BBMP Budget: ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್‌: ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ

ಬೆಂಗಳೂರು: (BBMP Budget) ಕಳೆದ ವರ್ಷ ಭೀಕರ ಪ್ರವಾಹಕ್ಕೆ ಒಳಗಾದ ಸಿಲಿಕಾನ್‌ ಸಿಟಿಯಲ್ಲಿ ಇಂದಿಗೂ ಹದಗೆಟ್ಟ ರಸ್ತೆಗಳು ಮತ್ತು ನಾಗರಿಕ ಸೌಕರ್ಯಗಳ ಕೊರತೆ ಬಗ್ಗೆ ದೂರುಗಳು ಬರುತ್ತಲೇ ಇವೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬೆಂಗಳೂರು ಟ್ರಾಫಿಕ್ ಸಮಸ್ಯೆಗಳ ನಡುವೆ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಸಿದ್ಧವಾಗಿದೆ.

ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳನ್ನು ಮಂಡಿಸಿರುವ ಬಿಜೆಪಿ, ಇದೀಗ ಬೆಂಗಳೂರಿಗರನ್ನು ಒಲಿಸಿಕೊಳ್ಳಲು ಬಿಬಿಎಂಪಿ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸುವ ನಿರೀಕ್ಷೇಯಿದೆ. ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಒತ್ತು ನೀಡುವುದರ ಜೊತೆಗೆ ಆಸ್ತಿ ತೆರಿಗೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಕೂಡ ಇದೆ. ಇನ್ನೂ ಕಳೆದ ವರ್ಷದ ಕೆಲವು ಯೋಜನೆಗಳನ್ನು ಹಾಗೇ ಮುಂದುವರಿಸಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಸಂಘ ಸಂಸ್ಥೆಗಳಿಗೆ ನಿಗಮದಿಂದ ಮೀಸಲಿಟ್ಟ ಅನುದಾನ ಕುಗ್ಗಲಿದೆ ಎಂದು ಮೂಲಗಳು ಸೂಚಿಸಿವೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಬಜೆಟ್ ಮಂಡಿಸಲಿದ್ದು, ಬಜೆಟ್ ಲೆಕ್ಕಾಚಾರ ಮುಗಿಸಿರುವ ಪಾಲಿಕೆ ಅಧಿಕಾರಿಗಳು ಬಜೆಟ್ ಪಟ್ಟಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಸಲ್ಲಿಸಿದ್ದಾರೆ. ಬಿಬಿಎಂಪಿ ಬಜೆಟ್ ಮಂಡನೆಗೆ ಅನುಮತಿ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಬಜೆಟ್ ಮಂಡನೆ ಆನ್‌ಲೈನ್‌ನಲ್ಲಿ ಸ್ಟ್ರೀಮ್ ಆಗುವುದರಿಂದ ಸಾರ್ವಜನಿಕರು ಕೂಡ ಬಜೆಟ್ ಮಂಡನೆಯನ್ನು ನೇರವಾಗಿ ವೀಕ್ಷಿಸಬಹುದು.

“ಸರ್ಕಾರಕ್ಕೆ ತಿಳಿಸಲಾಗಿದೆ. ಬೀದಿ ದೀಪಗಳು, ರಸ್ತೆಗಳು ಮತ್ತು ಇತರ ನಾಗರಿಕ ಸೌಕರ್ಯಗಳಿಗೆ ಮೀಸಲಿಡುವುದನ್ನು ಹೊರತುಪಡಿಸಿ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಗಮನಹರಿಸುತ್ತದೆ. ಬಜೆಟ್ ಗಾತ್ರವು ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿದಂತೆಯೇ ಇರುತ್ತದೆ. ಬಿಬಿಎಂಪಿ ಈ ವರ್ಷ 9,000 ಕೋಟಿ ರೂಪಾಯಿಗಳ ಬಜೆಟ್ ಮಂಡಿಸುವ ನಿರೀಕ್ಷೆ ಇದೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ : IPS Roopa VS IAS Rohini: ರೋಹಿಣಿ ಸಿಂಧೂರಿ,‌ ರೂಪಾ ಮೌದ್ಗಿಲ್ ವೈಯಕ್ತಿಕ ಕಿತ್ತಾಟ : ಎಚ್ಚರಿಕೆ ಕೊಟ್ಟ ಕಾನೂನು ಸಚಿವ

ಕಸ ವಿಲೇವಾರಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ಅದಕ್ಕೆ ಮಹತ್ವ ನಿಡಲು ನಿರ್ಧರಿಸಲಾಗಿದೆ. ಹೀಗಾಗಿ, ಈ ವರ್ಷ ಕಸ ವಿಲೇವಾರಿಗೆ ಕಳೆದ ವರ್ಷಗಳಗಿಂತ ಅತಿ ಹೆಚ್ಚು ಅನುದಾನ ಹಂಚಿಕೆಯಾಗುವ ಸಾಧ್ಯತೆ ಇದೆ. ಆದರೆ, ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಕೆರೆಗಳು, ಕಾಲುವೆಗಳು, ಉದ್ಯಾನವನಗಳ ಉನ್ನತೀಕರಣಕ್ಕೂ ಬಜೆಟ್‌ನಲ್ಲಿ ಆದ್ಯತೆ ಸಿಗಲಿದೆ. ಇನ್ನು, ಬಜಜೆಟ್ ಮಂಡನೆಗೆ ಎರಡರಿಂದ ಮೂರು ತಿಂಗಳು ಇದ್ದಾಗಲೇ ಪೂರ್ವಭಾವಿಯಾಗಿ ಜನರಿಂದ ಎಲ್ಲ ವಾರ್ಡ್ ಅಭಿವೃದ್ಧಿ, ವಸ್ತುಸ್ಥಿತಿ ಕುರಿತು ಜನಾಗ್ರಹ ಸಂಸ್ಥೆ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಿದೆ. ಅದಕ್ಕಾಗಿ ಜನಾಗ್ರಹ ಸಂಸ್ಥೆ ನಗರದಲ್ಲಿ ‘ನನ್ನ ನಗರ – ನನ್ನ ಬಜೆಟ್ (My City- My Budget) ಅಭಿಯಾನ ಕೂಡ ನಡೆಸಲಾಗಿತ್ತು.

BBMP Budget: BBMP Budget in first week of March: Education, health top priority

Comments are closed.