(Yoga for diabetes) ಮಧುಮೇಹವು ಗಂಭೀರವಾದ ಆರೋಗ್ಯ ಸ್ಥಿತಿಯಾಗಿದ್ದು ಅದು ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಮತ್ತು ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನೂ ಮಧುಮೇಹಕ್ಕೆ ಪ್ರಮುಖ ಕಾರಣಗಳಲ್ಲಿ ಒತ್ತಡವೂ ಒಂದು. ಇದು ದೇಹದಲ್ಲಿ ಗ್ಲುಕಗನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಯೋಗಾಸನಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನದ ನಿರಂತರ ಅಭ್ಯಾಸವು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅದರ ದುಷ್ಪರಿಣಾಮಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಮಧುಮೇಹವನ್ನು ಯೋಗದಿಂದ ನಿಯಂತ್ರಿಸಬಹುದು. ಇದಕ್ಕೆ ಅನೇಕ ಯೋಗ ಭಂಗಿಗಳಿವೆ, ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಯನ್ನು ಪ್ರೇರೇಪಿಸುತ್ತದೆ. ಅಂತರಾಷ್ಟ್ರೀಯ ಯೋಗ ತಜ್ಞ, ಮಾನ್ಸಿ ಗುಲಾಟಿ ಅವರು ಮನೆಯಲ್ಲಿ ಕೆಲವು ಶಕ್ತಿಯುತ ಮತ್ತು ಸುಲಭವಾಗಿ ಮಾಡಬಹುದಾದ ಯೋಗದ ಭಂಗಿಗಳನ್ನು ಹಂಚಿಕೊಂಡಿದ್ದಾರೆ. ಅದು ನೈಸರ್ಗಿಕವಾಗಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸಲು 3 ಅತ್ಯುತ್ತಮ ಯೋಗ ಆಸನಗಳು:
ಪವನ ಮುಕ್ತಾಸನ;
ನಯವಾದ ಮೇಲ್ಮೈಯಲ್ಲಿ ನಿಮ್ಮ ಬೆನ್ನಿನ ಮೇಲೆ ಮಲಗಿ ನಿಮ್ಮ ಕಾಲುಗಳನ್ನು ಒಟ್ಟಾಗಿಸಿ ಹಾಗೂ ತೋಳುಗಳನ್ನು ನಿಮ್ಮ ಶರೀರದ ಪಕ್ಕದಲ್ಲಿರಿಸಿ. ನಂತರ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಉಸಿರನ್ನು ಬಿಡುತ್ತಾ ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಯ ಕಡೆಗೆ ತನ್ನಿ, ಮತ್ತು ನಿಮ್ಮ ಹೊಟ್ಟೆಯ ಮೇಲೆ ನಿಮ್ಮ ತೊಡೆಗಳನ್ನು ತಂದು ಕೈಗಳಿಂದ ಒತ್ತಿರಿ. ನಿಮ್ಮ ಮೊಣಕಾಲುಗಳನ್ನು ತಬ್ಬಿದಂತೆ ನಿಮ್ಮ ಕಾಲುಗಳ ಸುತ್ತಲೂ ನಿಮ್ಮ ಕೈಗಳನ್ನು ಹಿಡಿಯಿರಿ. ಪ್ರತಿ ಬಾರಿ ನೀವು ಉಸಿರಾಡುವಾಗ, ನಿಮ್ಮ ಕೈಗಳ ಹಿಡಿತವನ್ನು ಬಿಗಿಗೊಳಿಸಿ ಮತ್ತು ನಿಮ್ಮ ಎದೆಯ ಮೇಲೆ ಒತ್ತಡವನ್ನು ಹೆಚ್ಚಿಸಿ. ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಹಿಡಿತವನ್ನು ಸಡಿಲಗೊಳಿಸಿ. ಇದೇ ರೀತಿಯಾಗಿ ನೀವು ಮೇಲೆ ಕೆಳಗೆ ಅಥವಾ ಎಡದಿಂದ ಬಲಕ್ಕೆ ಮೂರರಿಂದ ಊದು ಬಾರಿ ಮಾಡಿ. ನಂತರ ವಿಶ್ರಾಂತಿ ಸ್ಥಿತಿಗೆ ಬನ್ನಿ.

