ICC Women’s T20 World Cup : ಇಂದು ಭಾರತ Vs ಆಸ್ಟ್ರೇಲಿಯಾ ಸೆಮಿಫೈನಲ್; ಇಲ್ಲಿದೆ ಹೈವೋಲ್ಟೇಜ್ ಸೆಮೀಸ್‌ನ ಕಂಪ್ಲೀಟ್ ಡೀಟೇಲ್ಸ್

ಕೇಪ್ ಟೌನ್ : ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ (ICC Women’s T20 World Cup 2023) ಮೊದಲ ಸೆಮಿಫೈನಲ್ ಪಂದ್ಯ ಇಂದು ನಡೆಯಲಿದ್ದು, ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೇಪ್ ಟೌನ್’ನ ನ್ಯೂಲ್ಯಾಂಡ್ಸ್ ಮೈದಾನ ಆತಿಥ್ಯ ವಹಿಸಲಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್’ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ (India Vs Australia Semi Final ) ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೀಗ ಟೀಮ್ ಇಂಡಿಯಾ ವನಿತೆಯರಿಗೆ ಒದಗಿ ಬಂದಿದೆ.

ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧನ ಲೀಗ್ ಹಂತದಲ್ಲಿ ಸತತ ಎರಡು ಅರ್ಧಶತಗಳನ್ನು ಬಾರಿಸಿ ಉತ್ತಮ ಫಾರ್ಮ್’ನಲ್ಲಿದ್ದು, ಸೆಮಿಫೈನಲ್ ಪಂದ್ಯದಲ್ಲೂ ತಮ್ಮ ಅಮೋಘ ಫಾರ್ಮನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರನ್ನೇ ಹೊಂದಿದ್ದು, ಭಾರತ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ವಿಕೆಟ್ ಕೀಪರ್ ಅಲೀಸಾ ಹೀಲಿ, ನಾಯಕಿ ಮೆಗ್ ಲ್ಯಾನಿಂಗ್, ಸೂಪರ್ ಸ್ಟಾರ್ ಆಲ್ರೌಂಡರ್ ಎಲೀಸ್ ಪೆರಿ, ಯುವ ಆಲ್ರೌಂಡರ್ ತಹಿಲಾ ಮೆಗ್ರಾತ್, ವಿಕೆಟ್ ಕೀಪರ್ ಬೆತ್ ಮೂನಿ, ಅನಾಬೆಲ್ ಸದರ್ಲೆಂಡ್, ಆಶ್ಲೆ ಗಾರ್ಡ್ನರ್ ಆಸೀಸ್ ಪಾಳೆಯದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI :
1.ಸ್ಮೃತಿ ಮಂಧನ, 2.ಶೆಫಾಲಿ ವರ್ಮಾ, 3.ಜೆಮೈಮಾ ರಾಡ್ರಿಗ್ಸ್, 4.ಹರ್ಮನ್ ಪ್ರೀತ್ ಕೌರ್, 5.ರಿಚಾ ಘೋಷ್ (ವಿಕೆಟ್ ಕೀಪರ್), 6. ದೀಪ್ತಿ ಶರ್ಮಾ, 7.ಪೂಜಾ ವಸ್ತ್ರಕಾರ್, 8.ರೇಣುಕಾ ಠಾಕೂರ್, 9.ಶಿಖಾ ಪಾಂಡೆ, 10.ದೇವಿಕಾ ವೈದ್ಯ, 11.ರಾಜೇಶ್ವರಿ ಗಾಯಕ್ವಾಡ್.

India Vs Australia Semi Final : ಭಾರತ Vs ಆಸ್ಟ್ರೇಲಿಯಾ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ :

ಪಂದ್ಯ ಆರಂಭ: ಸಂಜೆ 6.30ಕ್ಕೆ
ಸ್ಥಳ: ನ್ಯೂಲ್ಯಾಂಡ್ಸ್ ಮೈದಾನ, ಕೇಪ್ ಟೌನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : KL Rahul visits SG cricket factory: ಕೈಕೊಟ್ಟ ಬ್ಯಾಟಿಂಗ್ ಫಾರ್ಮ್, ಎಸ್‌ಜಿ ಕ್ರಿಕೆಟ್ ಫ್ಯಾಕ್ಟರಿಗೆ ಭೇಟಿ ಕೊಟ್ಟ ಕನ್ನಡಿಗ ಕೆ.ಎಲ್ ರಾಹುಲ್

ಇದನ್ನೂ ಓದಿ : Jersey Sponsor for Team India: ಟೀಮ್ ಇಂಡಿಯಾಗೆ ಸಿಕ್ತು ಹೊಸ ಜರ್ಸಿ ಸ್ಪಾನ್ಸರ್, ಅಡಿಡಾಸ್ ಜೊತೆ 5 ವರ್ಷಗಳ ಒಪ್ಪಂದ

ಇದನ್ನೂ ಓದಿ : KL Rahul Harbhajan Singh: “ರಾಹುಲ್ ಯಾವುದೇ ಅಪರಾಧ ಎಸಗಿಲ್ಲ” ಕನ್ನಡಿಗನ ವಿರುದ್ಧ ದ್ವೇಷ ಕಾರುತ್ತಿರುವ ವೆಂಕಿಗೆ ಟರ್ಬನೇಟರ್ ತಪರಾಕಿ

ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತದ ಸೆಮಿಫೈನಲ್ ಹಾದಿ :
ಮೊದಲ ಲೀಗ್ ಪಂದ್ಯ: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
2ನೇ ಲೀಗ್ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ ಗೆಲುವು
3ನೇ ಲೀಗ್ ಪಂದ್ಯ: ಇಂಗ್ಲೆಂಡ್ ವಿರುದ್ಧ 11 ರನ್ ಸೋಲು
4ನೇ ಲೀಗ್ ಪಂದ್ಯ: ಐರ್ಲೆಂಡ್ ವಿರುದ್ಧ 5 ವಿಕೆಟ್ ಗೆಲುವು (ಡಕ್ವರ್ತ್ ಲೂಯಿಸ್ ನಿಯಮದನ್ವಯ)

ICC Women’s T20 World Cup : India Vs Australia Semi Final Today; Here are the complete details of High Voltage Semis

Comments are closed.