಿದೆ. ಅರಿಶಿನವನ್ನು ಆಯುರ್ವೇದ ಗಿಡಮೂಲಿಕೆ ಔಷಧಿಗಳಲ್ಲಿ ಬಳಸಲಾಗುತ್ತದೆ. ಅರಿಶಿನ ಸೇವನೆಯು ಮೂಳೆಗಳನ್ನು ಬಲಪಡಿಸುತ್ತದೆ. ಹಾಲಿನಲ್ಲಿ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಮೂಳೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ.

ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತದವನ್ನು ಗುಣಪಡಿಸುವ ಗುಣಗಳನ್ನು ಹೊಂದಿರುತ್ತವೆ. ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 500 ರಿಂದ 1000 ಮಿಲಿಗ್ರಾಂ ಕರ್ಕ್ಯುಮಿನ್ ಅಗತ್ಯವಿದೆ. ಒಂದು ಟೀಸ್ಪೂನ್ ಅರಿಶಿನವು ಸುಮಾರು 200 ಮಿಗ್ರಾಂ ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ. ಆದ್ದರಿಂದ ನಾಲ್ಕು ಅಥವಾ ಐದು ಟೀ ಚಮಚ ಅರಿಶಿನವನ್ನು ತೆಗೆದುಕೊಳ್ಳಬಹುದು. ಇದನ್ನು ನೇರವಾಗಿ ಸೇವಿಸುವ ಬದಲು, ಅರಿಶಿನದಿಂದ ತಯಾರಿಸಿದ ಇತರ ಆಹಾರಗಳನ್ನು ಸೇವಿಸುವುದರಿಂದ ಕರ್ಕ್ಯುಮಿನ್ ಕೊರತೆ ಕಡಿಮೆಯಾಗುತ್ತದೆ.

ಅರಿಶಿನವನ್ನು ಸಾಮಾನ್ಯವಾಗಿ ರಕ್ತ ಸೋರಿಕೆಯನ್ನು ತಡೆಗಟ್ಟಲು ಅಥವಾ ಗಾಯವನ್ನು ಗುಣಪಡಿಸಲು ಬಳಸಲಾಗುತ್ತದೆ. ಆದರೆ ಅರಿಶಿನ ಹಾಲು ಕೈ ಮತ್ತು ಕಾಲುಗಳಲ್ಲಿನ ನೋವನ್ನು ನಿವಾರಿಸಲು ಸಹ ಪ್ರಯೋಜನಕಾರಿಯಾಗಿದೆ. ಇದು ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ. ಹಾಲಿನಲ್ಲಿ ಅರಿಶಿನ ಹಾಕಿ ಕುಡಿಯುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಲಿನಲ್ಲಿ ಅರ್ಧ ಟೀ ಸ್ಪೂನ್ ಅರಿಶಿನವನ್ನು ಹಾಕಿ ಕುಡಿಯಿರಿ. ಇದು ದೇಹವನ್ನು ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅರಿಶಿನ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬನ್ನು ಕ್ರಮೇಣ ಕಡಿಮೆ ಮಾಡುತ್ತದೆ.‌ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದಾಗ ಅರಿಶಿನ ಹಾಲನ್ನು ಸೇವಿಸುವುದು ಪ್ರಯೋಜನಕಾರಿ. ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಿ ಮಧುಮೇಹದ ಸಮಸ್ಯೆಯನ್ನು ದೂರ ಮಾಡುತ್ತದೆ.

ಇದನ್ನೂ ಓದಿ : ಮಳೆಗಾಲದ ಸೀನು : ಈ ಮನೆ ಮದ್ದು ರಾಮಬಾಣ

ಇದನ್ನೂ ಓದಿ : ನಿಮಗೆ ಲಟಿಕೆ ತೆಗೆಯೋ ಅಭ್ಯಾಸವಿದ್ರೆ ..? ಹಾಗಾದ್ರೆ ಇಂದೇ ಬಿಟ್ಟು ಬಿಡಿ !

(Turmeric Health Tips : How much do you know about the life cycle of turmeric)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular