ಬಿಬಿಎಂಪಿ ಬಜೆಟ್‌ 2023 : ಬೆಂಗಳೂರಿನ ಬೀದಿ ನಾಯಿಗಳಿಗೆ ಬಂಪರ್‌ ಗಿಫ್ಟ್‌

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಮುನ್ನ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2023-24ನೇ ಸಾಲಿನ ಬಜೆಟ್‌ನ್ನು ಇಂದು ಗುರುವಾರ (ಮಾರ್ಚ್‌ 2) ರಂದು ಮಂಡಿಸಲಾಗುತ್ತಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತ ತುಶೀರ್ ಗಿರಿನಾಥ್ ಅವರ ಸಮ್ಮುಖದಲ್ಲಿ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ ಬಹು ನಿರೀಕ್ಷಿತ ಬಜೆಟ್‌ನ್ನು ಮಂಡಿಸಿದ್ದಾರೆ. ಇತ್ತೀಚೆಗೆ ರಾಜ್ಯ ಬಜೆಟ್‌ನಲ್ಲಿ ಈಗಾಗಲೇ ಘೋಷಿಸಿರುವ ಸರಕಾರದ ಆರು ಕೋಟಿ ಅನುದಾನವೂ ಇದರಲ್ಲಿ ಸೇರಿದ್ದು, ಒಟ್ಟು 11 ಸಾವಿರ ಕೋಟಿ ಬಜೆಟ್‌ನ್ನು ಮಂಡಿಸಿದ್ದಾರೆ. ಅದರಲ್ಲಿ ಬೆಂಗಳೂರಿನ ಬೀದಿ ನಾಯಿಗಳಿಗಾಗಿ (Bengaluru stray dogs) 20 ಕೋಟಿಯನ್ನು ಮೀಸಲಿಡಲಾಗಿದೆ.

ಚುನಾಯಿತ ಬಿಬಿಎಂಪಿ ಕೌನ್ಸಿಲ್ ಇಲ್ಲದೆ ಬಜೆಟ್ ಮಂಡಿಸುತ್ತಿರುವುದು ಇದು ಮೂರನೇ ವರ್ಷ. ಈ ವರ್ಷದ ಬಜೆಟ್ ಮಳೆನೀರು ಚರಂಡಿಗಳು, ರಸ್ತೆಗಳು, ಶಿಕ್ಷಣ, ಆರೋಗ್ಯ ಮತ್ತು ವಿವಿಧ ಕಲ್ಯಾಣ ಕಾರ್ಯಗಳು ಸೇರಿದಂತೆ ವಿವಿಧ ನಾಗರಿಕ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಲಾಗಿದೆ. ಬಿಬಿಎಂಪಿ ಬಜೆಟ್ ಅನ್ನು ಟೌನ್ ಹಾಲ್‌ನಲ್ಲಿ ಮಂಡಿಸಲಾಗಿದೆ.

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿವಾರಿಸಲು ಮತ್ತು ನಿಯಂತ್ರಿಸಲು ಆಂಟಿ ರೇಬಿಸ್‌ ಫೈವ್‌ ಇನ್‌ ಒನ್‌ ಲಸಿಕೆಗಾಗಿ ಬಿಬಿಎಂಪಿ ರೂ. 20 ಕೋಟಿ ಮೀಸಲಿಟ್ಟಿದೆ. 2023-24ರಲ್ಲಿ ಬೀದಿ ನಾಯಯಿಗಳ ಸಂತಾನಹರಣ ಮತ್ತು ಸಂತಾನಹರಣ ಶಸ್ತ್ರಕ್ರಿಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ನಾಯಿ ಮತ್ತು ಇತರ ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ರೂ 5 ಕೋಟಿ ವೆಚ್ಚದಲ್ಲಿ ಎರಡು ವಿದ್ಯುತ್ಚಿತಾಗಾರಗಳನ್ನು ಸ್ಥಾಪಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ : ಬಿಬಿಎಂಪಿ ಬಜೆಟ್ 2023 : ಯಾವುದಕ್ಕೆ ಎಷ್ಟು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇದನ್ನೂ ಓದಿ : BBMP Budget 2023: ನಾಳೆ ಬಿಬಿಎಂಪಿ ಬಜೆಟ್‌ ಮಂಡನೆ: ಹಲವು ಅಭಿವೃದ್ದಿ ಯೋಜನೆಗಳ ಘೋಷಣೆ ಸಾಧ್ಯತೆ

ಇದನ್ನೂ ಓದಿ : BBMP Budget: ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್‌: ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ

ಈ ಬಾರಿಯ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಆಸ್ತಿ ತೆರಿಗೆ ಹೊರೆ ಇರುವುದಿಲ್ಲ. ಚುನಾವಣೆ ದೃಷ್ಟಿಯಿಂದ ಆಸ್ತಿ ತೆರಿಗೆ ಏರಿಕೆ ಮಾಡದಂತೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆ ಬಗ್ಗೆ ಗಮನಿಸಿ ಅದಕ್ಕೆ ಪೂರಕವಾದ ಬಜೆಟ್‌ನಲ್ಲಿ ಅನುದಾನವನ್ನು ನೀಡಿದ್ದಾರೆ.

Bengaluru stray dogs : BBMP Budget 2023: Bumper gift for Bengaluru’s stray dogs

Comments are closed.