ರಕ್ಷಾ ಬಡಾಮನೆ
ಒತ್ತಡದ ಜೀವನ ಶೈಲಿಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸೋದೆ ಕಡಿಮೆ. ಆರೋಗ್ಯ ವೃದ್ದಿಸಿಕೊಳ್ಳಲು ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆಯೂ ಅತೀ ಮುಖ್ಯ. ಬಾಯಿಗೆ ರುಚಿಯಾಗಿ ರೋ ಆಹಾರ ಸೇವನೆಯಿಂದ ಆರೋಗ್ಯ ವೃದ್ದಿಸೋದಿಲ್ಲ. ನಾವು ತಿನ್ನೋ ಆಹಾರ ಮಕ್ಕಳಿಗೆ ಬೇಕಾದ ಪ್ರೋಟಿನ್, ವಿಟಮಿನ್ ಹಾಗೂ ಮಿನರಲ್ಸ್ ನೀಡೋದಿಲ್ಲ. ಹೀಗಾಗಿ ನಾವು ಯಾವ ಆಹಾರ ವನ್ನು ಸೇವನೆ ಮಾಡಿದ್ರೆ ಸೂಕ್ತ ಅನ್ನೋದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದ್ರಲ್ಲೂ ಮಕ್ಕಳು ಪರೀಕ್ಷೆಯ ಸಮಯದಲ್ಲಿ ಬಾದಾಮಿ ( almonds ) ಸೇವನೆ ಮಾಡಬಹುದೇ ಅನ್ನೋದಕ್ಕೆ ಉತ್ತರ ಇಲ್ಲಿದೆ.

ಹಣ್ಣು, ತರಕಾರಿ, ಮಾಂಸ, ಮೊಟ್ಟೆ, ಸೊಪ್ಪು, ಡ್ರೈಫ್ರೂಟ್ಸ್ ಗಳನ್ನು ಎತೇಚ್ಚವಾಗಿ ನೀಡುವುದರ ಜೊತೆಗೆ ಮಕ್ಕಳಿಗೆ ಆಹಾರ ಸೇವನೆಯಲ್ಲಿ ಶಿಸ್ತು ಬೆಳೆಸುವುದು ಅತೀ ಅಗತ್ಯ. ರಸ್ತೆ ಬದಿಯ ಕುರುಕಲು ತಿಂಡಿ ಸೇವೆಯಿಂದ ಆದಷ್ಟು ಮಕ್ಕಳನ್ನು ದೂರ ಇರಿಸುವುದು ತೀರಾ ಅಗತ್ಯ. ಇದೀಗ ಮಕ್ಕಳಿಗೆ ಪರೀಕ್ಷೆಯ ಸಮಯ. ಈ ವೇಳೆಯಲ್ಲಿ ಮಕ್ಕಳ ಬುದ್ದಿಶಕ್ತಿ ವೃದ್ದಿಗೆ ಯಾವ ಆಹಾರ ಕೊಡಬೇಕು. ಯಾವ ಆಹಾರ ಕೊಡಬಾರದು ಅನ್ನೋ ಬಗ್ಗೆ ಪೋಷಕರು ಗಮನ ಹರಿಸೋದು ಬಹಳ ಮುಖ್ಯ. ಅದ್ರಲ್ಲೂ ಮಕ್ಕಳಿಗೆ ಬಾದಾಮಿ (almonds ) ನೀಡೋದ್ರಿಂದ ಮಕ್ಕಳ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತೆ ಅನ್ನೋದು ನಿಮಗೆ ಗೊತ್ತಾ ?

ಬಾದಾಮಿ ಅತ್ಯಧಿಕ ಪೋಷಕಾಂಶ ಹಾಗೂ ವಿಟಮಿನನ್ ಇರುವ ಪದಾರ್ಥವಾಗಿದ್ದು, ಸ್ವಾಭಾವಿಕವಾಗಿ ಅತೀ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುತ್ತದೆ. ಬಾದಾಮಿಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿದ್ದು, ಆರೋಗ್ಯದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಹಸಿ ಬಾದಾಮಿಯನ್ನೂ ಸೇವನೆ ಮಾಡಬಹುದಾಗಿದೆ. ಬಾದಾಮಿ ರುಚಿಕರ ಹಾಗೂ ಆರೋಗ್ಯಕರವಾಗಿದ್ದು, ನಾಲಿಗೆಗೆ ರುಚಿಕರ ಹಾಗೂ ದೇಹಾರೋಗ್ಯಕ್ಕೆ ಹಿತವನ್ನು ನೀಡುತ್ತದೆ.

