ದೊಡ್ಮನೆ ಯುವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಟೈಟಲ್‌ ಫಿಕ್ಸ್‌

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿಕೆ ನಂತರ ಅವರ ಅಭಿಮಾನಿಗಳು ಮುಂದಿನ ದಿನಗಳಲ್ಲಿ ತಮ್ಮ ನೆಚ್ಚಿನ ನಟನ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ ಎನ್ನುವ ನೋವು ಕಾಡುತ್ತಿತ್ತು. ನಟ ಪುನೀತ್‌ ರಾಜ್‌ಕುಮಾರ್‌ ನಂತರ ದೊಡ್ಮನೆ ಯುವ ಪೀಳಿಗೆ ಯುವರಾಜ್‌ಕುಮಾರ್‌ನ್ನು ಅವರ ಸ್ಥಾನದಲ್ಲಿ ನೋಡಲು ಅದೆಷ್ಟೋ ಅಭಿಮಾನಿಗಳು ಹಂಬಲಿಸಿದ್ದಾರೆ. ಅದರಂತೆ ಅಪ್ಪು ಅಪಾರ ಸಂಖ್ಯೆಯ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಯುವರಾಜ್‌ಕುಮಾರ್‌ಗಾಗಿ ಸಿನಿಮಾವನ್ನು ಸಿದ್ಧಪಡಿಸಿದ್ದಾರೆ. ಇದೀಗ ಯುವರಾಜ್‌ಕುಮಾರ್‌ (Yuvrajkumar’s first movie) ಅಭಿನಯದ ಮೊದಲ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಮಾಡಿದ್ದಾರೆ.

ದೊಡ್ಮನೆ ಕುಡಿಯ ಗ್ರ್ಯಾಂಡ್‌ ಎಂಟ್ರಿಗೆ ಸಿನಿತಂಡದವರು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಅದರ ಕಂಪ್ಲೀಟ್‌ ಡಿಟೇಲ್ಸ್‌ನ್ನು ಹಂಚಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್‌ ಅವರ ಮೊಮ್ಮಗನ ಮೊದಲ ಸಿನಿಮಾದ ಟೈಟಲ್‌ ಟೀಸರ್‌ನ್ನು ನಾಳೆ (ಮಾರ್ಚ್ 03)ರಂದು ಬಹಳ ಗ್ರ್ಯಾಂಡ್‌ ಆಗಿ ನಟ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಮ್ಮುಖದಲ್ಲೇ ಲಾಂಚ್‌ ಮಾಡಲು ಸಿನಿತಂಡ ಮುಂದಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದ ಸಿದ್ದಲಿಂಗೇಶ್ವರ ಥಿಯೇಟರ್‌ನಲ್ಲಿ ನಾಳೆ ಸಂಜೆ 6.30ಕ್ಕೆ ನಟ ಯುವರಾಜ್‌ಕುಮಾರ್‌ ಚೊಚ್ಚಲ ಸಿನಿಮಾದ ಟೈಟಲ್ ಲಾಂಚ್ ನಡೆಯಲಿದೆ.

ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್‌ ಯುವರಾಜ್‌ಕುಮಾರ್‌ ಚೊಚ್ಚಲ ಸಿನಿಮಾವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದೆ. ಈ ಎಲ್ಲ ಕಾರಣಗಳಿಂದ ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ ಸಿನಿರಂಗಕ್ಕೆ ಎಂಟ್ರಿ ಗ್ರ್ಯಾಂಡ್‌ ಆಗಿರುತ್ತೆ ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ಪುನೀತ್‌ ಅಭಿಮಾನಿಗಳು ಜೂ.ಪವರ್‌ಸ್ಟಾರ್‌ ಪಟ್ಟ ಕೊಟ್ಟು ಸ್ವಾಗತ ಕೋರುತ್ತಿದ್ದಾರೆ. ಈ ಕುರಿತಂತೆ ಯುವರಾಜ್‌ಕುಮಾರ್‌ ಕೂಡ ತಮ್ಮ ಇನ್‌ಸ್ಟಾಗ್ರಮ್‌ನಲ್ಲಿ” ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ ಇರಲಿ ನಿಮ್ಮ ಅಪ್ಪುಗೆ ” ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

ಇದನ್ನೂ ಓದಿ : Mandala: ಹೊಸ ಲೋಕ ಅನಾವರಣಗೊಳಿಸಿದ ʼಮಂಡಲʼ

ಇದನ್ನೂ ಓದಿ : ನಟಿ ಆಶಿಕಾ ರಂಗನಾಥ್‌ ಇನ್‌ಸ್ಟಾಗ್ರಾಮ್‌ ರೀಲ್‌ ಆಯ್ತು ವೈರಲ್‌ : ವಿಡಿಯೋದಲ್ಲಿ ಅಂತಹದೇನಿದೆ ?

ಈ ಹಿಂದೆ ನಟ ಯುವರಾಜ್‌ಕುಮಾರ್‌ ಸಿನಿರಂಗಕ್ಕೆ ಎಂಟ್ರಿ ಕೊಡಬೇಕಿತ್ತು. ಅದರಂತೆ “ಯುವ ರಣಧೀರ ಕಂಠೀರವ” ಎನ್ನುವ ಸಿನಿಮಾ ಟೈಟಲ್‌ ಕೂಡ ಫಿಕ್ಸ್‌ ಆಗಿತ್ತು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಸದ್ಯ ನಟ ಪುನೀತ್‌ ಅಗಲಿಕೆ ಬಳಿಕ ಅವರ ಅಭಿಮಾನಿಗಳು ಯುವ ಸಿನಿರಂಗಕ್ಕೆ ಬರಬೇಕು ಎನ್ನುವುದು ಅಭಿಮಾನಿಗಳ ಮಹಾದಾಸೆ ಆಗಿತ್ತು. ಅಷ್ಟೇ ಅಲ್ಲದೇ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ಗೆ ನಿರ್ದೇಶನ ಮಾಡಬೇಕು ಎಂದು ಕೂಡ ಒತ್ತಾಯಿಸಿದ್ದಾರೆ. ಹೀಗಾಗಿ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಯುವರಾಜ್‌ಕುಮಾರ್‌ ನಟಿಸಲಿರುವ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ.

Yuvrajkumar’s first movie : Dodmane Yuvraj and Santhosh Anandram combination movie title fix

Comments are closed.