ಕ್ಷಮಿಸಿ ಬಿಡಿ ವಿಷ್ಣು ದಾದಾ : ಕಣ್ಣೀರಿಡುತ್ತಲೇ ಕ್ಷಮೆಯಾಚಿಸಿದ ತೆಲುಗು ನಟ ವಿಜಯ್ ರಂಗರಾಜು

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಕುರಿತು ಆಕ್ಷೇಪಾರ್ಯ ಹೇಳಿಕೆಗಳನ್ನು ನೀಡಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ಕ್ಷಮೆಯಾಚಿಸಿದ್ದಾರೆ.

ನಾನು ವಿಷ್ಣು ದಾದಾ ಅವರ ಬಗ್ಗೆ ತಪ್ಪಾಗಿ ಮಾತಾಡಿದ್ದೇನೆ, ನನ್ನನ್ನು ಕ್ಷಮಿಸಿ ಬಿಡಿ. ನಾನೀಗ ಕೊರೊನಾದಿಂದ ಬಳಲುತ್ತಿದ್ದೇನೆ. ವಿಷ್ಣು ಅವರ ಅಭಿಮಾನಿಗಳಿಗೆ, ವಿಷ್ಣು ಅವರ ಕುಟುಂಬದವರಿಗೆ, ನಟರಾದ ಪುನೀತ್ ರಾಜ್ಕುಮಾರ್, ಸುದೀಪ್, ಉಪೇಂದ್ರ ಅವರಲ್ಲಿ ಬೇಡಿ ಕೊಳ್ಳುತ್ತಿದ್ದೇನೆ. ನಾನು ಮಾಡಿದ್ದು ದೊಡ್ಡ ತಪ್ಪು. ನನ್ನನ್ನು ಕ್ಷಮಿಸಿಬಿಡಿ. ನಾನು ವಿಷ್ಣು ದಾದಾ ಬಗ್ಗೆ ಮಾತಾಡಿದ್ದು ತಪ್ಪು. ಈ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇನೆ. ಕೊರೊನಾದಿಂದ ಬಳಲುತ್ತಿದ್ದೇನೆ. ನಾನು ಪಾಪ ಮಾಡಿದ್ದೇನೆ ಎಂದು ತೆಲುಗು ನಟ ವಿಜಯ್ ರಂಗರಾಜು ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದಾರೆ.

‘ಅಭಿನಯ ಭಾರ್ಗವ’ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ಕ್ಷಮೆ ಕೇಳಿದ್ದಾರೆ. ತಾವು ಮಾಡಿದ ತಪ್ಪಿನ ಅರಿವಾಗಿ ಗೋಳಾಡುತ್ತ ‘ಕ್ಷಮಿಸಿಬಿಡಿ’ ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಅವರು ಕ್ಷಮೆ ಕೋರಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಕೊರೊನಾದಿಂದ ಬಳಲುತ್ತಿರುವ ವಿಜಯ್ ರಂಗರಾಜು, ಮಾಸ್ಕ್ ಹಾಕಿಕೊಂಡು, ವಿಡಿಯೋದಲ್ಲಿ ಗೋಳಾಡಿದ್ದಾರೆ. ‘ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ’ ಎಂದು ಅಲವತ್ತುಕೊಂಡಿದ್ದಾರೆ ವಿಜಯ್.

ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತೆಲುಗು ನಟ ವಿಜಯ್ ರಂಗರಾಜು ದಶಕಗಳ ಹಿಂದೆ ವಿಷ್ಣುವರ್ಧನ್ ಜತೆ ತಾವು ನಟಿಸಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ಡಾ.ವಿಷ್ಣು ಅವರ ನಡತೆ ಬಗ್ಗೆ ಕೆಲವೊಂದು ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು. ಅಂದು ಶೂಟಿಂಗ್ ಮಾಡುವಾಗ ತಾವು ವಿಷ್ಣುವರ್ಧನ್ ಅವರ ಕಾಲರ್ ಹಿಡಿದು ಜಗಳ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ಸಂದರ್ಶನದ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ವಿಷ್ಣುವರ್ಧನ್ ಅಭಿಮಾನಿಗಳು, ಸ್ಯಾಂಡಲ್ವುಡ್ ಕಲಾವಿದರೂ ಸೇರಿದಂತೆ ಕನ್ನಡಿಗರೆಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ತನ್ನ ತಪ್ಪಿನ ಬಗ್ಗೆ ಎಚ್ಚೆತ್ತುಕೊಂಡಿರುವ ವಿಜಯ್ ರಂಗರಾಜು, ‘ನನ್ನನ್ನು ಬಿಟ್ಟುಬಿಡಿ. ನನ್ನ ಬಳಿ ದುಡ್ಡು ಇಲ್ಲ, ಏನೂ ಇಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಕೊಂಡಿದ್ದೇನೆ. ವಿಷ್ಣುವರ್ಧನ್ ಅವರ ಬಗ್ಗೆ ನಾನು ಮಾತಾಡಿದ್ದು ತಪ್ಪು. ವಿಷ್ಣುವರ್ಧನ್ ಅವರ ಎಲ್ಲ ಫ್ಯಾನ್ಸ್ಗೆ ಕಾಲಿಗೆ ಬಿದ್ದು, ನಾನು ನಮಸ್ಕಾರ ಮಾಡಿ ಕೇಳಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ. ವಿಷ್ಣು ದಾದಾ ಅವರೇ ನನ್ನನ್ನು ಕ್ಷಮಿಸಿಬಿಡಿ ಸ್ವಾಮಿ.

ವಿಷ್ಣುವರ್ಧನ್ ಅವರ ಅಭಿಮಾನಿಗಳೇ, ಕರ್ನಾಟಕದ ಜನರೇ ನನ್ನನ್ನು ಕ್ಷಮಿಸಿಬಿಡಿ. ವಿಷ್ಣುವರ್ಧನ್ ಅವರ ಬಗ್ಗೆ ಮಾತಾಡಿ ನಾನು ಬಹಳ ದೊಡ್ಡ ತಪ್ಪು ಮಾಡಿಬಿಟ್ಟಿದ್ದೇನೆ. ಅಂತಹ ದೊಡ್ಡ ವ್ಯಕ್ತಿಯನ್ನು ನಾನು ಮುಟ್ಟುವುದಕ್ಕೆ ಸಾಧ್ಯವೇ? ಯಾವುದೋ ಭರದಲ್ಲಿ ಏನೇನೋ ಮಾತನಾಡಿ ತಪ್ಪು ಮಾತಾಡಿಬಿಟ್ಟೆ. ಇನ್ಮುಂದೆ ಕನ್ನಡ, ತಮಿಳು, ತೆಲುಗು, ಮಲಯಾಳಂನ ಯಾವ ಕಲಾವಿದರ ಬಗ್ಗೆಯೂ ಈ ರೀತಿ ಮಾತನಾಡುವುದಿಲ್ಲ’ ಎಂದಿದ್ದಾರೆ.

Comments are closed.