ಪ್ರತಿನಿತ್ಯ ಒಂದೊಂದು ಬಾದಾಮಿ (almonds ) ಸೇವನೆ ಮಾಡುವುದಂದ ಮಕ್ಕಳ ಮಿದುಳು ಆರೋಗ್ಯಕರವಾಗಿ ವೃದ್ಧಿಯಾಗುತ್ತದೆ. ಮೂಳೆಗಳು ಬಲವರ್ಧನೆಗೊಳ್ಳುತ್ತದೆ. ಅಲ್ಲದೆ, ಮಲಬದ್ಧತೆ ಕೂಡ ನಿವಾರಣೆಗೊಳ್ಳುತ್ತದೆ. ಸ್ವಾಸ್ಥ್ಯ, ಸೌಂದರ್ಯ ವರ್ಧನೆಗೂ ಸಹಕಾರಿಯಾಗಿದೆ.

ಬಾದಾಮಿಯನ್ನು ಕಿಂಗ್ ಆಫ್ ಡ್ರೈ ಫ್ರೂರ್ಟ್ ಎಂದೂ ಕೂಡ ಕರೆಯುವುದುಂಟು. ಬಾದಾಮಿಯಲ್ಲಿ ಅನೇಕ ಪೌಷ್ಟಿಕಾಂಶಗಲಿದ್ದು, ಮಿದುಳಿನ ವಿಕಾಸ ಮತ್ತು ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ವಿಶೇಷವಾಗಿ ಬೆಳೆಯುತ್ತಿರುವ ಕಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಜೊತೆಗೆ ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ.

ಇದರಲ್ಲಿ ಮಿದುಳಿನ ಕಾರ್ಯಕ್ಕೆ ಪ್ರಯೋಜನವಾಗುವ ರಿಬೋಫ್ಲಾವಿನ್ ಮತ್ತು ಎಲ್ ಕಾರಿಟೈನ್ ಎಂಬ ಪೌಷ್ಟಿಕಾಂಶಗಳಿವೆ. ಇದು ಮಿದುಳಿನ ನರಗಳ ಕ್ರಿಯಾ ಚಟುವಟಿಕೆಯನ್ನು ವೃದ್ಧಿಗೊಳಿಸುತ್ತದೆ. ಹೀಗಾಗಿ ಪರೀಕ್ಷೆಯ ಸಮಯದಲ್ಲಿ ಬಾದಾಮಿ ನೀಡೋದ್ರಿಂದ ಮಕ್ಕಳ ಜ್ಞಾಪಕ ಶಕ್ತಿ ವೃದ್ದಿಸುತ್ತದೆ.
ಇದನ್ನೂ ಓದಿ : ಜಿಮ್ ಸೇರೋಕು ಮುನ್ನ ಇರಲಿ ಎಚ್ಚರ : ವರ್ಕೌಟ್ ಬಗ್ಗೆ ವೈದ್ಯರು ಏನ್ ಹೇಳ್ತಾರೆ ಗೊತ್ತಾ
ಇದನ್ನೂ ಓದಿ : ಪ್ರತಿದಿನ ಒಂದೇ ತರಹದ ಬ್ರೆಕ್‌ಫಾಸ್ಟ್ ಮಾಡಿ ಬೇಜಾರಾಗಿದೆಯೇ? ರುಚಿಯಾದ ಬಾಳೆಹಣ್ಣಿನ ಫ್ರೆಂಚ್ ಟೋಸ್ಟ್ ಒಮ್ಮೆ ಟ್ರೈ ಮಾಡಿ
You know what happens to the almonds during the Exams