ಬಾಲಾಸನ:
ಬಾಲಾಸನ ಯೋಗ ಮಾಡುವ ವಿಧಾನ ತುಂಬಾ ಸುಲಭ. ಎರಡು ಕಾಲುಗಳನ್ನು ಮಡಚಿ ವಜ್ರಾಸನ ಸ್ಥಿತಿಗೆ ಬನ್ನಿ. ನಿಮ್ಮ ಎರಡು ಮಂಡಿಗಳ ನಡುವೆ ಸ್ವಲ್ಪ ಅಂತರವಿರಲಿ. ಆಳವಾಗಿ ಉಸಿರು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ತಲೆಯ ನೇರ ಮೇಲಕ್ಕೆತ್ತಿ ಸಂಪೂರ್ಣವಾಗಿ ಉಸಿರನ್ನು ಹೊರಹಾಕಿ ಮುಂದಕ್ಕೆ ಬಾಗಿ. ಎರಡು ಹಸ್ತಗಳನ್ನು ಮತ್ತು ಹಣೆಯನ್ನು ನೆಲದಮಲೆ ಇರಿಸಿ 10 ರಿಂದ 15 ಸೆಕೆಂಡುಗಳ ಕಾಲ ಇದೇ ಸ್ಥಿತಿಯಲ್ಲಿ ಇರಿ.ಇದು ಇನ್ಸುಲಿನ್ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ನಿರ್ವಹಿಸುತ್ತದೆ.

ಸೇತು ಬಂಧ ಆಸನ (ಸೇತುವೆ ಭಂಗಿ):
ಮೊದಲಿಗೆ, ನಿಮ್ಮ ಎರಡೂ ಕಾಲುಗಳು ಮುಂದಕ್ಕೆ ಚಾಚಿರುವಂತೆ ಕೆಳಗೆ ಕುಳಿತುಕೊಳ್ಳಬೇಕು. ನಿಧಾನವಾಗಿ ಹಾಗೆ ಹಿಂದಕ್ಕೆ ಬಾಗಿ ಮಲಗಿಕೊಳ್ಳಿ. ನಿಮ್ಮ ಪಾದಗಳಿಗೆ ಮತ್ತು ಸೊಂಟಕ್ಕೆ ಸ್ವಲ್ಪ ಅಂತರವಿರುವಂತೆ ಮಂಡಿಯನ್ನು ಮಡಿಸಿ. ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿ ಅಂಗೈ ಕೆಳಕ್ಕೆ ಮುಖ ಮಾಡುವಂತೆ ಇರಿಸಬೇಕು. ದೀರ್ಘವಾಗಿ ಉಸಿರಾಡಿಸಿ, ನಿಧಾನವಾಗಿ ಬೆನ್ನನ್ನು ಎತ್ತಬೇಕು. ನಿಮ್ಮ ಗದ್ದವು ನಿಮ್ಮ ಎದೆಭಾಗಕ್ಕೆ ತಾಕುವ ತನಕ ಮೇಲೆತ್ತಬೇಕು. ನಿಮ್ಮ ಎರಡೂ ತೊಡೆಗಳು ಸಮನಾಂತರವಾಗಿರಬೇಕು. ಎರಡೂ ಅಂಗೈಗಳನ್ನು ನೆಲಕ್ಕೆ ಒತ್ತಿ, ನಿಮ್ಮ ಬೆನ್ನು ಹಾಗು ಹೆಡಕನ್ನು ಮೇಲೆತ್ತಿ. ಇದೇ ಭಂಗಿಯಲ್ಲಿ ಕೆಲ ಕ್ಷಣಗಳ ಕಾಲ ಇರಬೇಕು.

ಈ ಮೂರು ಅಸನಗಳು ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಾಗೂ ಇನ್ಸುಲಿನ್ ಅನ್ನು ಉತಪಾದಿಸಲು ಮೇದೋಜ್ಜೀರಕ ಗ್ರಂಥಿಯನ್ನು ಪ್ರೇರೇಪಿಸುತ್ತದೆ.
ಇದನ್ನೂ ಓದಿ : Protein Diet : ನಿಮಗಿದು ಗೊತ್ತಾ; ದೇಸಿ ಡಯಟ್‌ನಲ್ಲಿ ಯಾವ ರೀತಿ ಪ್ರೋಟೀನ್ ಆಹಾರಗಳನ್ನು ಸೇರಿಸಿಕೊಳ್ಳಬೇಕು ಎಂದು…
Yoga for Diabetes: 3 Best Yoga Poses to Control Diabetes Naturally