Sachin Tendulkar statue : ಸಚಿನ್ ತೆಂಡೂಲ್ಕರ್ 50ನೇ ಹುಟ್ಟುಹಬ್ಬಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಉಡುಗೊರೆ

ಮುಂಬೈ: ವಿಶ್ವದಾಖಲೆಗಳ ಸರದಾರ, ಬ್ಯಾಟಿಂಗ್ ಲೆಜೆಂಡ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar statue) 50ನೇ ಹುಟ್ಟುಹಬ್ಬದ ಹೊಸ್ತಿಲಲ್ಲಿದ್ದಾರೆ. ಇನ್ನೆರಡು ತಿಂಗಳಲ್ಲಿ ಸಚಿನ್ 50ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಏಪ್ರಿಲ್ 24ರಂದು ಸಚಿನ್ ತೆಂಡೂಲ್ಕರ್ ಅವರ ಜನ್ಮದಿನ. ಹುಟ್ಟುಹಬ್ಬದ ದಿನ ಸಚಿನ್ ಅವರಿಗ ಮುಂಬೈ ಕ್ರಿಕೆಟ್ ಸಂಸ್ಥೆ (Mumbai Cricket Associatioan – MCA) ವಿಶೇಷ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ.

ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣದ ಒಳಗೆ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ಪ್ಲಾನ್ ಮಾಡಿದೆ. ಇದೇ ವರ್ಷ ಐಸಿಸಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ಆ ಟೂರ್ನಿಯ ವೇಳೆ ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ಅವರ ಪ್ರತಿಮೆಯನ್ನು ಅನಾವರಣ ಮಾಡುವ ಯೋಜನೆ ಸಿದ್ಧವಾಗಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ಹೇಳಿದ್ದಾರೆ.

“ಕ್ರಿಕೆಟ್’ಗೆ ಸಚಿನ್ ಅವರ ಕೊಡುಗೆ ಏನು ಎಂಬುದು ಪ್ರತೀ ಮುಂಬೈಕರ್’ಗೆ ಅಷ್ಟೇ ಅಲ್ಲ, ಇಡೀ ಜಗತ್ತಿಗೇ ಗೊತ್ತು. ಅವರು ಕ್ರಿಕೆಟ್ ಜಗತ್ತಿನ ಹೆಮ್ಮೆ. ಸಚಿನ್ ಅವರ ಸಾಧನೆಗೆ ಸಣ್ಣ ಉಡುಗೊರೆ ಎಂಬಂತೆ ಅವರ 50ನೇ ಹುಟ್ಟುಹಬ್ಬಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರತಿಮೆಯನ್ನು ನಿಲ್ಲಿಸಲು ಮುಂದಾಗಿದ್ದೇವೆ. ಇದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿರುವ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ಪ್ರತಿಮೆಯಂತಿರಲಿದೆ. ಪ್ರತಿಮೆ ನಿರ್ಮಿಸುವ ಬಗ್ಗೆ ನಾವು ಸಚಿನ್ ಅವರ ಜೊತೆ ಮಾತನಾಡಿದ್ದು, ಅವರ ಒಪ್ಪಿಗೆ ಪಡೆದಿದ್ದೇವೆ” ಎಂದು ಅಮೋಲ್ ಕಾಳೆ ತಿಳಿಸಿದ್ದಾರೆ.

ಇದನ್ನೂ ಓದಿ : New Zeeland vs England test : ಫಾಲೋ ಆನ್‌ಗೆ ತುತ್ತಾದರೂ ಇಂಗ್ಲೆಂಡ್ ಸೊಕ್ಕಡಗಿಸಿ ಗೆದ್ದು ಬೀಗಿದ ನ್ಯೂಜಿಲೆಂಡ್

ಇದನ್ನೂ ಓದಿ : Meg Lanning : ಧೋನಿಯೂ ಅಲ್ಲ, ಪಾಂಟಿಂಗೂ ಅಲ್ಲ; ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕಿ ಈ ಮಹಿಳೆ

ಇದನ್ನೂ ಓದಿ : ಪತ್ನಿ ಸಮೇತ ಮಹಾಕಾಳೇಶ್ವರನ ದರ್ಶನ ಪಡೆದ ರಾಹುಲ್, ಕನ್ನಡಿಗನಿಗೆ ಸಿಗಲಿದ್ಯಾ ಶಿವಾನುಗ್ರಹ?

2013ರ ನವೆಂಬರ್ ತಿಂಗಳಲ್ಲಿ ಸಚಿನ್ ತೆಂಡೂಲ್ಕರ್ ವಾಂಖೆಡೆ ಕ್ರೀಡಾಂಗಣದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್”ನ ತಮ್ಮ ಕಟ್ಟಕಡೆಯ ಪಂದ್ಯವಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಆ ಟೆಸ್ಟ್ ಪಂದ್ಯದ ನಂತರ ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. 2011ರಲ್ಲಿ ಭಾರತ ತಂಡ ವಾಂಖೆಡೆ ಕ್ರೀಡಾಂಗಣದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಮೂಲಕ ವಿಶ್ವಕಪ್ ಗೆಲ್ಲುವ ಸಚಿನ್ ಅವರ ದಶಕಗಳ ಕನಸು ತವರು ನೆಲದಲ್ಲೇ ನನಸಾಗಿತ್ತು.

Sachin Tendulkar statue : Special gift from Mumbai Cricket Association for Sachin Tendulkar’s 50th birthday

Comments are closed.